ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಶ್ಲಾಘನೀಯ: ಪೂರ್ಣಿಮಾ ಶ್ರೀನಿವಾಸ್… 

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಶ್ಲಾಘನೀಯ: ಪೂರ್ಣಿಮಾ ಶ್ರೀನಿವಾಸ್… 

ಹಿರಿಯೂರು: 

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕ್ಕೆ ಪ್ರತಿ ಮನೆಯಿಂದಲೂ ಸಮಾರ್ಪಣೆ ಆಗಲಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

ಅವರು ಮಂಗಳವಾರ ಸಂಜೆ ನಗರದ ಸತ್ಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಧಾರ್ಮಿಕ ಮುಖಂಡರುಗಳ ಮನೆಗೆ ಕಾರ್ಯಕರ್ತರೊಂದಿಗೆ ತೆರಳಿ ಶ್ರೀರಾಮ ಮಂದಿರ ನಿರ್ಮಾಣದ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
” ಮರ್ಯಾದ ಪುರುಷೋತ್ತಮ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಎಲ್ಲಾರಿಗೂ ತಿಳಿದ ವಿಷಯವೇ ಆಗಿದ್ದು ಆ ಭವ್ಯ ಮಂದಿರ ದೇಶದ ಸಂಸ್ಕೃತಿಯ ಪ್ರತೀಕವಾಗಿ ರಾಷ್ಟ್ರ ಮಂದಿರವಾಗಿ ನಿರ್ಮಾಣವಾಗಿ ನಿಲ್ಲುವುದರಿಂದ ಪ್ರತಿಯೊಬ್ಬರಿಂದಲೂ ಸಮಾರ್ಪಣೆಯಾಗಿ ಆ ಮಹಾನ್ ಕಾರ್ಯಕ್ಕೆ ಅಳಿಲು ಸೇವೆ ಮಾಡಿದಂತಾಗುತ್ತದೆ ಎಂದರು.
ಮುಖಂಡ ಎಂ.ಎಸ್. ರಾಘವೇಂದ್ರ ಮಾತನಾಡಿ, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಈ ದೇಶದ ಕೋಟ್ಯಾಂತರ ಜನರ ಜನರ ಕನಸಾಗಿದ್ದು ಅದು ನನಸಾಗುತ್ತಿರುವುದು ಸಂತೋಷಕ್ಕೆ ಕಾರಣವಾಗಿದೆ “ಎಂದರು. “ಪ್ರಧಾನಿ ಮೋದಿಜೀರವರು ಮಂದಿರ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಿದ ದಿನದಿಂದಲೇ ಲಕ್ಷಾಂತರ ಭಕ್ತರು ಸಮರ್ಪಣೆಗಾಗಿ ಉತ್ಸುಕರಾಗಿ ಕಾಯುತ್ತಿರುವರು ಎಂದರು.
ಅಭಿಯಾನದ ಕಾರ್ಯಕರ್ತ ಕೇಶವಮೂರ್ತಿ ಮಾತನಾಡಿ ಜನವರಿ 15 ರಿಂದ ಫೆಬ್ರವರಿ 10 ರವರೆಗೆ ನಡೆಯಲಿರುವ ಅಭಿಯಾನದಲ್ಲಿ ತಾಲ್ಲೂಕಿನ ಪ್ರತಿ ಮನೆ ಮನೆಗೂ ನೂರಾರು ಕಾರ್ಯಕರ್ತರು ತೆರಳಿ ಸಮರ್ಪಣಾ ಕಾರ್ಯದಲ್ಲಿ ತೊಡಗಲು ಸಿದ್ದಪಡಿಸಲಾಗಿದೆ ಎಂದರು.
” ಕೂಪನ್, ರಶೀದಿ, ಚೆಕ್ ಅಥವಾ ಡಿ.ಡಿ.ರೂಪದಲ್ಲಿ ಸಮರ್ಪಣೆ ಮಾಡಬಹುದಾಗಿದ್ದು ತಾಲ್ಲೂಕಿನ ಪ್ರತಿ ಮನೆಗೂ ಕಾರ್ಯಕರ್ತರು ತೆರಳಲಿದ್ದಾರೆ ” ಎಂದರು.
ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಚಾಲನೆ ನೀಡಿದ ಮೊದಲ ದಿನವೇ ಧಾರ್ಮಿಕ ಮುಖಂಡರುಗಳಾದ ಕನಕ ಟ್ರೇಡರ್ಸ್ ನ ಪ್ರವೀಣ್ 50,000, ಸೀತಮ್ಮ ಹೆಚ್. ವಿ.ಶ್ರೀನಿವಾಸ್ 50,000, ಎ.ಪಿ.ಎಂ.ಸಿ. ನಿರ್ದೇಶಕ ನಾಗರಾಜ್ 10,000, ನಗರಸಭೆ ಸದಸ್ಯೆ ಜಯವಾಣಿ ಸರವಣ 10,000, ಅಶ್ವಿನಿ ಆಟೋಮೋಬೈಲ್ಸ್ ಅನಿಲ್ ಕುಮಾರ್ 10,000, ಉದ್ಯಮಿ ಅಮರ್ ನಾಥ್ 10,000, ಶ್ರೀಧರ ಎಂಟರ್ ಪ್ರೈಸಸ್ ನ ಮಹಾಬಲೇಶ್ವರ ಶೆಟ್ಟಿ 5,000, ರೋ:ಚಂದ್ರಕೀರ್ತಿ ಗುಜ್ಜಾರ್ 5,000, ಸಮರ್ಪಿಸಿ ಅಭಿಯಾನ ಕಾರ್ಯಕ್ಕೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಅಭಿಯಾನದ ಕಾರ್ಯಕರ್ತರುಗಳಾದ ಎ.ವಿ.ಹರ್ಷ, ಎ.ರಾಘವೇಂದ್ರ, ಹೆಚ್. ವೆಂಕಟೇಶ್, ಚಿರಂಜೀವಿ, ಗಣೇಶ್ ಕದ್ರು ಹೆಚ್, ಆರ್ ಹರೀಶ್, ಸರವಣನ್, ಮಹೇಶ್ ಪಲ್ಲವ, ಸಂದೀಪ್ ಬಾಫ್ನ, ಓಂಕಾರ್, ಬಿ.ಎನ್. ತಿಪ್ಪೇಸ್ವಾಮಿ, ಶಾಸಕರ ಆಪ್ತ ಸಹಾಯಕ ನಿರಂಜನ್, ಮತ್ತಿರರು ಭಾಗವಹಿಸಿದ್ದರು.,

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: