ಮಧ್ಯರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ
ಹಾಗು ಸಂಪುಟ ಸಹೋದ್ಯೋಗಿಗಳ ಭೇಟಿ ಮಾಡಿಲ್ಲ-ಡಿ.ಕೆ.ಶಿವಕುಮಾರ್….

ಬೆಂಗಳೂರು

ಮಧ್ಯರಾತ್ರಿಯಲ್ಲಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ
ಹಾಗು ಸಂಪುಟ ಸಹೋದ್ಯೋಗಿಗಳ ಭೇಟಿ ಮಾಡಿಲ್ಲ, ಒಂದು ವೇಳೆ ಭೇಟಿ ಮಾಡಿದ್ದನ್ನು
ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ
ಹೆಚ್.ಡಿ.ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲೆಸೆದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ನಿನ್ನೆ ಬಂದ್ ವೇಳೆ ಹಸಿರು ಶಾಲು ಧರಿಸಿ ರೈತರ
ಪರ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ನೀಡಿದ್ದೆ
ನಮ್ಮ ಇಡೀ ಪಕ್ಷ ರೈತರಿತೆ ಬೆಂಬಲ ನೀಡಿತ್ತು.ಆದರೆ ಅದನ್ನು ಕುಮಾರಸ್ವಾಮಿ ಟೀಕಿ
ಸಿದ್ದಾರೆ.ಕಾಂಗ್ರೆಸ್ ಶಾಲಿಗೆ ಶಕ್ತಿ ಹೋಗಿದೆ.ವ್ಯಾಲ್ಯೂ ಇಲ್ಲ ಅದಕ್ಕೆ ಹಸರು ಶಾಲು ಧರಿಸಿ
ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿ ದ್ದಾರೆ.ನಾನು ರಾಜ್ಯ ಕಾಂಗ್ರೆಸ್
ಅಧ್ಯಕ್ಷನಾಗಿ,ಕಾರ್ಯಕರ್ತನಾಗಿ ಈ ಶಾಲು ಮತ್ತು ಪಕ್ಷದ, ಧ್ವಜವನ್ನು ಹೀನಾಯವಾಗಿ
ಬೈಸಿಕೊಂಡು ಗೌರವ ಹಾಳುಮಾಡಲು ಸಿದ್ದ ಇಲ್ಲ,ಇದೇ ಶಾಲು ದೇಶಕ್ಕೆ ಸ್ವಾತಂತ್ರ್ಯ
ತಂದುಕೊಟ್ಟಿದೆ ಇಂದು ಪ್ರಧಾನ ಮಂತ್ರಿ,ಮುಖ್ಯಮಂತ್ರಿಗಳನ್ನು ಸೃಷ್ಟಿಸಿದೆ ಎಂದು
ತಿರುಗೇಟು ನೀಡಿದರು.
ಮಧ್ಯರಾತ್ರಿ ಹೋಗಿ‌ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ ಎಂದು ಆರೋಪ
ಮಾಡಿದ್ದಾರೆ.ಕುಮಾರಸ್ವಾಮಿ ಕೂಡ ಹಿಂದೆ ಮುಖ್ಯಮಂತ್ರಿ ಆದವರು ಈ ರೀತಿ ಆರೋಪ
ಮಾಡುವುದು ಸರಿಯಲ್ಲ,ಯಡಿಯೂರಪ್ಪ ಅಥವಾ ಯಾವುದೇ ಸಚಿವರನ್ನು ಮಧ್ಯರಾತ್ರಿ
ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ
ಪಡೆಯುವುದಾಗಿ ಪ್ರಕಟಿಸಿದರು.
ಹಿಂದೆ ಸಿಎಂ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಇಬ್ಬರೂ ಒಂದೇ ವಿಮಾನದಲ್ಲಿ ವಿಮಾನ
ಪ್ರಯಾಣ ಮಾಡಿದ್ದೆವು.ಇಂದು ವಿಮಾನದಲ್ಲಿ ಪ್ರಯಾಣಿಸಿದಾಗ ಕುಶಲೋಪರಿ ಸಹಜ ಆದರೆ
ಇಲ್ಲಿ ಅದಕ್ಕೆ ಬೇರೆ ಬಣ್ಣ ಕಟ್ಟಲಾಗಿತ್ತು. ಕದ್ದುಮುಚ್ಚಿ ರಾಜಕೀಯ ಮಾಡುವ ನೀಚ ರಾಜ
ಕಾರಣ ನನ್ನ ರಕ್ತದಲ್ಲಿ ಇಲ್ಲ,ಕುಮಾರಸ್ವಾಮಿ ಅವರಿಗೆ ಪೊಲಿಟಿಕಲ್ ಪ್ರಾಬ್ಲಂ
ಇರಬಹುದು ನನಗೇನು ಪೊಲಿಟಿಕಲ್ ಪ್ರಾಬ್ಲಂ ಇಲ್ಲ.ನಿಮ್ಮ ಬಗ್ಗೆ ಗೌರವ ಇದೆ,ಇನ್ನು
ಕೈಕೆಳಗೆ ಕೆಲಸ ಮಾಡಿದ್ದೇನೆ.ನಿಮಗೆ ಗೌರವ ಕೊಡಲಿದ್ದೇವೆ ಆದರೆ ನಮ್ಮ ಪಕ್ಷದ ಹಾಗು
ನನ್ನ ವೈಯಕ್ತಿಕ‌ ಸ್ವಾಭಿಮಾನ ಮಾರಿಕೊಳ್ಳಲು ಸಿದ್ದ‌ನಿಲ್ಲ ಎಂದು ಹೆಚ್ಡಿಕೆಗೆ ಡಿಕೆ
ಶಿವಕುಮಾರ್ ಟಾಂಗ್ ನೀಡಿದರು.

What’s your Reaction?
+1
0
+1
0
+1
1
+1
1
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: