ರಾಜ್ಯ ಮಟ್ಟದ ಅಂದರ ಕ್ರೀಡಾ ಪ್ರಾಧಿಕಾರ ರಚನೆ ಮಾಡಲು ಅಗತ್ಯ ಸಹಕಾರ-ಸೈಟ್ ಬಾಬು…

ರಾಜ್ಯ ಮಟ್ಟದ ಅಂದರ ಕ್ರೀಡಾ ಪ್ರಾಧಿಕಾರ ರಚನೆ ಮಾಡಲು ಅಗತ್ಯ ಸಹಕಾರ-ಸೈಟ್ ಬಾಬು…
 
ಚಿತ್ರದುರ್ಗ:
 
ಕರ್ನಾಟಕದಲ್ಲಿ ರಾಜ್ಯ ಮಟ್ಟದ ಅಂದರ ಕ್ರೀಡಾ ಪ್ರಾಧಿಕಾರ ರಚನೆ ಮಾಡಲು ಎಲ್ಲ ರೀತಿಯ ಸಹಾಯ ಸಹಕಾರ ನೀಡವುದಾಗಿ ಸೈಟ್ ಬಾಬು  ತಿಳಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ  ಆಯೋಜಿಸಿದ್ದ ತೀಕ್ಷ್ಣ ಅಂದರ  ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈ  ಕ್ರೀಡಾ ಕೂಟ ರಾಜ್ಯ, ರಾಷ್ಟ್ರಮಟ್ಟಕ್ಕೆ   ಉತ್ತಮ ಸಂದೇಶ ಹೋಗಲಿ, ಮಾಧ್ಯಮಗಳು ಇವರ ಕ್ರೀಡಾಸಕ್ತಿ ಪ್ರೋತ್ಸಾಹವಾಗಿ ಬೆಂಬಲಿಸಿ  ಅಂದರ  ಕ್ರೀಡಾಕೂಟ ಅಂತರ್ ರಾಷ್ಟ್ರೀಯ  ಮಟ್ಟದಲ್ಲಿ  ಪ್ರಜ್ವಲಿಸಲಿ ಇವರೆಲ್ಲರಿಗೆ  ಅಂತರ್ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲಾಗುವುದು ಎಂದರು.
ಸ್ವಾಮಿ ಬ್ರಹ್ಮನಿಷ್ಠಾನಂಧ ರಾಮಕೃಷ್ಣಾಶ್ರಮ ಚಿತ್ರದುರ್ಗ ಮಾತನಾಡಿ ರಾಜ್ಯ ರಾಷ್ಟ್ರದ ಮಟ್ಟದಲ್ಲಿ ಚಿನ್ನದ ಪದಕ  ಆಟಗಾರರು ಉತ್ತಮ ಸಾಧನೆ ಮಾಡಿದವರು ಇದ್ದಾರೇ ಮತ್ತು ಐಎಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ದಿನೇಶ್ ಗೌಡಗೆರೆ ಮಾತನಾಡಿ  ಅಂದರು ತಮ್ಮ ಬದುಕಿನಬಂಡಿ ನಡೆಸುವಲ್ಲಿ ತೊಳಲಾಟ ನಡೆಸುತ್ತಿರುವ ಸಂದರ್ಭದಲ್ಲಿ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಸಿರುವುದು ಕ್ರೀಡಾಸಕ್ತರ ಗಮನ ಸೆಳೆಯುವಂತಾಗಿದೆ.  ಪ್ರಾಧಿಕಾರ ರಚನೆ ಕಾರ್ಯಕ್ಕೆ  ಸಹಕಾರ ನೀಡಲು ಮುಂದೆ ಬಂದಿರುವ ಸೈಟ್ ಬಾಬುರವರ ಕಾರ್ಯಕ್ಕೆ ಮಾಧ್ಯಮಗಳು ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಮಾತನಾಡಿದರು. ತೀಕ್ಷ್ಣ ಅಂದರ ಪುನಃಶ್ಚೇತನ ಸಂಸ್ಥೆ ಅದ್ಯಕ್ಷೆ ಕೌಸಲ್ಯ ಶ್ರೀನಿವಾಸ್, ಕಾರ್ಯದರ್ಶಿ ಡಿ.ಎನ್.ಮಣಿಕಂಠ, ವಾಲಿಬಾಲ್ ಕೋಚ್ ತಿಮ್ಮಯ್ಯ ಚಿಕ್ಕಮಗಳೂರು  ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ತಿಮ್ಮಯ್ಯ ಚಿಕ್ಕಮಗಳೂರು ನಿರ್ವಸಿದರು. ಎರಡು ದಿನಗಳು ನಡೆಯುವ ಈ ಪಂದ್ಯಾವಳಿಯಲ್ಲಿ ಎರಡು ಗುಂಪುಗಳಲ್ಲಿ  ಆರು ಪಂದ್ಯಾವಳಿಗಳು ನಡೆಯುತ್ತಿದ್ದು ಬೆಂಗಳೂರಿನಿಂದ ಮೂರು ತಂಡ, ರಾಣಿಬೆನ್ನೂರು ಒಂದು ತಂಡ ಚಿತ್ರದುರ್ಗ ಎರಡು  ತಂಡಗಳು ಭಾಗವಹಿಸಿವೆ.
What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: