ಅಲೆಮಾರಿ ಸಮುದಾಯವಾದ ಜೋಗಿ ಮತ್ತು ಇತರೆ ಉಪಜಾತಿಯ ಸಮುದಾಯ ಗುರುತಿಸಿ ಸೌಲ ಸೌಲಭ್ಯ ನೀಡಲಾಗುತ್ತದೆ- ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ….

ಅಲೆಮಾರಿ ಸಮುದಾಯವಾದ ಜೋಗಿ ಮತ್ತು ಇತರೆ ಉಪಜಾತಿಯ ಸಮುದಾಯ ಗುರುತಿಸಿ ಸೌಲ ಸೌಲಭ್ಯ ನೀಡಲಾಗುತ್ತದೆ- ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ….

ಬೆಂಗಳೂರು:

ಬೆಂಗಳೂರಿ ನಲ್ಲಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಅವರನ್ನು ಭೇಟಿ ಮಾಡಿ ಜೋಗಿ ಸಮುದಾಯಕ್ಕೆ ಯಾವುದೇ ತರಹದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಮತ್ತು ಬಿಸಿಎಂ ಇಲಾಖೆ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದಿಂದ ಯಾವುದೇ ರೀತಿಯಾದ ಸವಲತ್ತುಗಳ ಸಿಗದೇ ವಂಚಿತರಾಗಿದ್ದಾರೆ ಎಂದು ಮನವಿ ಸಲ್ಲಿಸಲಾಯಿತು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜೋಗಿ ಸಮುದಾಯಕ್ಕೆ ಸಮುದಾಯ ಭವನ ವಿರುವುದಿಲ್ಲ. ಸಮುದಾಯಕ್ಕೆ ಸ್ವಲ್ಪ ಜಾಗವಿಲ್ಲ ಸಮುದಾಯವು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಮ್ಮ ಸಮುದಾಯದವರು ಅರ್ಜಿ ಸಲ್ಲಿಸಿದರೂ ಸಹ ಕಿರುಸಾಲ ಗಂಗಾ ಕಲ್ಯಾಣ ಇತರೆ ಸೌಲಭ್ಯಗಳು ಸಿಕ್ಕಿರುವುದಿಲ್ಲ ಎಂದು ಅಧ್ಯಕ್ಷರಲ್ಲಿ ವಿನಂತಿಸಿಕೊಳ್ಳಲಾಯಿತು.

ಜೋಗಿ ಸಮುದಾಯದ ವತಿಯಿಂದ ಸನ್ಮಾನ ಸ್ಪೀಕರಿಸಿ ಮಾತನಾಡಿದ ಕೆ.ರವೀಂದ್ರಶೆಟ್ಟಿ,  ಸಣ್ಣ ಸಣ್ಣ ಸಮುದಾಯಗಳಿಗೆ ಹೆಚ್ಚು ಒತ್ತುಕೊಟ್ಟು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜೋಗಿ ಮತ್ತು ಇತರ ಉಪಜಾತಿಯ ಸಮುದಾಯ ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರಲ್ಲೆ ಆತ್ಮಸ್ಥೈರ್ಯ ತುಂಬಿ ಜೋಗಿ ಸಮಾಜಕ್ಕೆ ಹೆಚ್ಚು ಒತ್ತು ನೀಡಿ ಮುಖ್ಯವಾಹಿನಿಗೆ ತರುವುದೇ ನಮ್ಮ ಗುರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೋಗಿ ಸಮುದಾಯದ ಮುಖಂಡರಾದ ಪ್ರತಾಪ್ ಜೋಗಿ, ರಮೇಶ್ ಜೋಗಿ, ಮದು ಜೋಗಿ, ಮಲ್ಲಿಕಾರ್ಜುನ ಜೋಗಿ, ಹುಲಗಪ್ಪ ಜೋಗಿ, ಚೇತನ್ ಜೋಗಿ, ಮಂಜುನಾಥ್, ದೀಪು ಜೋಗಿ, ಶಿವಕುಮಾರ್ ಜೋಗಿ, ರಾಮಾಂಜಿನಿ ಜೋಗಿ, ಮಲ್ಲೇಶ್ ಜೋಗಿ, ರಾಮಸ್ವಾಮಿ ಜೋಗಿ ಉಪಸ್ಥಿತರಿದ್ದರು.

What’s your Reaction?
+1
0
+1
1
+1
1
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: