ಇ.ಎಸ್.ಐ, ಪಿ.ಎಫ್ ಕಟ್ಟಿ ಹೊರ ಗುತ್ತಿಗೆ ನೌಕರರು ಮತ್ತು ಸಿಬ್ಬಂದಿಗಳಿಗೆ ಸಂಬಳ ಕೊಡಿ ಸ್ವಾಮಿ, ಅವರು ಜೀವನ ಮಾಡುವುದು ಹೇಗೆ…?
ಇ.ಎಸ್.ಐ, ಪಿ.ಎಫ್ ಕಟ್ಟಿ, ಹೊರ ಗುತ್ತಿಗೆ ನೌಕರರು ಮತ್ತು ಸಿಬ್ಬಂದಿಗಳಿಗೆ ಸಂಬಳ ಕೊಡಿ ಸ್ವಾಮಿ, ಅವರು ಜೀವನ ಮಾಡುವುದು ಹೇಗೆ…?
ಚಿತ್ರದುರ್ಗ:
ಜಿಲ್ಲೆಯ ವಿವಿಧ ಇಲಾಖೆಗಳಾದ ಬಿಸಿಎಂ, ಎಸ್ಸಿ, ಎಸ್ಟಿ, ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚನ್ನಮ್ಮ
ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಮತ್ತು ಸಿಬ್ಬಂದಿಗಳಿಗೆ ಕೂಡಲೇ ವೇತನ ನೀಡಬೇಕು ಹಾಗೂ ಖುದ್ದು ಕೊರತೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯಾರ್ಥಿನಿಲಯಗಳಲ್ಲಿ ೧೦-೧೫ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆ ಮಾಡುತ್ತಾ ಬರುತ್ತಿದ್ದೆವು. ಮಹಾಮಾರಿ ಕೊರೋನಾ ರೋಗದಿಂದ ವೇತನ ನೀಡಿರುವುದಿಲ್ಲ. ಅಲ್ಲದೆ ನಮ್ಮಗಳ ಕೆಲಸಗಳ ಮೇಲೆ ಬರೆ ಎಳೆದು ನಮ್ಮಗಳ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಇಲ್ಲಿಯವರೆಗೆ ಯಾವುದೇ ರೀತಿ ಸಹಾಯವಾಗಲಿ ಕೆಲಸವಾಗಲಿ ಇರುವುದಿಲ್ಲ. ಇದರಿಂದ ಮನನೊಂದ ಕೆಲವು ಸಿಬ್ಬಂದಿಗಳು ಅನೇಕ ಸಾರಿ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ರೀತಿ ಪ್ರಯೋಜವಾಗಿರುವುದಿಲ್ಲ ತಾವುಗಳು ಇದನ್ನು ಪರಿಶೀಲಿಸಿ ಖುದ್ದಾಗಿ ಬಿಸಿಎಂ / ಎಸ್ಸಿ / ಎಸ್ಟಿ / ಮೊರಾರ್ಜಿ ದೇಸಾಯಿ / ಕಿತ್ತೂರುರಾಣಿ ಚನ್ನಮ್ಮ ವಸತಿ ನಿಲಯದ ಜಿಲ್ಲಾ ಅಧಿಕಾರಿಗಳನ್ನು ಕರೆಯಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಅಡುಗೆಯವರು ಹಾಗೂ ಅಡುಗೆ ಸಹಾಯಕರು ಹಾಗೂ ರಾತ್ರಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಏಪ್ರಿಲ್-೨೦೨೦ ರಿಂದ ಇಲ್ಲಿಯವರೆಗೆ ವೇತನ ಬಿಡುಗಡೆಯಾಗಿಯೋ ಇಲ್ಲವೋ ಎಂದು ಹಾಗೂ ಏಜೆನ್ಸಿಗಳು ಬದಲಾವಣೆಗಳು ಆಗುತ್ತಲೇ ಬರುತ್ತಿವೆ ನಮ್ಮಗಳಿಗೆ ಇ.ಎಸ್.ಐ ಮತ್ತು ಪಿ.ಎಫ್ ಕಟ್ಟಿರುವುದಿಲ್ಲ ಇದರ ಬಗ್ಗೆ ತಾವುಗಳು ಪರಿಶೀಲಿಸಬೇಕು.
ಚಿತ್ರದುರ್ಗ ಜಿಲ್ಲೆಯೂ ಬಯಲುಸೀಮೆಯಾಗಿರುವುದರಿಂದ ಇಲ್ಲಿ ಯಾವುದೇ ಸಿಬ್ಬಂದಿಗಳಿಗೆ ಕೆಲಸ ಹಾಗೂ ಜಮೀನು ಹಾಗೂ ಸ್ವಂತ ಮನೆ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಸಿಬ್ಬಂದಿಗಳನ್ನು ಬಾಡಿಗೆ ಕಟ್ಟದಿರುವುದರಿಂದ ಮನೆಯಿಂದ ಹೊರಗಡೆ ಹಾಕಿರುತ್ತಾರೆ. ನವೆಂಬರ್ ೧೭ ರಿಂದ ಶಾಲೆಗಳು ತೆರೆದಿರುತ್ತವೆ. ಮಕ್ಕಳಿಗೆ ಶಾಲೆಗೆ ಕಳುಹಿಸಲು ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದಿರುವ ಕಾರಣ ಮಕ್ಕಳನ್ನು ಶಾಲೆಗೆ ಕಳುಸಲಾಗುತ್ತಿಲ್ಲ. ಹಾಗೂ ದಿನನಿತ್ಯ ಸಾಮಾಗ್ರಿಗಳ ಬೆಲೆ ಏರುತ್ತಿರುತ್ತಿರುತ್ತದೆ ನಮ್ಮಗಳಿಗೆ ಹಣಕಾಸಿನ ಸಮಸ್ಯೆಗಳಿಂದ ಕುಟುಂಬದ ಜೀವನ ನಿಭಾಯಿಸುವುದೇ ಕಷ್ಟಕರವಾಗಿರುತ್ತದೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದುತ್ತಾ ಬರುತ್ತಿದ್ದೇವೆ ಎಂದು ನೋವು ತೋಡಿಕೊಂಡರು.-
:: ಬೇಡಿಕೆಗಳು ::
ದಿನಾಂಕ:೨೦-೦೪-೨೦೨೦ ರಿಂದ ಇಲ್ಲಿಯವರೆಗೂ ವೇತನವನ್ನು ಪಾವತಿಸಬೇಕು.
ಏಜೆನ್ಸಿ ಕಡೆಯಿಂದ ಇ.ಎಸ್.ಐ / ಪಿ.ಎಫ್ ಜಮಾ ಮಾಡಿಸಬೇಕು.
ನೇರ ನೇಮಕಾತಿಯನ್ನು ಕಡಿತಗೊಳಿಸಿ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು.
ಸಿಬ್ಬಂದಿಗಳಿಗೆ ಭದ್ರತೆ ಒದಗಿಸಬೇಕು.
ಮೇಲ್ವಿಚಾರಕರು ಹೊರಗುತ್ತಿಗೆ ಸಿಬ್ಬಂದಿಗಳಿಗೆ ತೊಂದರೆ ಕೊಡುವುದನ್ನು ತಪ್ಪಿಸಬೇಕು.
ಖಾಯಂ ನೌಕರರ ಹೊರಗುತ್ತಿಗೆ ನೌಕರರನ್ನು ಕಡೆಗಣಿಸುವುದನ್ನು ನಿಲ್ಲಿಸುವಂತೆ ಸೂಚಿಸಬೇಕು.
ಏಜೆನ್ಸಿಯನ್ನು ರದ್ದು ಮಾಡಿ ನೇರವಾಗಿ ಇಲಾಖೆಯಿಂದಲೇ ವೇತನ ನೀಡಬೇಕು.
ಒಂದು ಹಾಸ್ಟೇಲ್ನಿಂದ ಕರ್ತವ್ಯ ನಿರ್ವಹಿಸುತ್ತಿರು ಸಿಬ್ಬಂದಿಗಳನ್ನು ಬೇರೆ ಬೇರೆ ವಸತಿ ನಿಲಯಗಳಲ್ಲಿ ಬದಲಾವಣೆ ಮಾಡಬಾರದು.
ಖಾಯಂ ನೌಕರರನ್ನು ಹೊರಗುತ್ತಿಗೆ ನೌಕರರು ಇರುವಂತಹ ವಿದ್ಯಾರ್ಥಿನಿಲಯಕ್ಕೆ ನಿಯೋಜನೆ ಮಾಡುವುದನ್ನು ತಪ್ಪಿಸಬೇಕು.
ಹೊರಗುತ್ತಿಗೆ ಸಿಬ್ಬಂದಿಗಳಿಗೆ ತಿಂಗಳಿಗೆ ಎರಡು ರಜೆಗಳನ್ನು ನೀಡಬೇಕು.
ನೇರ ನೇಮಕಾತಿ ಮಾಡುವುದಕ್ಕಿಂತ ಮುಂಚೆ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮೊದಲು ಆಧ್ಯತೆ ಕೊಡಬೇಕು.
ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳನ್ನು ಅತಿತುರ್ತಾಗಿ ಕೆಲಸಕ್ಕೆ ಸೇರ್ಪಡೆಗೊಳಿಸಬೇಕು.
ಪ್ರತಿಭಟನೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ಕರಿಬಸಪ್ಪ, ರಾಜ್ಯ ಕಾರ್ಯಾಧ್ಯಕ್ಷೆ ತ್ರಿವೇಣಿ, ರಾಜ್ಯ ಉಪಾಧ್ಯಕ್ಷೆ ಜಿ.ಹೆಚ್.ರೇಖಾ, ರಾಜ್ಯ ಸಹ ಕಾರ್ಯದರ್ಶಿ ನಿರಂಜನ, ಟಿ.ಪಾಪಯ್ಯ, ಬಿ.ಮೂರ್ತಿ, ಬಿ.ಹೆಚ್.ಮಂಜುನಾಥ್, ಸೇರಿದಂತೆ ವಕೀಲರಾದ ಪ್ರತಾಪ್ ಜೋಗಿ, ಬಿ.ಕೆ.ರೆಹಮತ್ ವುಲ್ಲಾ, ಬಿ.ಟಿ.ಗಜದೀಶ್ ಮತ್ತಿತರರು ಪಾಲ್ಗೊಂಡಿದ್ದರು.