ಸ್ವಚ್ಛತೆ ಮರೆತ ಅಧಿಕಾರಿಗಳು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು…
ಚಳ್ಳಕೆರೆ
ಕೊರೊನಾ ಸೋಂಕು ಇದೆ, ಡೆಂಘಿ ಜ್ವರ ಇದೆ, ಮನೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿ, ಸೊಳ್ಳೆಗಳ ನಿಯಂತ್ರಣ ಮಾಡಿ ಎನ್ನುವುದು ಆರೋಗ್ಯ ಇಲಾಖೆ ಆದರೆ ಗ್ರಾಮ ಪಂಚಾಯಿತಿ ಅವರು ಇದು ನಮಗೆ ಸಂಬಂಧವಿಲ್ಲದ ಕೆಲಸ ಎನ್ನುವ ಊದಾಸೀನದಿಂದಾಗಿ ಸಾಂಕ್ರಾಮಿಕ ರೋಗಗಳು ತಲೆ ಎತ್ತುವ ಹಂತಕ್ಕೆ ಬಂದಿದೆ ಎಂದು ಗ್ರಾಮದ ನಿವಾಸಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಅಧಿಕಾರಿಗಳುಸ್ವಚ್ಛತೆ ಮಾಡಿಸುವುದನ್ನು ಮರೆತಿರುವುದರಿಂದ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು ಬದುಕುವಂತಾಗಿದೆ.
ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ರಂಗವ್ವನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಾಲೋನಿಯಲ್ಲಿ ಚರಂಡಿ ನೀರು ರಸ್ತೆ ಮಧ್ಯ ಮತ್ತು ಮನೆಯ ಮುಂದೆಯೇ ಹರಿಯುತ್ತಿದ್ದು, ನಿವಾಸಿಗಳು ರೋಸಿ ಹೋಗಿದ್ದಾರೆ.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಶಿಧರ ನಿರ್ಲಕ್ಷೆಯೇ ಇದಕ್ಕೆ ಕಾರಣವಾಗಿದ್ದು, ರಸ್ತೆ ಮಧ್ಯದಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಇದನ್ನು ಎಸ್.ಸಿ ಎಸ್ ಟಿ ಕಾಲೋನಿಯ ನಿವಾಸಿಗಳು ಪ್ರಶ್ನಿಸಿದರೆ ಪಿಡಿಓ. ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಮಾಜಿ ಗ್ರಾ.ಪಂ ಸದಸ್ಯ ಡಿ.ತಿಪ್ಪೇಸ್ವಾಮಿ, ರಂಗವ್ವನಹಳ್ಳಿ ಗ್ರಾಮದ ಮುಖಂಡ ಆರ್.ತಿಪ್ಪೇಸ್ವಾಮಿ ಇವರುಗಳು ದೂರಿದ್ದಾರೆ.