ಕೋವಿಡ್-19 ವ್ಯಾಕ್ಸಿನ್ ಸುರಕ್ಷಿತ, ಯಾವುದೇ ವ್ಯತಿರಿಕ್ತ ಪರಿಣಾಮಗಳು ಇದುವರೆಗೂ ಕಂಡುಬಂದಿಲ್ಲ: ಡಾ.ಬಿ.ವಿ.ಗಿರೀಶ್…

ಕೋವಿಡ್-19 ವ್ಯಾಕ್ಸಿನ್ ಸುರಕ್ಷಿತ, ಯಾವುದೇ ವ್ಯತಿರಿಕ್ತ ಪರಿಣಾಮಗಳು ಇದುವರೆಗೂ ಕಂಡುಬಂದಿಲ್ಲ: ಡಾ.ಬಿ.ವಿ.ಗಿರೀಶ್…

ಚಿತ್ರದುರ್ಗ:

ಕೋವಿಡ್-19 ವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ವ್ಯತಿರಿಕ್ತ ಪರಿಣಾಮಗಳು ಇದುವರೆಗೂ ಕಂಡುಬಂದಿಲ್ಲ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಇಲ್ಲಿನ ಬುದ್ಧನಗರದ ನಗರ ಅರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಧಿವೇಶನದಲ್ಲಿ ಮೊದಲಿಗರಾಗಿ ಸಾಲಿನಲ್ಲಿ ನಿಂತು ಕೋವಿಶಿಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, “ಡಿ”ದರ್ಜೆ ನೌಕರರಿಗೆ ಲಸಿಕೆ ಕೊಡಿಸಿ ಅವರು ಮಾತನಾಡಿದರು.
 ಆರೋಗ್ಯ ಸೇವೆ ಒದಗಿಸುವ ಎಲ್ಲಾ ಸಿಬ್ಬಂದಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ ಲಸಿಕೆಯನ್ನು ಪಡೆಯಿರಿ ಎಂದು ಸಲಹೆ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಕಳೆದ 15 ವರ್ಷಗಳಿಂದ ಅಧಿಕ ರಕ್ತದೊತ್ತಡ, ಮಧುಮೇಹ ರೋಗಿಯಾಗಿದ್ದು, ಕೋವಿಡ್‍ನಿಂದ ರಕ್ಷಣೆ ಪಡೆಯಲು ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದಿದ್ದು, ಯಾವುದೇ ತರಹದ ಅಡ್ಡಪರಿಣಾಮಗಳು ಸಂಭವಿಸಿಲ್ಲ ಎಂದರು.
 ಜನಸಾಮಾನ್ಯರ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಲಸಿಕೆ ಪಡೆಯಬೇಕು. ಈಗಾಗಲೇ ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷೆ ಮಾಡದೇ ಮಾಸ್ಕ್ ಧರಿಸಿ, ಕೈಗಳ ಶುಚಿತ್ವ, ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ವೈದ್ಯರಾದ ಡಾ.ವಾಣಿ, ಡಾ.ಸುಪ್ರಿತಾ, ಡಾ.ಸುರೇಂದ್ರ, ಆಶಾಕಾರ್ಯಕರ್ತೆಯರಾದ ಅರ್ಪಿತಾ, ಪೂಜಾ, ನಾಗವೇಣಿ ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗಳು ಇದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: