ಶಿಕ್ಷಕರ ವರ್ಗಾವಣೆ; ನ.21 ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ…
ಮಡಿಕೇರಿ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ-2020-21 ನೇ ಸಾಲಿನ ಪ್ರಕ್ರಿಯೆಗಳು ನವೆಂಬರ್, 17 ರಿಂದ ಪ್ರಾರಂಭಗೊಂಡಿದೆ. ನಿರ್ದಿಷ್ಟ ಹುದ್ದೆಗಳಲ್ಲಿ ಸತತ 3/ 5 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರ ಪಟ್ಟಿ ಹಾಗೂ ಕಳೆದ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಕಡ್ಡಾಯ ವರ್ಗಾವಣೆ ಹೊಂದಿದ ಶಿಕ್ಷಕರ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿತ ಶಿಕ್ಷಕರು ಪಟ್ಟಿ ವೀಕ್ಷಿಸಬಹುದಾಗಿದೆ. ಶಿಕ್ಷಕರು ವರ್ಗಾವಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಸಲ್ಲಿಸಬೇಕಾದಲ್ಲಿ ನವೆಂಬರ್, 21 ರವರೆಗೆ ಅವಕಾಶವಿದ್ದು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನಿರ್ದಿಷ್ಟ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕನಿಷ್ಟ (3) ವರ್ಷ ಅವಧಿ ಪೂರೈಸಿದ ಹಾಗೂ ಗರಿಷ್ಟ (5) ವರ್ಷ ಅವಧಿ ಪೂರೈಸಿದ ಶಿಕ್ಷಕರು ಇಚ್ಚಿಸಿದ್ದಲ್ಲಿ ವರ್ಗಾವಣೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್, 30 ರವರೆಗೆ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು. ಶಿಕ್ಷಕರ ವರ್ಗಾವಣೆ ಜಿಲ್ಲಾ ನೋಡಲ್ ಅಧಿಕಾರಿಗಳು ಗಂಗಮ್ಮ ದೂರವಾಣಿ ಸಂಖ್ಯೆ:9686891912, ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ ಮಡಿಕೇರಿ: 9480695260/ ಸೋಮವಾರಪೇಟೆ :9480695261/ ವಿರಾಜಪೇಟೆ : 9480695262 ನ್ನು ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪೆರಿಗ್ರಿನ್ ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ.