ಬುದ್ಧ, ಬಸವ, ವಿವೇಕಾನಂದ ಹಾಗೂ ಗಾಂಧೀಜಿಯವರಂತಹ ಅದರ್ಶ ಪುರುಷರ ಜೀವನ ಮೌಲ್ಯಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಿ…

ಬುದ್ಧ, ಬಸವ, ವಿವೇಕಾನಂದ ಹಾಗೂ ಗಾಂಧೀಜಿಯವರಂತಹ ಅದರ್ಶ ಪುರುಷರ ಜೀವನ ಮೌಲ್ಯಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಿ…

ಹಿರಿಯೂರು:

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಸತ್ಸಂಗದ ಮೂಲಕ ಸಾರ್ಥಕ ಜೀವನ ಕಟ್ಟಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಇ.ಕೆ.ಗಾಯಿತ್ರಿ ಕರೆ ನೀಡಿದರು.

ಇಲ್ಲಿನ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 158ನೆ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಉಪನ್ಯಾಸ ನೀಡುತ್ತಿದ್ದ ಅವರು ಬುದ್ಧ, ಬಸವಣ್ಣ, ವಿವೇಕಾನಂದ ರ್ಹಾಗೂ ಗಾಂಧೀಜಿಯವರಂತಹ ಅದರ್ಶ ಪುರುಷರ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಅಮೂಲ್ಯ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಿ.ಧರಣೇಂದ್ರಯ್ಯ ಮಾತನಾಡಿ ಸ್ವಾಮಿ ವಿವೇಕಾನಂದ ಅವರು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಎಲ್ಲರೂ ಅವರವರ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.

ಡಾ. ಸಿದ್ಧಲಿಂಗಯ್ಯ, ಪ್ರೊ. ಹೆಚ್ ಟಿ ತಿಪ್ಪೇಸ್ವಾಮಿ, ವಿದ್ಯಾರ್ಥಿಗಳಾದ ಸುನಿಲ್, ಲಕ್ಷ್ಮಿ, ರಾಜೇಶ್ ಮುಂತಾದವರು ಮಾತಾಡಿದರು. ಡಾ. ಗಿರೀಶ್ ನಾಯಕ್, ಪ್ರೊ. ಮುರವರ್ಧನ್ ಜಿ ಎಸ್ ರಾಮಪ್ಪ, ಪುಷ್ಪಲತಾ ಆರ್, ವಿ ಪಿ ಜನಾರ್ಧನ , ಜನಾರ್ಧನ್ ಕುಮಾರ್, ಶಿವರಾಜು ಎ ಆರ್, ಬಸವರಾಜು ಟಿ ಮುಂತಾದವರು ಉಪಸ್ಥಿತರಿದ್ದರು. ಎಸ್ ಎಲ್ ಎನ್ ಮೂರ್ತಿ ನಿರೂಪಿಸಿದರು. ಓಬಳೇಶ್ ಪ್ರಾರ್ಥಿಸಿದರು. ಮಹಂತೇಶ್ ಕೆ ಹೆಚ್ ಸ್ವಾಗತಿಸಿದರು. ಹಾಗೂ ಪ್ರೊ. ಬಿ ಇ ಜಗನ್ನಾಥ್ ವಂದಿಸಿದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: