ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷರ ವರ್ಗವಾರು ಸಂಖ್ಯೆಗಳ ಹುದ್ದೆ ಮೀಸಲಾತಿ ಆಯ್ಕೆಗೆ ಸಭೆ…
ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷರ ವರ್ಗವಾರು ಸಂಖ್ಯೆಗಳ ಹುದ್ದೆ ಮೀಸಲಾತಿ ಆಯ್ಕೆಗೆ ಸಭೆ…
ಹಾವೇರಿ:
ರಾಜ್ಯ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಹಾವೇರಿ ಜಿಲ್ಲೆಯಲ್ಲಿ ಚುನಾವಣೆ ಜರುಗಿದ ಒಟ್ಟು 209 ಗ್ರಾಮ ಪಂಚಾಯತಿ ಹಾಗೂ ಅವಧಿ ಮುಕ್ತಾಯವಾಗದೇ ಇರುವ 14 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ವರ್ಗವಾರು ಸಂಖ್ಯೆಗಳನ್ನು ನಿಗಧಿಪಡಿಸಿರುತ್ತದೆ.
ಈ ಹಿನ್ನಲೆಯಲ್ಲಿ ಜಿಲ್ಲೆಯ ಎಂಟು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಕೇಂದ್ರಗಳಲ್ಲಿ 223 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ಆಯ್ಕೆಯಾದ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಿಗಧಿಪಡಿಸಲು ಸಮಯ ನಿಗಧಿಪಡಿಸಲಾಗಿದೆ.
ಹಾನಗಲ್ಲ 42 ಗ್ರಾಮ ಪಂಚಾಯತಿಗಳಿಗೆ ದಿ.13-01-2021ರ ಬೆಳಿಗ್ಗೆ 10 ಗಂಟೆಯಿಂದ ಹಾನಗಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ (ಮಲ್ಲಿಗಾರ), ರಟ್ಟೀಹಳ್ಳಿ ತಾಲೂಕಿನ 19 ಗ್ರಾಮ ಪಂಚಾಯತಿಗಳಿಗೆ ದಿ.13-01-2021 ಮಧ್ಯಾಹ್ನ 2-30 ಗಂಟೆಯಿಂದ ರಟ್ಟೀಹಳ್ಳಿಯ ವೀರಭದ್ರೇಶ್ವರ ಸಮುದಾಯ ಭವನದಲ್ಲಿ, ರಾಣೇಬೆನ್ನೂರ ತಾಲೂಕಿನ 40 ಗ್ರಾಮ ಪಂಚಾಯತಿಗಳಿಗೆ ದಿ:15-01-2021 ಬೆಳಿಗ್ಗೆ 10.00 ಗಂಟೆಯಿಂದ ರಾಣೇಬೆನ್ನೂನಗರದ ಸಿದ್ದೇಶ್ವರ ಕಲ್ಯಾಣ ಮಂಟಪ ಮಿನಿ ವಿಧಾನಸೌಧದ ಹತ್ತಿರ, ಹಿರೇಕೆರೂರ 19 ಗ್ರಾಮ ಪಂಚಾಯತಿಗಳಿಗೆ ದಿ:15-01-2021 ಮಧ್ಯಾಹ್ನ2-30 ಗಂಟೆಯಿಂದ ಹಿರೇಕೆರೂರು ಪಟ್ಟಣದ ಎಪಿಜಿ ಅಬ್ದುಲ್ ಕಲಂ ಸಭಾ ಭವನ ಸಿಇಎಸ್ ಆವರಣ, ಸವಣೂರ ತಾಲೂಕಿನ 21 ಗ್ರಾಮ ಪಂಚಾಯತಿಗಳಿಗೆ ಸವಣೂರ ದಿ.16-01-2021 ಬೆಳಿಗ್ಗೆ 10 ಗಂಟೆಯಿಂದ ಸವಣೂರಿನ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ, ಶಿಗ್ಗಾಂವ ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೆ ದಿ:16-01-2021 ಮಧ್ಯಾಹ್ನ 2.30 ಗಂಟೆಯಿಂದ ಶಿಗ್ಗಾಂವ ಶ್ರೀ ಸಂಗನಬಸವ ಕಲ್ಯಾಣ ಮಂಟಪ, ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತಿಗಳಿಗೆ ದಿ. 18-01-2021 ಹಾವೇರಿ ನಗರದ ಮಾಗಾವಿ ಚಿತ್ರಮಂದಿರದಲ್ಲಿ ಹಾಗೂ ಬ್ಯಾಡಗಿ ತಾಲೂಕಿನ 21 ಗ್ರಾಮ ಪಂಚಾಯತಿಗಳಿಗೆ ಬ್ಯಾಡಗಿ ಪಟ್ಟಣದ ಬಿ.ಇ.ಎ.ಎಸ್ ಮಹಾವಿದ್ಯಾಲಯದಲ್ಲಿ ಜರುಗಲಿದೆ.
ನಿಗಧಿತ ದಿನಾಂಕದಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಸಮಯಕ್ಕೆ ಸರಿಯಾಗಿ ಹಾಜರಿರಲು ಕೋರಲಾಗಿದೆ.