Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಯುವ ಮುಖಂಡ ರಘುವೀರ್ ಎಸ್ ಗೌಡ 3 ಲಕ್ಷ ದೇಣಿಗೆ

Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ  ಅವರ ಸ್ಮರಣಾರ್ಥವಾಗಿ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಕಾಂಗ್ರೆಸ್ ಯುವ ಮುಖಂಡ ರಘುವೀರ್ ಎಸ್.ಗೌಡ ಅವರು, 3 ಲಕ್ಷ ರೂ. ನೀಡಿದ್ದಾರೆ.

ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳು ಕರ್ನಾಟಕ ಸಂಘದಲ್ಲಿ ಕಳೆದ ವರ್ಷ 7 ಲಕ್ಷ ರೂ. ಮೊತ್ತದಲ್ಲಿ ಎಸ್.ಎಂ.ಕೃಷ್ಣ ದತ್ತಿ ನಿಧಿ ಸ್ಥಾಪಿಸಿದ್ದರು. ಈಗ ರಘುವೀರ್ ಅವರು ಈ ದತ್ತಿ ನಿಧಿಗೆ 3 ಲಕ್ಷ ರೂ. ದೇಣಿಗೆ ನೀಡಿದ್ದು, ದತ್ತಿ ನಿಧಿ ಮೊತ್ತ 10 ರೂ.ಗೆ ಏರಿಕೆಯಾಗಿದೆ.

ಎಸ್.ಎಂ.ಕೃಷ್ಣ ಅವರ ಅಭಿಮಾನಿ ಆಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಘುವೀರ್ ಎಸ್. ಗೌಡ ಅವರು ಕೆಪಿಸಿಸಿ ಬೆಂಗಳೂರು ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಸ್.ಎಂ.ಕೃಷ್ಣ ಅವರು ಈ ನಾಡಿಗೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ. ಅವರ ಸಾಧನೆ ನಮಗೆ ದಾರಿದೀಪವಾಗಬೇಕು. ಅವರ ಹೆಸರು, ಸಾಧನೆಯನ್ನು ನೆನೆಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ ಎಸ್.ಎಂ.ಕೃಷ್ಣ ದತ್ತಿ ನಿಧಿಗೆ 3 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.

 ಶಿಕ್ಷಣ, ಆರೋಗ್ಯ, ಸಂಶೋಧನೆ, ಸಾಹಿತ್ಯ, ಕೃಷಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಾಧನೆ ಮಾಡಿದವರಿಗೆ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಎಸ್.ಎಂ.ಕೃಷ್ಣ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾಗುತ್ತದೆ.

ಎಸ್.ಎಂ.ಕೃಷ್ಣ ದತ್ತಿ ನಿಧಿಯ ಪ್ರಥಮ ವರ್ಷದ ಪ್ರಶಸ್ತಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾತ್ರರಾಗಿದ್ದು ಮೇ 5 ರಂದು "ಎಸ್.ಎಂ.ಕೃಷ್ಣ" ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರು ಉಪಚುನಾವಣೆ: ಶೋಕಿ ನಾಯಕರಿಗೆ ‘ತಕ್ಕ ಪಾಠ’ ಕಲಿಸಲು ಹಿರಿಯೂರು ಮತದಾರ ಸಜ್ಜು!ಲೋಹಿತ್‌ ಕುಮಾರ್ ಪಿ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ: ಅಭಿನಂದನೆಗಳ ಮಹಾಪೂರಫ್ಯಾಕ್ಟರಿಯಿಂದ ಹೊರಬರುತ್ತಿರುವ ದುರ್ವಾಸನೆ: ದೊಡ್ಡಬಳ್ಳಾಪುರದ ವರದನಹಳ್ಳಿ ಗ್ರಾಮಸ್ಥರು ಹೈರಾಣು!ಗ್ರಾಮ ಪಂಚಾಯಿತಿಯಲ್ಲಿ ರಾತ್ರಿ ವೇಳೆ ರಹಸ್ಯ ಕೆಲಸ: ಗ್ರಾಮಸ್ಥರಲ್ಲಿ ಹೆಚ್ಚಿದ ಕಳ್ಳ ವ್ಯವಹಾರದ ಸಂಶಯ!ಚಿತ್ರದುರ್ಗ ಸಖಿ ಒನ್ ಸ್ಟಾಪ್ ಸೆಂಟರ್: ಸೋಶಿಯಲ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನಹಿರಿಯೂರು ನಗರಸಭೆ: ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮೇ 17ರಂದು ಪೊಲೀಸ್ ಅಧಿಕಾರಿಗಳ ಸ್ನೇಹ ಸಮ್ಮೀಲನಹೊಸ ರೈಲ್ವೆ ಕಾಮಗಾರಿಗಳ ಪರಾಮರ್ಶೆ- ಸಚಿವ ವಿ. ಸೋಮಣ್ಣಇ-ಬಸ್, ಇ-ಟ್ರಾಕ್ ಮತ್ತು ಹಸಿರು ಸಾರಿಗೆ, ಸುಸ್ಥಿರ ಕೈಗಾರಿಕಾ ಭವಿಷ್ಯಕ್ಕೆ ಒತ್ತು:  ಕುಮಾರಸ್ವಾಮಿದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಮತ್ತಷ್ಟು ವೇಗ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ