Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಡಿ ಹಿರಿಯ ಅಧಿಕಾರಿಗಳ ತಾಂತ್ರಿಕ ಸಮಿತಿಯಿಂದ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಮುಖ ಹಗರಣಗಳ ತನಿಖೆ ಚುರುಕು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿಯ ತಂಡ ಬೆಂಗಳೂರಿಗೆ ಆಗಮಿಸಿದೆ. ಶನಿವಾರ ಸಂಜೆ ದೆಹಲಿಯಿಂದ ಆಗಮಿಸಿರುವ ಈ ಅಧಿಕಾರಿಗಳ ತಂಡ ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ತನಿಖೆಗಳ ಮೇಲ್ವಿಚಾರಣೆ ನಡೆಸಲಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಇಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಈ ಹಿರಿಯ ಅಧಿಕಾರಿಗಳ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Advertisement

ಪ್ರಕರಣಗಳ ಪ್ರಗತಿ ಪರಿಶೀಲನೆ:
ಇಡಿ ಮೂಲಗಳ ಪ್ರಕಾರ, ಬೆಂಗಳೂರು ವಲಯದ ಇಡಿ ಘಟಕದಲ್ಲಿ ದಾಖಲಾಗಿರುವ ಗಂಭೀರ ಪ್ರಕರಣಗಳ ಪ್ರಗತಿ ಪರಿಶೀಲನೆ ಭಾನುವಾರ ಮತ್ತು ಸೋಮವಾರ ನಡೆಯಲಿದೆ. ಸಚಿವ ಸತೀಶ್​​ ಜಾರಕಿಹೊಳಿ ಅವರಿಂದ ವಿದೇಶದಲ್ಲಿ ಹಣ ಹೂಡಿಕೆ ಪ್ರಕರಣ, ಕುಖ್ಯಾತ ವಾಲ್ಮೀಕಿ‌ನಿಗಮದ ಅಕ್ರಮ ಹಂಚಿಕೆ ಪ್ರಕರಣ, ಲೋಕೋಪಯೋಗಿ ಇಲಾಖೆಯಿಂದ ಬಂದಿರುವ ಕಿಕ್‌ಬ್ಯಾಕ್ ಆರೋಪಗಳು, ಕೆಪಿಎಸ್‌ಸಿ ಹಗರಣ ಹಾಗೂ ಮೂಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಇಡಿ ತನಿಖೆ ನಡೆಸುತ್ತಿರುವ ಎಲ್ಲಾ ಪ್ರಮುಖ ಪ್ರಕರಣಗಳ ಕುರಿತು ಸಮಗ್ರ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ತಿಳಿದುಬಂದಿದೆ.

ನೋಟಿಸ್‌ಜಾರಿಯಾಗುವ ಸಾಧ್ಯತೆ:
ಮತ್ತೊಂದೆಡೆ, ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲಿನ ದಾಳಿ ವೇಳೆ ಪತ್ತೆಯಾದ 3.3 ಕೋಟಿ ರೂಪಾಯಿಗೂ ಅಧಿಕ ನಗದು ಮತ್ತು ವಿದೇಶಿ ಕರೆನ್ಸಿಗಳ ಕುರಿತು ಯಾವುದೇ ಕ್ಷಣದಲ್ಲಿ ಇಡಿಯಿಂದ ಅಧಿಕೃತ ನೋಟಿಸ್ ರವಾನೆಯಾಗುವ ಸಾಧ್ಯತೆಯಿದೆ. ಸದ್ಯ ವಶಪಡಿಸಿಕೊಳ್ಳಲಾದ ದಾಖಲೆಗಳ ಕೂಲಂಕುಷ ಪರಿಶೀಲನೆ ಮುಂದುವರಿದಿದ್ದು, ತನಿಖೆಗೆ ಹಾಜರಾಗುವಂತೆ ಅಗತ್ಯವಿದ್ದಲ್ಲಿ ಶೀಘ್ರದಲ್ಲೇ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು ಎಂದು ಇಡಿ ಮೂಲಗಳು ಸ್ಪಷ್ಟಪಡಿಸಿವೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರಿನ ದಸರಾ ಇತಿಹಾಸ; ರಾಜಪರಂಪರೆಯಿಂದ ನಾಡಹಬ್ಬದವರೆಗೆ:… ಪ್ರೇಮ ವಿವಾಹವಾಗಿದ್ದ ಹಿರಿಯೂರು ಯುವತಿಯ ಅನುಮಾನಾಸ್ಪದ ಸಾವು:ಮತಾಂತರ ಕಿರುಕುಳ ಆರೋಪಡಿಸೆಂಬರ್ ಒಳಗಾಗಿ 17,000 ಶಿಕ್ಷಕರ ನೇಮಕಾತಿ ಪೂರ್ಣ: ಸಚಿವ ಮಧು ಬಂಗಾರಪ್ಪಜರ್ಮನಿಯಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಆತಂಕ: ತುರ್ತು ಲ್ಯಾಂಡಿಂಗ್ದುಬೈನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 2.6 ಕೋಟಿ ಮೌಲ್ಯದ ಚಿನ್ನ ವಶ, ನಾಲ್ವರು ಅರೆಸ್ಟ್ಶರಣ ಸಂಸ್ಕೃತಿ ಉತ್ಸವ: ವಿವಿಧ ಸ್ಪರ್ಧೆಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮುಜರಾಯಿ ಸಚಿವ ಬಸವಂತಪ್ಪಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಝೆಕ್ ಗಣರಾಜ್ಯದ ಆಸಕ್ತಿ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆಹ್ವಾನಕ್ಯಾನ್ಸರ್ ರೋಗಿಗಳಿಗೆ ಜೀವ ರಕ್ಷಕ ಔಷಧಗಳ ಬೆಲೆಯಲ್ಲಿ ಭಾರಿ ಕಡಿತ!​ ರಾಹುಲ್ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗ ಪತ್ರ— ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ