ನಾನು ರಾಜಕಾರಣ ಮಾಡಲು ಬಂದಿಲ್ಲ, ಇದನ್ನೆಲ್ಲಾ ನೋಡಿ ಮನೇಲಿ ಕೂರೋಕೂ ಆಗ್ತಿಲ್ಲ; ಎಚ್.ಡಿ.ದೇವೇಗೌಡ

ಚಂದ್ರವಳ್ಳಿ ನ್ಯೂಸ್ ಹಾಸನ

ಕೊರೊನಾ ವೈರಸ್ ಹರಡುವಿಕೆ ಕುರಿತು ಸೋಮವಾರ ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿ, ನಮ್ಮ ಹುಡುಗ ಎಮ್‌ಪಿಗೂ ಪೋನ್ ಮಾಡಿ ವಿಚಾರಿಸಿದೆ. ವ್ಯವಸ್ಥೆ ಸಫರಿಂಗ್ ಹಂತಕ್ಕೆ ಸ್ಥಿತಿ ತಲುಪುತ್ತಿದೆ. ಪ್ರೈಂ ಮಿನಿಸ್ಟರ್ ಒಮ್ಮೆ ನನಗೆ ಪೋನ್ ಮಾಡಿದ್ರು. ನೀವು ಹಿರಿಯರಿದ್ದೀರಿ, ಈ ಸ್ಥಾನದಲ್ಲಿ ಕೂತಿದ್ದೀರಿ. ನಿಮ್ಮ ಸಲಹೆ ತಿಳಿಸಿ ಎಂದು ಕೇಳಿದ್ದರು.

ಇದರಲ್ಲಿ ರಾಜಕೀಯ ಮಾಡ್ಬಾರ್ದು ಅಂತ ನನಗೆ ತಿಳಿದಿದ್ದು ಹೇಳಿದೆ. ಕೇಂದ್ರ ಹೇಳಿದಕ್ಕೂ ರಾಜ್ಯ ಸರ್ಕಾರ ನಡೆದುಕೊಳ್ಳೊವುದಕ್ಕೂ ವ್ಯತ್ಯಾಸ ಇದೆ. ಯಡಿಯೂರಪ್ಪನವರ ಬಳಿಯೂ ಹಣ ಇಲ್ಲ. ಇದನ್ನೆಲ್ಲಾ ನೋಡಿ ನಾನು ಮನೇಲಿ ಕೂರೊಕ್ಕೂ ಆಗ್ತಿಲ್ಲ. ನಮ್ಮ ಹುಡುಗರು ಕಿಟ್ ಹಂಚ್ತಿದ್ದಾರೆ. ಇದರಿಂದ ಸಮಸ್ಯೆ ಸಂಪೂರ್ಣ ಬಗೆ ಹರಿಸಲು ಆಗಲ್ಲ. ಹಾಸನದಲ್ಲಿ ವಾಸ್ತವ ಅಂಶ ತಿಳಿಯಲು ಬಂದಿದ್ದೇನೆ ಎಂದರು.

ಕೊರೊನಾ ಬಗ್ಗೆ ಪ್ರಧಾನಿ ಬಿಗಿ ಕ್ರಮ ಕೈಗೊಂಡಿದ್ದಾರೆ. ಕೊರೊನಾ ಓಡಿಸಬೇಕೆಂದು ಚಪ್ಪಾಳೆ ತಟ್ಟಿದ್ದನ್ನ, ಕ್ಯಾಂಡಲ್ ಹಚ್ಚಿದ್ದನ್ನ ನೋಡಿದೆ. ದೇಶ ಇಂತ ಕೆಟ್ಟ ಸ್ಥಿತಿ ತಲುಪಿದನ್ನ ನಾನು ಎಂದೂ ನೋಡಿಲ್ಲ. ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಹೆಚ್ಚಿನ ಮಾಹಿತಿ ನಿಮ್ಮಿಂದಲೇ(ಮಾಧ್ಯಮದಿಂದ) ಸಂಗ್ರಹಿಸಬೇಕು ಎಂದರು.

ಡಿಸಿ ಅವರಿಗೆ ಕಾಲ್ ಮಾಡಿದ್ದೆ. ಶಾಸಕರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿದ್ದೇವೆ ಎಂದು ಡಿಸಿ ತಿಳಿಸಿದ್ದಾರೆ. ಕಾರ್ಡ್ ಇಲ್ಲದ ಬಡವರಿಗೆ ಶಾಸಕರ ರೆಕ್ಮೆಂಡ್ ಮೇಲೆ ಪಡಿತರ ನೀಡುತ್ತವೆ ಎಂದು ಹೆಳಿದ್ದಾರೆ. ಶಾಸಕರು ಎಷ್ಟು ರೆಕ್ಮೆಂಡ್ ಮಾಡಲು ಸಾಧ್ಯ. ಒಂದು ವಾರ್ಡಲ್ಲಿ ಕಾರ್ಪೋರೆಟರ್ ದವಸ ಹಂಚಲು ಹೋದ್ರೆ ಅಡ್ಡಿ ಪಡಿಸಿದ್ದಾರೆ. ನಾನು ಡಿಸಿಪಿಗೆ ಕಾಲ್ ಮಾಡಿ ನಿಮ್ಮ ಸರ್ಕಾರ ಮಾಡೋದನ್ನ ಅವರು ಮಾಡ್ತಿದ್ದಾರೆ ಬಿಡಿ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: