Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಂಗ್ರೆಸ್‌ಸರ್ಕಾರದಿಂದ ಗಣೇಶ ಹಬ್ಬಕ್ಕೆ ಕಿರುಕುಳ: ಇನ್ಸ್‌ಪೆಕ್ಟರ್‌ ರನ್ನು ಸಸ್ಪೆಂಡ್ ಮಾಡಲಿ- ಆರ್.ಅಶೋಕ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದೂಗಳ ತಂಟೆಗೆ ಬಂದರೆ ಎಚ್ಚರ, ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಸ್ಥಳಕ್ಕೆ ಬರುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಕಿಡಿಕಾರುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜನರಿಗೆ ನೆಮ್ಮದಿಯಿಂದ ಗಣೇಶೋತ್ಸವ ಆಚರಿಸಲು ಬಿಡುತ್ತಿಲ್ಲ. ಇಡೀ ರಾಜ್ಯಾದ್ಯಂತ ಸರ್ಕಾರದಿಂದ ಕಿರುಕುಳ ಮುಂದುವರಿದಿದೆ ಎಂದು ಆರೋಪಿಸಿದರು.

Advertisement

ಇನ್ಸ್‌ಪೆಕ್ಟರ್‌ವರ್ತನೆಗೆ ಆಕ್ರೋಶ:
ಮಕ್ಕಳು, ಹಿರಿಯರು ಪ್ರೀತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸುವ ಐಕ್ಯತೆಯ ಹಬ್ಬದ ಬಗ್ಗೆ ಟಿ.ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ಧನಂಜಯ್ ದುರಹಂಕಾರದಿಂದ ಮಾತನಾಡಿದ್ದಾರೆ. ಮಸೀದಿ ಮುಂದೆ ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನೀವೇನು ರೌಡಿನಾ ಗ್ರಹಚಾರ ಬಿಡಿಸ್ತೀರಾ? ಅಥವಾ ಮೆರವಣಿಗೆ ಮಾಡೋರು ರೌಡಿಗಳಾ? ಎಂದು ಆರ್.ಅಶೋಕ್ ಪ್ರಶ್ನಿಸಿದರು.

ಇನ್ಸ್‌ಪೆಕ್ಟರ್ ಹೀಗೆ ಮಾತನಾಡಿದ್ದಾರೆಂದರೆ ಇದರ ಹಿಂದೆ ದೊಡ್ಡ ಷಢ್ಯಂತ್ರವಿದ್ದು, ಸರ್ಕಾರದ ಕುಮ್ಮಕ್ಕು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಸಂಪೂರ್ಣ ಹಿಂದೂ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ ಎಂದರು.

ಡಿಕೆಶಿ ವಿರುದ್ಧ ವಾಗ್ದಾಳಿ ಹಾಗೂ ಸವಾಲು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದ ಅವರು, ಚುನಾವಣೆ ಬಂದ ತಕ್ಷಣ ದೇವಸ್ಥಾನಗಳಿಗೆ ಹೋಗುವುದು, ಕುಂಕುಮ ಹಾಕಿಕೊಳ್ಳುವುದು, ನದಿಯಲ್ಲಿ ಮುಳುಗುವುದು ಮಾಡಿ ತಾವೊಬ್ಬ ದೊಡ್ಡ ಹಿಂದೂ ಎಂದು ಬಿಂಬಿಸಿಕೊಳ್ಳುತ್ತಾರೆ. ಇದೆನಾ ನಿಮ್ಮ ಹಿಂದೂ ಕಾಳಜಿ? ಡಿ.ಕೆ.ಶಿ ಎಲೆಕ್ಷನ್ ಹಿಂದೂ, ಕಲೆಕ್ಷನ್ ಹಿಂದೂ ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್ ನಿಜವಾದ ಹಿಂದೂ ಆಗಿದ್ದರೆ, ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸ್ತೀನಿ ಎಂದಿರುವ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಕೂಡಲೇ ಸಸ್ಪೆಂಡ್ ಮಾಡಲಿ. ತಾವು ಕಪಟ ಹಿಂದೂಗಳಲ್ಲ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ಪಾಕ್ ಪರ ಘೋಷಣೆ vs ಗಣೇಶ ಹಬ್ಬದ ಬೆದರಿಕೆ:
ಪಾಕ್ ಪರ ಘೋಷಣೆ ಕೂಗುವವರಿಗೆ ಬಿರಿಯಾನಿ ನೀಡಲಾಗುತ್ತದೆ, ಆದರೆ ಗಣೇಶ ಹಬ್ಬ ಆಚರಿಸುವವರಿಗೆ ಬೆದರಿಕೆ ಹಾಕಲಾಗುತ್ತದೆ. ಇದು ಸಂಪೂರ್ಣ ಗೂಂಡಾ ಸರ್ಕಾರ ಹಾಗೂ ತಾಲಿಬಾನಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು. ವೋಟ್‌ಬ್ಯಾಂಕ್‌ಗಾಗಿ ಗಣೇಶ ಹಬ್ಬಕ್ಕೆ ಷರತ್ತುಗಳನ್ನು ಹಾಕುತ್ತಿದ್ದಾರೆ. ಮುಸ್ಲಿಮರು ರಾತ್ರಿ 12 ಗಂಟೆವರೆಗೂ ಮೈಕ್ ಬಳಸುತ್ತಾರೆ, ಸುಪ್ರೀಂ ಕೋರ್ಟ್ ಡೆಸಿಬಲ್ ಮಿತಿ ಬಗ್ಗೆ ಹೇಳಿದ್ದರೂ ಮಸೀದಿಗಳಿಗೆ ಹೋಗಿ ಡಿಕೆಶಿ ಎಂದಾದರೂ ಮೈಕ್ ಹಾಕದಂತೆ ಚೆಕ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಗಣೇಶ ಹಬ್ಬ ಬಂದು ಎರಡು ಸಾವಿರ ವರ್ಷಗಳಾಗಿವೆ, ಆದರೆ ಮಸೀದಿ ಬಂದು 300 ವರ್ಷ ಅಷ್ಟೇ. ಚರ್ಚ್ ಅಥವಾ ಗುರುದ್ವಾರದ ಮುಂದೆ ಮೆರವಣಿಗೆ ಹೋದಾಗ ಯಾವುದೇ ಗಲಾಟೆ ಆಗುವುದಿಲ್ಲ, ಇವರು ಮಾತ್ರ ಯಾಕೆ ಗಲಾಟೆ ಮಾಡುತ್ತಾರೆ? ರಸ್ತೆಗಳನ್ನು ಇವರಿಗೆ ಜಹಗೀರು ಬರೆದುಕೊಟ್ಟಿದ್ದೀರಾ? ಏನೇ ತೊಂದರೆ ಕೊಟ್ರು ನಾವು ಗಣಪತಿ ಆಚರಣೆ ಮಾಡುವುದನ್ನು ಬಿಡುವುದಿಲ್ಲ. ಈಗ ಸುಮ್ಮನಿದ್ರೆ ಗಲ್ಲಿಗಲ್ಲಿಯಲ್ಲೂ ಪೊಲೀಸರು ವಾರ್ನಿಂಗ್ ಕೊಡುವ ಸ್ಥಿತಿ ಬರುತ್ತದೆ. ಬ್ರಿಟಿಷರ ಕಾಲದಲ್ಲೂ ಆರಾಮವಾಗಿ ಗಣೇಶ ಹಬ್ಬ ಮಾಡಲಾಗುತ್ತಿತ್ತು, ಈ ಕಾಂಗ್ರೆಸ್ ಸರ್ಕಾರ ಬ್ರಿಟಿಷರಿಗಿಂತಲೂ ಕಡೆಯಾಗಿದೆ ಎಂದು ವಾಗ್ದಾಳಿ ನಡೆಸಿದ ಆರ್.ಅಶೋಕ್, ತಾನು ಈ ಕೂಡಲೇ ಟಿ.ನರಸೀಪುರಕ್ಕೆ ನ್ಯಾಯ ಕೇಳಲು ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಚಿನ್ನದ ಗಣಿ ವಿವಾದದ ಕುರಿತು ಪ್ರತಿಕ್ರಿಯೆ:
ಸಚಿವ ಸತೀಶ್ ಜಾರಕಿಹೊಳಿ ಇಡಿ ತನಿಖೆ ಹಾಗೂ ದೂರುದಾರರ ಕುರಿತು ನೀಡಿದ ಹೇಳಿಕೆ ಕುರಿತು ಮಾತನಾಡಿದ ಆರ್.ಅಶೋಕ್, ಯಾರು ದಲಿತ ವಿರೋಧಿ ಅಂತ ಈಗ ಗೊತ್ತಾಯ್ತಲ್ಲ ಎಂದರು.

ಸತೀಶ್ ಜಾರಕಿಹೊಳಿ ಅವರು ಚಿನ್ನದ ಗಣಿ ತೆಗೆದುಕೊಂಡಿದ್ದಾರೆ ಮತ್ತು ಪಾಲುದಾರಿಕೆ ಇದೆ ಎನ್ನುವುದು ಬೆಳಗಾವಿಯವರಿಗೇ ಗೊತ್ತಿರುವ ಸಂಗತಿ. ಬೆಂಗಳೂರಿನಲ್ಲಿರುವವರಿಗೆ ಅದು ಆರಂಭದಲ್ಲಿ ಗೊತ್ತಿರಲಿಲ್ಲ. ಇಡಿಗೆ ದೂರು ಕೊಟ್ಟಿರೋರು ಅವರ ಸುತ್ತಮುತ್ತನೇ ಇರಬೇಕು ನೋಡಿ. ಮೊದಲು ಬೆಳಗಾವಿಯಲ್ಲಿ ಹುಡುಕಲಿ, ಆಮೇಲೆ ಬೆಂಗಳೂರಿನಲ್ಲಿ ಹುಡುಕಲಿ. ಯಾರು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ, ಕ್ಷಣ ಕ್ಷಣದ ಮಾಹಿತಿ ನೀಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಿ. ಜಾತಿಗೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರಿನ ದಸರಾ ಇತಿಹಾಸ; ರಾಜಪರಂಪರೆಯಿಂದ ನಾಡಹಬ್ಬದವರೆಗೆ:… ಪ್ರೇಮ ವಿವಾಹವಾಗಿದ್ದ ಹಿರಿಯೂರು ಯುವತಿಯ ಅನುಮಾನಾಸ್ಪದ ಸಾವು:ಮತಾಂತರ ಕಿರುಕುಳ ಆರೋಪಡಿಸೆಂಬರ್ ಒಳಗಾಗಿ 17,000 ಶಿಕ್ಷಕರ ನೇಮಕಾತಿ ಪೂರ್ಣ: ಸಚಿವ ಮಧು ಬಂಗಾರಪ್ಪಜರ್ಮನಿಯಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಆತಂಕ: ತುರ್ತು ಲ್ಯಾಂಡಿಂಗ್ದುಬೈನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 2.6 ಕೋಟಿ ಮೌಲ್ಯದ ಚಿನ್ನ ವಶ, ನಾಲ್ವರು ಅರೆಸ್ಟ್ಶರಣ ಸಂಸ್ಕೃತಿ ಉತ್ಸವ: ವಿವಿಧ ಸ್ಪರ್ಧೆಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಮುಜರಾಯಿ ಸಚಿವ ಬಸವಂತಪ್ಪಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಝೆಕ್ ಗಣರಾಜ್ಯದ ಆಸಕ್ತಿ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆಹ್ವಾನಕ್ಯಾನ್ಸರ್ ರೋಗಿಗಳಿಗೆ ಜೀವ ರಕ್ಷಕ ಔಷಧಗಳ ಬೆಲೆಯಲ್ಲಿ ಭಾರಿ ಕಡಿತ!​ ರಾಹುಲ್ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗ ಪತ್ರ— ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ