ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಮುಟ್ಟಿಸಿ ಚಿತ್ರದುರ್ಗ, ತಮುಕೂರು ಜಿಲ್ಲೆಗಳಿಗೆ ನೀರು ಹರಿಸಿ-ಶಾಸಕರಾದ ಪೂರ್ಣಿಮಾ, ಡಾ.ಸಿ.ಎಂ.ರಾಜೇಶ್ ಗೌಡ…

ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಮುಟ್ಟಿಸಿ ಚಿತ್ರದುರ್ಗ, ತಮುಕೂರು ಜಿಲ್ಲೆಗಳಿಗೆ ನೀರು ಹರಿಸುವ ಸಭೆಯಲ್ಲಿ ಶಾಸಕರಾದ ಪೂರ್ಣಿಮಾ, ಡಾ.ಸಿ.ಎಂ.ರಾಜೇಶ್ ಗೌಡ ಭಾಗಿ…

ಹಿರಿಯೂರು:

ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸೋಮವಾರ ವಿ ವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಆಚುಕಟ್ಟುದಾರ ಹಿತರಕ್ಷಣಾ ಸಮಿತಿ ಸಭೆ ನಡೆಯಿತು.

ಈ ಸಭೆಯಲ್ಲಿ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮತ್ತು ಹಿರಿಯೂರು ವಿಧಾನಸಭಾ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು ತುರ್ತು ಕಾಮಗಾರಿ ಪೂರ್ಣಗೊಳಿಸಬೇಕು. ಚಿತ್ರದುರ್ಗ, ತುಮಕೂರು ಸೇರಿದಂತೆ ಯೋಜನಾ ವ್ಯಾಪ್ತಿಯ ಜಿಲ್ಲೆಗಳಿಗೆ ಅಗತ್ಯ ನೀರು ಪೂರೈಕೆ ಮಾಡುವಂತೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ರಾಘವನ್, ಸೂಪರಿಂಟೆಂಟ್ ಇಂಜಿನಿಯರ್ ಶಿವಪ್ರಕಾಶ್ ಹಾಗೂ ನೀರಾವರಿ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರೊಂದಿಗೆ ನಡೆದ ಭದ್ರಾಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಮತ್ತು ವಿ.ವಿ.ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಹೆಚ್.ಆರ್.ತಿಮ್ಮಯ್ಯ, ಎಸ್.ಬಿ.ಶಿವಕುಮಾರ್, ಸಿ.ಸಿದ್ದರಾಮಣ್ಣ, ಬಬ್ಬೂರು ಎಂ.ಟಿ.ಸುರೇಶ್, ಆರ್.ಕೆ.ಗೌಡ, ಬೇಲಪ್ಪ, ಪಿಟ್ಲಾಲಿ ಶಿವರಾಂ, ಪಿಟ್ಲಾಳಿ ಶ್ರೀನಿವಾಸ್, ಸಿದ್ದನಾಯಕ, ನಾರಾಣಾಚಾರ್, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.

ಭದ್ರಾದಿಂದ ವಿ ವಿ ಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರನ್ನು ನಿಲ್ಲಿಸಿದ್ದು ಕೂಡಲೇ ನೀರು ಹರಿಸಲು ಒತ್ತಾಯಿಸಲಾಯಿತು. ತುಂಗಾ ಜಲಾಶಯದಿಂದ ಭದ್ರಾ ಡ್ಯಾಂಗೆ ಪಂಪ್ ಮಾಡುವ ಪ್ಯಾಕೇಜ್ ಒಂದರ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ನೀರು ಹರಿಸುವ ವೈ-ಜಂಕ್ಷನ್ ಬಳಿಯ ತುಮಕೂರು ಬ್ರಾಂಚ್ ನಾಲೆ ಕಾಮಗಾರಿ, ಚಿತ್ರದುರ್ಗ ಬ್ರಾಂಚ್ ನಾಲೆ ಕಾಮಗಾರಿಗಳಿಗೆ ವೇಗ ನೀಡಬೇಕು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು. ವಿ ವಿ ಸಾಗರ ದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಫೆಬ್ರವರಿ-15ಕ್ಕೆ ದಿನಾಂಕ ನಿಗದಿ ಮಾಡಿಬೇಕು ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: