ರಾಷ್ಟ್ರಮಟ್ಟದ ಸ್ಕ್ವಾಯ್ ಕ್ರೀಡೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ಚಿತ್ರದುರ್ಗ ಜಿಲ್ಲೆಯ ಸವಿತಾ, ಗಿರೀಶ್, ಕಂಚಿನ ಪದಕ ಪಡೆದ ರಕ್ಷಿತಾ ಇವರಿಗೆ ಸನ್ಮಾನ…

ರಾಷ್ಟ್ರಮಟ್ಟದ ಸ್ಕ್ವಾಯ್ ಕ್ರೀಡೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ಚಿತ್ರದುರ್ಗ ಜಿಲ್ಲೆಯ ಸವಿತಾ, ಗಿರೀಶ್, ಕಂಚಿನ ಪದಕ ಪಡೆದ ರಕ್ಷಿತಾ ಇವರಿಗೆ ಸನ್ಮಾನ…

ಚಿತ್ರದುರ್ಗ:

ಸ್ಕ್ವಾಯ್ ಕ್ರೀಡೆಗೆ ಚಿತ್ರದುರ್ಗದಲ್ಲಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ತುಂಬಾ ಸಂತೋಷದ ಸಂಗತಿ. ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿಯೂ ಈ ರೀತಿಯ ಪ್ರೋತ್ಸಾಹವಿಲ್ಲ ಎಂದು ಸ್ಕ್ವಾಯ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಮಹಮದ್ ಆಲಿ ಸಂತಸ ವ್ಯಕ್ತಪಡಿಸಿದರು.
ರಾಜಸ್ತಾನದ ಜೈಪುರ್‌ನಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರಮಟ್ಟದ ಸ್ಕ್ವಾಯ್ ಕ್ರೀಡೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ಚಿತ್ರದುರ್ಗ ಜಿಲ್ಲೆಯ ಸವಿತಾ, ಗಿರೀಶ್ ಹಾಗೂ ಕಂಚಿನ ಪದಕ ಪಡೆದ ರಕ್ಷಿತಾ ಇವರುಗಳನ್ನು ಶನಿವಾರ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಸ್ಟೇಡಿಯಂನಲ್ಲಿ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಮಹಮದ್ ಆಲಿ ಚಿತ್ರದುರ್ಗ ಡಿಜಿ ಸಂಸ್ಥೆಯ ಈ ಕ್ರೀಡಾಪಾಟುಗಳು ಜೈಪುರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಿಟ್ಟಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆಂದು ಗುಣಗಾನ ಮಾಡಿದರು.
ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ ಚಿತ್ರದುರ್ಗದಲ್ಲಿ ಅನೇಕ ಕ್ರೀಡೆಗಳು ನಡೆಯುತ್ತವೆ. ಸ್ಟೇಡಿಯಂನಲ್ಲಿ ಸಿಂಥೆಟಿಕ್ ಟ್ರಾಕ್ ಆಗಲು ಗೂಳಿಹಟ್ಟಿ ಶೇಖರ್ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರು ಕ್ರೀಡಾ ಸಚಿವರಾಗಿದ್ದಾಗ ಮೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದರಿಂದ ಕ್ರೀಡಾಂಗಣ ಅಭಿವೃದ್ದಿಯಾಗಿದೆ. ಅವರ ಕಾಳಜಿಯಿಂದ ಇಲ್ಲಿ ಈಜುಕೊಳ ಕೂಡ ನಿರ್ಮಾಣವಾಗಿದೆ ಎಂದು ಹೇಳಿದರು.
ಜೂನ್‌ನಲ್ಲಿ ನ್ಯಾಷನಲ್ ಅಥ್ಲೆಟಿಕ್ ಸೆಲೆಕ್ಷನ್ ಇಲ್ಲಿ ನಡೆಯುತ್ತದೆ. ನಾಲ್ಕು ನೂರು ಅಥ್ಲೆಟಿಕ್ಸ್‌ಗಳು ಪಾಲ್ಗೊಳ್ಳಲಿದ್ದು, ಇಲ್ಲಿ ಆಯ್ಕೆಯಾಗುವವರು ರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಕ್ವಾಯ್ ಕ್ರೀಡೆಯನ್ನು ಪರಿಚಯಿಸಿದ ಹೆಗ್ಗಳಿಕೆ ತರಬೇತುದಾರ ಎನ್.ಇ.ರುದ್ರೇಶ್‌ಗೆ ಸಲ್ಲಬೇಕು. ಮಕ್ಕಳ ಈ ಸಾಧನೆಗೆ ಪೋಷಕರುಗಳು ಪ್ರೋತ್ಸಾಹ ನೀಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ ಫಾತ್ಯರಾಜನ್‌ರವರು ಚಿತ್ರದುರ್ಗದಲ್ಲಿ ಫುಟ್‌ಬಾಲ್, ಅಥ್ಲೆಟಿಕ್, ವಾಲಿಬಾಲ್ ನಡೆಸಲು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಹಕಾರವೂ ಬಹಳಷ್ಟಿದೆ ಎಂದು ತಿಳಿಸಿದರು.
ಸ್ಕ್ವಾಯ್ ತರಬೇತುದಾರ ಎನ್.ಇ.ರುದ್ರೇಶ್ ಮಾತನಾಡಿ ಸ್ಕ್ವಾಯ್ ಸ್ವದೇಶಿ ಕ್ರೀಡೆ. ಹಳೆ ಕಾಲದಲ್ಲಿ ರಾಜಮಹಾರಾಜರು ಕತ್ತಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ದ ಮಾಡುತ್ತಿದ್ದರು. ಅದನ್ನೇ ಸ್ವಲ್ಪ ಉನ್ನತೀಕರಿಸಿ ಈಗ ಸ್ಕ್ವಾಯ್ ಎನ್ನುವ ಹೆಸರಿನಲ್ಲಿ ಕ್ರೀಡೆ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ಮಕ್ಕಳು ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪೋಷಕರುಗಳ ಸ್ಪಂದನೆ ಸಿಗುತ್ತಿರುವುದರಿಂದ ಜೈಪರ್‌ದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಲು ಸಾಧ್ಯವಾಯಿತು ಎಂದರು.
ನಗರಸಭೆ ಸದಸ್ಯ ದೀಪು, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ಎ.ರೇಖಾ, ಸಂಪತ್, ಜನಾರ್ಧನ್, ಸಂತೋಷ್, ವೈ.ಬಿ.ಮಹೇಂದ್ರನಾಥ್ ಹಾಗೂ ಅಪಾರ ಸಂಖ್ಯೆಯಲ್ಲಿ ಪೋಷಕರುಗಳು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: