ಫೀವರ್ ಕ್ಲಿನಿಕ್‍ಗಳಲ್ಲಿ ಜನರಿಗೆ ಜ್ವರ ತಪಾಸಣೆ


ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಎಚ್ಚರ ವಹಿಸುವ ಸಲುವಾಗಿ ಮುಂಜಾಗ್ರತಾ ಕ್ರಮದಿಂದ ಸಾಮಾನ್ಯ ಜ್ವರ ತೊಂದರೆ ತಪಾಸಣೆಗಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ 12 ಫೀವರ್ ಕ್ಲಿನಿಕ್‍ಗಳಲ್ಲಿ ಗುರುವಾರದಂದು 177 ಜನರು ಜ್ವರ ಕುರಿತು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, ಈವರೆಗೆ ಒಟ್ಟು 1595 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

     ಜ್ವರ ಇದ್ದಲ್ಲಿ ಕೂಡಲೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಾದ್ಯಂತ ಒಟ್ಟು 12 ಫೀವರ್ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗಿತ್ತು.  ಹಿರಿಯೂರು ತಾಲ್ಲೂಕು ಐಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೆ 334 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.  

ಹಿರಿಯೂರಿನ ತನ್ಯಾಸಿ ಗೌಂಡರ್ ಸಮುದಾಯ ಭವನದಲ್ಲಿ 109, ಚಳ್ಳಕೆರೆಯ ಛೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿನ ಫೀವರ್ ಕ್ಲಿನಿಕ್‍ನಲ್ಲಿ 118. ಪರಶುರಾಂಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ 113, ಹೊಸದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ 51, ಶ್ರೀರಾಂಪುರದ ಸಿಹೆಚ್‍ಸಿ ಕಟ್ಟಡದಲ್ಲಿ 23,  ಹೊಳಲ್ಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ 177, ಮೊಳಕಾಲ್ಮೂರು ತಾಲ್ಲೂಕು ರಾಂಪುರದ ಪತಿ ಬಸಪ್ಪ ಚೌಲ್ಟ್ರಿಯಲ್ಲಿನ ಫೀವರ್ ಕ್ಲಿನಿಕ್‍ನಲ್ಲಿ 113,  ಮೊಳಕಾಲ್ಮೂರಿನ ಗುರುಭವನದಲ್ಲಿ 62. ಚಿತ್ರದುರ್ಗದ ಎಸ್‍ಜೆಎಂ ಕಲಾ ಕಾಲೇಜಿನ ಫೀವರ್ ಕ್ಲಿನಿಕ್‍ನಲ್ಲಿ 47, ಭೀಮಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 342 ಹಾಗೂ ನಗರದ ಬಸವೇಶ್ವರ ಹಾಸ್ಪಿಟಲ್‍ನಲ್ಲಿ 106 ಸೇರಿದಂತೆ 1595 ಜನ ಜ್ವರ ಸಂಬಂಧ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ಫೀವರ್ ಕ್ಲಿನಿಕ್‍ನ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: