ಪ್ರತಿಯೊಬ್ಬರೂ ಜಾಗೃತರಾದರೆ ಮಾತ್ರ ಕೊರೊನಾ ಹಿಮ್ಮೆಟ್ಟಿಸಬಹುದು-ಶಶಿಕಲಾ ಸುರೇಶ್ ಬಾಬು..

ಚಂದ್ರವಳ್ಳಿ ನ್ಯೂಸ್  ಹಿರಿಯೂರು

  ಕೊರೊನಾ ವೈರಸ್ ತಡೆಗಟ್ಟಲು ಬುಧವಾರ  ಮಸ್ಕಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು ಅವರು ಯರಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ವಿರುದ್ಧ ಜನ ಜಾಗೃತಿ ಮೂಡಿಸಿದರು.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.  ಮುಂಜಾಗ್ರತಾ ಕ್ರಮವಾಗಿ ಮಸ್ಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಿಸಲಾಗುತ್ತದೆ. ಈಗಾಗಲೇ ಹಲವು ಹಳ್ಳಿಗಳಿಗೆ ಸಿಂಪರಣೆ ಮಾಡಲಾಗಿದ್ದು ಶೀಘ್ರದಲ್ಲಿ ಎಲ್ಲ ಹಳ್ಳಿಗಳಿಗೂ ಕ್ರಿಮಿನಾಶಕ ಸಿಂಪಡಿಸಲಾಗುವುದು ಎಂದು ಅವರು ಹೇಳಿದರು.

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಮನೆಯಿಂದ ಹೊರಗಡೆ ಹೋದಲ್ಲಿ ಮಾಸ್ಕ್ ಧರಿಸಬೇಕು. ಗ್ರಾಮದ ಹೋಟೆಲ್, ಅಂಗಡಿ ಹತ್ತಿರ, ದೇವಸ್ಥಾನಗಳಲ್ಲಿ ಗುಂಪು ಸೇರಬಾರದು, ಮನೆಯಿಂದ ಹೊರ ಬರದ ಹಾಗೆ ಹಾಗೂ ಚಿಕ್ಕಮಕ್ಕಳು ವಯೋವೃದ್ಧರನ್ನು ಅತಿ ಸೂಕ್ಷ್ಮವಾಗಿ ನೋಡಿಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್. ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ರಂಗನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ತಿಪ್ಪೇಸ್ವಾಮಿ, ಪಿಡಿಒ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: