ಬಂಡಾಯ(ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್) ಎದ್ದವರಿಗೆ ತಕ್ಕ ಪಾಠ ಕಲಿಸಿ ನನ್ನನ್ನು ಆಯ್ಕೆ ಮಾಡಿದ ಮತದಾರ, ಅವರ ಋಣ ತೀರಿಸುವ ಕಾರ್ಯವನ್ನು ಮಾಡುವೆ, ನಾವು ಜೋಡೆತ್ತುಗಳಾಗಿ ದುಡಿಯುತ್ತೇವೆ…

ಮತದಾರ ಶಿಕ್ಷಕರು, ಪದವೀಧರರು ಬಂಡಾಯ ಎದ್ದವರಿಗೆ ತಕ್ಕ ಪಾಠ ಕಲಿಸಿ ನನ್ನನ್ನು ಆಯ್ಕೆ ಮಾಡಿದ್ದು ಅವರ ಋಣ ತೀರಿಸುವ ಕಾರ್ಯವನ್ನು ಮಾಡುವೆ, ನಾವು ಜೋಡೆತ್ತುಗಳಾಗಿ ದುಡಿಯುತ್ತೇವೆ…

ಚಿತ್ರದುರ್ಗ:

ಶಿಕ್ಷಕರು, ಪಗವೀಧರರು ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಇಟ್ಟು ಚಿದಾನಂದ ಎಂ.ಗೌಡರನ್ನು ವಿಧಾನ ಪರಿಷತ್ ಗೆ ಕಳುಹಿಸುವ ಮೂಲಕ ಪಕ್ಷದ ಬಲ ಹೆಚ್ಚಿಸಿದ್ದು ಮರೆಯಲಾಗದ ಸಂಗತಿಯಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣ ಸ್ವಾಮಿ ಹೇಳಿದರು.

ಚಿತ್ರದುರ್ಗದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಡಾ.ವೈ.ಎ.ಎನ್.ಅಭಿಮಾನಿ ಬಳಗ ರವರ ವತಿಯಿಂದ ನೂತನ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ ರವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದಲ್ಲೇ ಕೆಲವರು ಅಡ್ಡಗಾಲು ಹಾಕಿದರು. ಆದರೂ ಮತದಾರರು ನಮ್ಮ ಕೈ ಹಿಡಿದರು. ಈ ಕಾರ್ಯದಲ್ಲಿ ನಾನು, ಶಾಸಕರಾದ ತಿಪ್ಪಾರೆಡ್ಡಿ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಶಿಕ್ಷಕರು, ಪದವೀಧರರು ಸಾಕಷ್ಟು ಶ್ರಮಿಸಿದ್ದು ಮರೆಯಲಾಗುವುದಿಲ್ಲ ಎಂದು ಭಾವುಕರಾದರು. 

70 ಸಾವಿರ ಶಿಕ್ಷಕರ ವರ್ಗಾವಣೆ ಬೇಡಿಕೆ ಇದೆ, 55 ಸಾವಿರ ಶಿಕ್ಷಕರ ವರ್ಗಾವಣೆ ಆಗಿತ್ತು. ಇದರಲ್ಲಿ ಕೆಲವು ಕೋರ್ಟ್ ತಡೆಯಾಜ್ಞೆಗಳು ಮತ್ತಿತರ ಕಾರಣಗಳಿಂದ ಆಗಿಲ್ಲ, ಹಂತ ಹಂತವಾಗಿ ವರ್ಗಾವಣೆ ಆಗಲಿವೆ, ಇನ್ನೂ ಎನ್ ಪಿಎಸ್ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ವಿಧಾನ ಪರಿಷತ್ ಶಾಸಕರಾದ ಎನ್.ವೈ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ ಅವರ ಮೇಲೆ ಹೆಚ್ಟಿನ ಹೊಣೆಗಾರಿಕೆ ಇದೆ. ನಿರಂತರವಾಗಿ ಮತದಾರರಿಗೆ ಲಭ್ಯವಾಗಬೇಕು. ಮತ ನೀಡಿದವರ ಋಣ ತೀರಿಸುವ ಕಾರ್ಯ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ನೀವು ಇನ್ನೂ ಚಿಕ್ಕವರು, ಸಾಕಷ್ಟು ಸಾಧನೆ ಮಾಡುವ ಅವಕಾಶ ಇದೆ. ಚುನಾವಣೆಯಲ್ಲಿ ರಾಜಕೀಯ ಮಾಡಬೇಕು, ಮತ ಹಾಕಿದವರು, ಹಾಕದಿದ್ದವರು ಎಲ್ಲರೂ ನಮ್ಮವರೇ ಎನ್ನುವ ಸತ್ಯ ಮರೆಯಬಾರದು, ತಾರತಮ್ಯ ಇಲ್ಲದೆ ಕೆಲಸ ಮಾಡಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಸನ್ಮಾನ ಸ್ವೀಕರಿಸಿದ ಚಿದಾನಂದ ಎಮ್.ಗೌಡ, ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞನಾಗಿರುತ್ತೇನೆ, ಅಲ್ಲದೆ ಪದವೀಧರರ, ಶಿಕ್ಷಕರ ಸಮಸ್ಯೆಗಳಿಗೆ ಸದಾ ಹೋರಾಟ ಮಾಡುತ್ತೇನೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರ ಅತ್ಯಂತ ಹಿಂದುಳಿದಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ತಾಲೂಕಿನಲ್ಲಿ ಒಂದೊಂದು ಶಾಲೆಯನ್ನು ದುತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಅವರು ಭರವಸೆ ನೀಡಿದರು.

ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯ ಹಲವರ ನನ್ನ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದರು. ಆದರೆ ಮತದಾರರು ಪಕ್ಷ ಮತ್ತು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕ ಮತಗಳಿಂದ ಆಯ್ಕೆ ಮಾಡಿದ್ದಲ್ಲದೆ ಬಂಡಾಯ(ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಹೇಳದೆ) ಎದ್ದವರಿಗೆ ತಕ್ಕ ಪಾಠ ಕಲಿಸಿದರು. ಮತದಾರರನ್ನು ಅತ್ಯಂತ ಆತ್ಮ ಪೂರಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಸಿ.ಹನುಮಂತೇಗೌಡ, ಜಿಲ್ಲಾ ವಕ್ತಾರ ನಾಗರಾಜ ಬೇದ್ರೆ, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಜಿಲ್ಲೆಯ ಶಿಕ್ಷಕರ/ಉಪನ್ಯಾಸಕರ/ಪದವೀಧರ ಸಂಘಟನೆಗಳ ಅಧ್ಯಕ್ಷ ರು/ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಸಂಘ ಸಂಸ್ಥೆಯವರು, ಬಿಜೆಪಿ ವಿವಿಧ ಮೋರ್ಚಾದವರು ಚಿದಾನಂದ ಗೌಡರನ್ನು ಸನ್ಮಾನಿಸಿದರು.

What’s your Reaction?
+1
0
+1
0
+1
0
+1
0
+1
0
+1
1
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: