ಹುಡುಗರ(ಪುರುಷರ) ಲೈಂಗಿಕ ಸಾಮರ್ಥ್ಯ ಎರಡೇ ನಿಮಿಷ-ನಟಿ ರೆಜಿನಾ..!!!
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಂಬೈಲ್ಲಿ ನಟಿ ರೆಜಿನಾ ಸಂದರ್ಶನ ಒಂದರಲ್ಲಿ ನೀಡಿದ ಜೋಕ್ ಒಂದು ವೈರಲ್ ಆಗಿದೆ. ಅದು ಏನಂದರೆ ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ನೂಡಲ್ಸ್ ಥರಾ, ಕೇವಲ ಎರಡೇ ನಿಮಿಷ ಎಂದು ನಟಿ ರೆಜಿನಾ ಜೋಕ್ ಮಾಡಿದ್ದು ಸಖತ್ ವೈರಲ್ ಆಗಿದೆ.
ಹುಡುಗರ ಬಗ್ಗೆ ನನಗೆ ಒಂದು ತಮಾಷೆ ತಿಳಿದಿದೆ. ಆದರೆ ನಾನು ಅದನ್ನು ಇಲ್ಲಿ ಭೇದಿಸಬಾರದು. ಹುಡುಗರು ಮತ್ತು ಮ್ಯಾಗಿ ನೂಡಲ್ಸ್ ಕೇವಲ ಎರಡು ನಿಮಿಷಗಳು ಮಾತ್ರ ಎಂದು ಅವರು ತಮಾಷೆ ಮಾಡಿದರು. ರೆಜಿನಾ ಪಕ್ಕದಲ್ಲಿ ಕುಳಿತಿದ್ದ ನಿವೇತಾ ಈ ಡಬಲ್ ಮೀನಿಂಗ್ ಜೋಕ್ಗೆ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಡಾಕಿನಿ ಸಿನಿಮಾ ಖ್ಯಾತಿಯ ನಟಿ ರೆಜಿನಾ ಈ ಸಿನಿಮಾದ ಪ್ರಚಾರದ ವೇಳೆ ಸಂದರ್ಶನದಲ್ಲಿ ಇಂತಹದ್ದೊಂದು ಹೇಳಿಕೆ ನೀಡಿದ್ದು, ಪಡ್ಡೆ ಹುಡುಗರು ಆಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡಿ ಗೋಳೋಯ್ದುಕೊಳ್ಳುತ್ತಿದ್ದಾರೆ. ರೆಜಿನಾ ಈ ಮೊದಲು ಕನ್ನಡದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದರು.