ಕೊರೊನಾ ವೈರಸ್ ತಡೆಗಟ್ಟಲು ಆರೋಗ್ಯ ಸಚಿವರು ವಿಫಲಃಡಾ.ಯೋಗೇಶ್ ಬಾಬು

ಚಂದ್ರವಳ್ಳಿ ನ್ಯೂಸ್ ಚಳ್ಳಕೆರೆ  

ಕೊರೊನಾ ವೈರಸ್ ತಡೆಗಟ್ಟಲು ವಿಫಲವಾಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲೂ ಆರೋಗ್ಯ ಇಲಾಖೆಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ  ಹಳ್ಳಿ ಜನರಿಗೆ ಸಾಮಾನ್ಯ ಔಷಧ, ಮಾತ್ರೆ ಸಿಗದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಯೋಗೇಶ್ ಬಾಬು ಗಂಭೀರ ಅರೋಪ ಮಾಡಿದ್ದಾರೆ.

ಚಳ್ಳಕೆರೆ ತಾಲೂಕಿನ ಗಡಿ ಭಾಗ ಓಬಳಾಪುರದಲ್ಲಿ ತೆರೆದಿರುವ ಸಂಚಾರ ಆರೋಗ್ಯ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿದ ಅವರು, ಸಂಚಾರ ಘಟಕವನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ಆರಂಭ ಮಾಡಲಾಗಿದೆ. ಇಲ್ಲಿನ ಸಿಬ್ಬಂದಿಗೆ ಮತ್ತು ಬರುವ ರೋಗಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲ. ಜ್ವರ, ಕೆಮ್ಮು, ನೆಗಡೆ ಸಮಸ್ಯೆಗೂ ಮಾತ್ರೆ, ಔಷಧ ಇಲ್ಲ. ಘಟಕಕ್ಕೆ ವೈದ್ಯರನ್ನು ನೇಮಕ ಮಾಡದೆ ಕೇವಲ ಒಬ್ಬ ನರ್ಸ್ ಮತ್ತು ಡಿ ಗ್ರೂಪ್ ನಿಯೋಜನೆ ಮಾಡಲಾಗಿದೆ ಎಂದು ದೂರಿದರು.

ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆ ಸಂಪೂರ್ಣ ನಿರ್ಲಕ್ಷ ಮಾಡಿರುವುದಕ್ಕೆ ಈ ಘಟಕದ ಅವ್ಯವಸ್ಥೆಯೆ ಆಧಾರ ಎಂದು ದೂರಿದ್ದಾರೆ. ಇಲ್ಲಿನ ಪಾತಪ್ಪನ ಗುಡಿ ನಿವಾಸಿ ಚಿಕ್ಕಣ್ಣ(೬೫) ಎಂಬಾತ ೬ ದಿನಗಳ ಹಿಂದೆ ಸರಿಯಾದ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಹುಳ ಕಡಿಸಿಕೊಂಡಿದ್ದ ಚಿಕ್ಕಣ್ಣನನ್ನು ಜಾಜೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಚಳ್ಳಕೆರೆಗೆ ಕಳುಹಿಸಿಕೊಡಲಾಗಿದೆ. ಚಳ್ಳಕೆರೆ ಸಾರ್ವಜನಿಕ ಆಸ್ವತ್ರೆಯಲ್ಲಿ ಸರಿಯಾದ ಚಿಕಿತ್ಸೆ ಮಾಡದೆ ಚಿತ್ರದುರ್ಗಕ್ಕೆ ಹೋಗಲು ಸೂಚಿಸಲಾಗಿದೆ. ಅಷ್ಟರಲ್ಲಿ ಮೃತಪಟ್ಟಿದ್ದಾನೆ. ಇದಕ್ಕೆ ಆರೋಗ್ಯ ಇಲಾಖೆಯ ವೈಪಲ್ಯ ಕಾರಣ. ಸಚಿವ ಬಿ.ಶ್ರೀರಾಮುಲು ಸಾವಿನ ಹೊಣೆ ಹೊರಬೇಕಾಗಿದೆ ಎಂದು ಆಗ್ರಹಿಸಿದರು.

ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಸ್ಥಾಪಿಸುರುವ ಆರೋಗ್ಯ ಘಟಕಗಳಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 ತಾ.ಪಂ ಸದಸ್ಯ ತಿಮ್ಮಾರೆಡ್ಡಿ, ಮುಖಂಡರಾದ ಎಲ್‌ಐಸಿ ತಿಪ್ಪೇಸ್ವಾಮಿ, ವಕೀಲ ಅಶೋಕ, ಎಂ ದೇವಪುತ್ರ, ಪಾತಪ್ಪನಗುಡಿ ಚಿತ್ತಪ್ಪ ಮತ್ತಿತರರು ಇದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: