ಕುಡುಕರ ಹಾವಳಿ ತಪ್ಪಿಸಿ, ಸ್ವಚ್ಛತೆ ಕಾಪಾಡಿ-ಉಡುಪಿ ನಾಗರಿಕರ ಒತ್ತಾಯ…

ಉಡುಪಿಃ 

ಅಜ್ಜರಕಾಡು ಉದ್ಯಾನವನದಲ್ಲಿ ಮತ್ತು ಸಮೀಪದ ಯುದ್ಧ ಸ್ಮಾರಕದ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ತಂಡ ಸ್ವಚ್ಛ ಭಾರತ್ ಫ್ರೆಂಡ್ಸ್, ಕ್ಲೀನ್ ಉಡುಪಿ ಪ್ರಾಜೆಕ್ಟ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ ಪ್ರತಿವಾರ ಸ್ವಚ್ಛತಾ ಅಭಿಯಾನ ಹಾಗೂ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ. 

ವಿವಿಧ ದಿನಾಚರಣೆಗಳ ಸಮಯ ಕರಪತ್ರದ ಮೂಲಕ ಇಲ್ಲಿಯ ಜನರಿಗೆ ಅರಿವು ಮೂಡಿಸಿದ್ದೇವೆ. ಪ್ರತಿ ವರ್ಷವೂ ಕಾರ್ಗಿಲ್ ವಿಜಯ್ ದಿವಸ್ ಮಾಜಿ ಸೈನಿಕರ ಜೊತೆಗೆ ಸೇರಿಕೊಂಡು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರನ್ನು ಗುರುತಿಸಿ ಅವರನ್ನು ಗೌರವಿಸುತ್ತಿದ್ದೇವೆ. 

ನೂತನ ಕಾಂಕ್ರಿಟ್ ಬೆಂಚುಗಳನ್ನು ಈಗಾಗಲೇ ಸೈನಿಕ ಸ್ಮಾರಕದ ಎದುರು ನಮ್ಮ ಸಂಘಟನೆಗಳ ನೇತೃತ್ವದಲ್ಲಿ ಡಾ. ಆರ್. ಎನ್. ಭಟ್ ಅವರ ಸಹಕಾರದಿಂದ ಅಳವಡಿಸಲಾಗಿದೆ. ಒಂದು ರೀತಿಯಲ್ಲಿ ನಮ್ಮ ಎರಡನೆಯ ಮನೆಯ ಹಾಗೆ ಅಜ್ಜರಕಾಡು ಉದ್ಯಾನವನ ಆಗಿದೆ. 

ಆದರೆ ಈ ಪರಿಸರದಲ್ಲಿ ಮದ್ಯ ವ್ಯಸನಿಗಳ ಹಾವಳಿ ಮಿತಿ ಮೀರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಾವಿರಾರು ರೂಪಾಯಿ ವ್ಯಯಿಸಿ ಕುಡಿದು ಇಲ್ಲಿಯ ಪರಿಸರದಲ್ಲಿ ಮನಸ್ಸಿಗೆ ಬಂದ ಹಾಗೆ ಬಾಟಲ್ ಗಳನ್ನು ಬಿಸಾಡುತ್ತಾರೆ. ಉಡುಪಿ ನಗರಸಭೆಯು ನಮ್ಮ ಅಭಿಯಾನಕ್ಕೆ ಪೂರ್ತಿ ಸಹಕರಿಸುತ್ತಿದೆ. ಆದರೆ ಇಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಸಮಾಜಘಾತಕ ಶಕ್ತಿಗಳು ಈ ಪರಿಸರದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. 

ಅಜ್ಜರಕಾಡಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಅಳವಡಿಸಬೇಕು ಮತ್ತು ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು ಎಂಬ ಮನವಿಯನ್ನು ಇಂದು ಸಂಜೆ ನಾವು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಲ್ಲಿಸಿದೆವು. ಅಲ್ಲಿಂದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಉಡುಪಿ ಜಿಲ್ಲಾಧಿಕಾರಿಯವರಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದಾಗ ಅಪರ ಜಿಲ್ಲಾಧಿಕಾರಿಗಳು ತಕ್ಷಣ ಸಂಬಂಧಪಟ್ಟ ಅಧಿಕಾರಿಯವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದರು. ಪೊಲೀಸ್ ಬೀಟ್ ವ್ಯವಸ್ಥೆ ಮಾಡಲು ಪ್ರಯತ್ನಿಸುವ ಬಗ್ಗೆ ನಮಗೆ ಭರವಸೆ ನೀಡಿದರು.

 ಅಲ್ಲಿಂದ ನಾವು ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದೆವು. ಸಕಾರಾತ್ಮಕವಾಗಿ ಸ್ಪಂದಿಸಿದ ಪೌರಾಯುಕ್ತರು ಮುಂದಿನ ದಿನಗಳಲ್ಲಿ ನಮ್ಮ ತಂಡದ ಕಾರ್ಯಚಟುವಟಿಕೆಗಳಿಗೆ ನಗರಸಭೆಯ ವತಿಯಿಂದ ಸಹಕಾರವನ್ನು ನೀಡುವುದಾಗಿ ಹೇಳಿದರು.

ಅಲ್ಲಿಂದ ಅಜ್ಜರಕಾಡಿಗೆ ತೆರಳಿ ಯುದ್ಧ ಸ್ಮಾರಕದ ಸುತ್ತಮುತ್ತಲಿನ ಪರಿಸರದಲ್ಲಿ ಮೂವತ್ತು ನಿಮಿಷಗಳ ಕಾಲ ಶ್ರಮದಾನ ಮಾಡಿ ಕೆಲವು ಸಸಿಗಳನ್ನು ನೆಡಲಾಯಿತು.

 ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ಮಾಜಿ ಸೈನಿಕರಾದ ವಾದಿರಾಜ್ ಹೆಗ್ಡೆ, ವೀಕ್ಷಿತ್, ನೆಹಲ್ ಕುಂದರ್ ಉಪಸ್ಥಿತರಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: