ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ ದಕ್ಕಿದೆ| ಅನೇಕ ಜಿಲ್ಲೆ, ಜಾತಿಗಳಿಗೆ ಅಸ್ತಿತ್ವವೇ ಇಲ್ಲ….

ಯಡಿಯೂರಪ್ಪ ಸಂಪುಟದಲ್ಲಿ ಯಾವ ಜಾತಿಗೆ ಎಷ್ಟು ಸಚಿವ ಸ್ಥಾನ ದಕ್ಕಿದೆ| ಅನೇಕ ಜಿಲ್ಲೆ, ಜಾತಿಗಳಿಗೆ ಅಸ್ತಿತ್ವವೇ ಇಲ್ಲ….

ಬೆಂಗಳೂರು:

ಶಾಸನ ಸಭೆಗಳಿಗೆ ಸಣ್ಣಪುಟ್ಟ ಜಾತಿಗಳು ಹೋಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಜನರ ವಿಶ್ವಾಸಗಳಿಸಿ ಹೇಗೋ ಗೆದ್ದು ಶಾಸನ ಸಭೆಗಳಿಗೆ ಹೋಗಿರುವಂತಹ ವಿವಿಧ ಜಾತಿಗಳ ಶಾಸಕರುಗಳಿಗೆ ಸಚಿವ ಸ್ಥಾನವೇ ಲಭ್ಯವಾಗುವುದಿಲ್ಲ. ಇಡೀ ರಾಜಕೀಯ ಶಕ್ತಿ ಕೇಂದ್ರ ಎನ್ನುವ ಲಿಂಗಾಯಿತ, ಒಕ್ಕಲಿಗ, ಕುರುಬ ಜಾತಿಗಳೇ ನಿರ್ಣಯಕ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಎಸ್ವೈ ಸಂಪುಟದಲ್ಲಿ ಹಾಲಿ 33 ಸಚಿವರಿದ್ದು ಈ ಪೈಕಿ ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಿದೆ. ಬಹುತೇಕ ಸಮುದಾಯಗಳು ಸಚಿವ ಭಾಗ್ಯದಿಂದ ವಂಚಿತವಾಗಿವೆ. 

ಒಟ್ಟು ಶಾಸಕ ಸ್ಥಾನದ ಆಧಾರದಲ್ಲಿ ಇಂತಿಷ್ಟೇ ಸಚಿವರುಗಳು ಇರಬೇಕೆನ್ನುವ ನ್ಯಾಯಾಲಯದ ಸೂಚನೆ ಒಂದು ಕಡೆ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಬಂಪರ್ ಕೊಡುಗೆ ಸಿಕ್ಕಿದ್ದು 11 ಮಂದಿ ಸಚಿವರಾಗಿದ್ದಾರೆ. ಒಕ್ಕಲಿಗ ಸಮುದಾಯವು 7 ಸಚಿವರಾಗುವ ಮೂಲಕ ಸಿಂಹ ಪಾಲು ಪಡೆದಿದೆ. ಕುರುಬ ಸಮುದಾಯದ 4, ಪ.ಜಾತಿಗೆ ಸೇರಿದ- 4, ಪ.ಪಂಗಡಕ್ಕೆ ಸೇರಿದ – 2, ಹಿಂದುಳಿದ ವರ್ಗಗಳಿಗೆ ಸೇರಿದ- 2, ಬ್ರಾಹ್ಮಣ ಸಮುದಾಯಕ್ಕೆ ಸೇರಿದ- 2, ಜೈನ ಸಮುದಾಯದ ಒಬ್ಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಇಲ್ಲವೇ ಇಲ್ಲ, ಇನ್ನೂ ಪ್ರಾದೇಶಿಕ ಸಮಾನತೆಗೂ ಒತ್ತು ನೀಡಿಲ್ಲ. 12 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ. ಬೆಂಗಳೂರು, ಬೆಳಗಾವಿ ಜಿಲ್ಲೆಗಳಿಗೆ ಸಿಂಹ ಪಾಲು ಸಿಕ್ಕಿದೆ. 

ಸಚಿವರುಗಳು ಯಾವ ಜಾತಿಗೆ ಸೇರಿದ್ದಾರೆ-?
ಲಿಂಗಾಯತ: ಸಿಎಂ ಯಡಿಯೂರಪ್ಪ, ಡಿಸಿಎಂ ಸವದಿ, ಶೆಟ್ಟರ್, ವಿ.ಸೋಮಣ್ಣ, ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಉಮೇಶ್ ಕತ್ತಿ, ಮುರುಗೇಶ ನಿರಾಣಿ
ಒಕ್ಕಲಿಗ: ಡಿಸಿಎಂ ಡಾ. ಅಶ್ವತ್ಥನಾರಾಯಣ್, ಅಶೋಕ್, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ನಾರಾಯಣಸ್ವಾಮಿ, ಯೋಗೇಶ್ವರ್.
ಕುರುಬ: ಕೆ.ಎಸ್.ಈಶ್ವರಪ್ಪ, ಬಿ.ಎ.ಬಸವರಾಜ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್.
ಪರಿಶಿಷ್ಟ ಜಾತಿ: ಡಿಸಿಎಂ ಗೋವಿಂದ ಕಾರಜೋಳ(ಮಾದಿಗ), ಎಸ್.ಅಂಗಾರ, ಅರವಿಂದ ಲಿಂಬಾವಳಿ(ಭೋವಿ), ಪ್ರಭು ಚವ್ಹಾಣ್(ಲಂಬಾಣಿ).
ಬ್ರಾಹ್ಮಣ: ಸುರೇಶ್​ಕುಮಾರ್, ಶಿವರಾಮ ಹೆಬ್ಬಾರ್.
ಎಸ್​ಟಿ: ರಮೇಶ್ ಜಾರಕಿಹೊಳಿ, ಬಿ. ಶ್ರೀರಾಮುಲು(ಇಬ್ಬರು ನಾಯಕ).
ಹಿಂದುಳಿದ ವರ್ಗ: ಕೋಟ ಶ್ರೀನಿವಾಸಪೂಜಾರಿ (ಬಿಲ್ಲವ), ಆನಂದ ಸಿಂಗ್ (ರಜಪೂತ).
ಜೈನ: ಶ್ರೀಮಂತ ಪಾಟೀಲ್.

ಜಿಲ್ಲಾ ಪ್ರಾತಿನಿಧ್ಯ-
ಬೆಂಗಳೂರು ಜಿಲ್ಲೆಗೆ 8 ಸಚಿವ ಸ್ಥಾನ. ಬೆಳಗಾವಿ -5, ಹಾವೇರಿ -3, ಬಾಗಲಕೋಟೆ -2, ಶಿವಮೊಗ್ಗ -2, ಬೆಂ.ಗ್ರಾಮಾಂತರ -1, ರಾಮನಗರ- 1, ದಕ್ಷಿಣ ಕನ್ನಡ – 1, ಉಡುಪಿ -1, ಧಾರವಾಡ -1, ಚಿಕ್ಕಬಳ್ಳಾಪುರ -1, ಮಂಡ್ಯ -1, ಉತ್ತರ ಕನ್ನಡ -1, ಬೀದರ್ -1, ಚಿತ್ರದುರ್ಗ -1, ತುಮಕೂರು-1, ಗದಗ -1, ಬಳ್ಳಾರಿ ಜಿಲ್ಲೆಯ ಒಬ್ಬರಿಗೆ ಅವಕಾಶ ಸಿಕ್ಕಿದ್ದು ಅರ್ಧದಷ್ಟು ಜಿಲ್ಲೆಗಳಿಗೆ ಸಚಿವ ಸ್ಥಾನದ ಭಾಗ್ಯವೇ ಸಿಕ್ಕಿಲ್ಲ.

 

What’s your Reaction?
+1
0
+1
2
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: