ಅತ್ತೆ, ಪತ್ನಿ, ಪತ್ನಿಯ ಸಹೋದರರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಿದ ಡೈಲ್112 ವಾಹನದ ಪೊಲೀಸರು…
ಅತ್ತೆ, ಪತ್ನಿ, ಪತ್ನಿಯ ಸಹೋದರರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಿದ ಡೈಲ್112 ವಾಹನದ ಪೊಲೀಸರು…
ಚಿತ್ರದುರ್ಗ:
ಚಳ್ಳಕೆರೆ ನಗರದ ವಾಸಿ ಮೈಲಾರಿ ಎಂಬ ಹಲ್ಲೆಗೊಳಗಾದ ವ್ಯಕ್ತಿಯನ್ನು ಡೈಯಲ್ 112 ವಾಹನದ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಚಳ್ಳಕೆರೆ ನಗರದ ಮೈಲಾರಿ ಎನ್ನುವರು ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ-112ಗೆ (ಇಆರ್ಎಸ್ಎಸ್) ಕರೆಮಾಡಿ ತನ್ನ ಮೇಲೆ ಹಲ್ಲೆ ಮಾಡುತ್ತಿರುತ್ತಾರೆ ಎಂದು ತಿಳಿಸಿದ್ದು, ಕೂಡಲೇ ಇಆರ್ಎಸ್ಎಸ್ ಕೇಂದ್ರದ ಅಧಿಕಾರಿಗಳು ಕಾರ್ಯ ವ್ರವೃತ್ತರಾದ ಹೊಯ್ಸಳ-8 ವಾಹನದ ಅಧಿಕಾರಿಗಳಾದ ಶಿವಾನಂದ ಮತ್ತು ರಮೇಶ್ ಘಟನಾ ಸ್ಥಳಕ್ಕೆ ಧಾವಿಸಿ ಹಲ್ಲೆಗೊಳಗಾಗಿದ್ದ ಮೈಲಾರಿಯನ್ನು ರಕ್ಷಿಸಿ ಆಗಬಹುದಾಗಿದ್ದ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಲ್ಲೆಗೊಳಗಾದ ಮೈಲಾರಿಯನ್ನು ಆಸ್ಪತ್ರೆಗೆ ದಾಖಲಿಸಿ, ಹಲ್ಲೆ ಮಾಡಿದ ಆರೋಪಿಗಳನ್ನು ಚಳ್ಳಕೆರೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ವ್ಯಕಿಯ ರಕ್ಷಿಸಿದ ಇಆರ್ಎಸ್ಎಸ್ ಕೇಂದ್ರದ ಸಿಬ್ಬಂದಿ ಹಾಗೂ ಹೊಯ್ಸಳ-8 ವಾಹನದ ಪೊಲೀಸ್ರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ. ಯಾವುದೇ ತುರ್ತು ಸಂದರ್ಭದಲ್ಲಿ ಡಯಲ್-112 ಸಂಖ್ಯೆಗೆ ಕರೆ ಮಾಡಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.