i
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಾದ್ಯಂತ ಪುನೀತ್ ರಾಜ್ಕುಮಾರ್ ನಟನೆಯ ಗಂಧದ ಗುಡಿ ಚಿತ್ರ ಅಕ್ಟೋಬರ್-28 ರಂದು ಶುಕ್ರವಾರ ಬಿಡುಗಡೆಯಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಥಿಯೇಟರ್ಗಳಲ್ಲಿ ಬೆಳಗಿನ ಶೋ ಆರಂಭವಾಗಿದೆ.
ಪುನೀತ್ ರಾಜ್ಕುಮಾರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಗಂಧದ ಗುಡಿ ಸಾಕ್ಷ್ಯಾಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲಾ ಥಿಯೇಟರ್ಗಳ ಎದುರು ಪುನೀತ್ ರಾಜ್ಕುಮಾರ್ ಅವರ ಕಟೌಟ್ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ಅವುಗಳಿಗೆ ಹಾಲಿನ ಅಭಿಷೇಕ ಮಾಡುತ್ತಿರುವುದಲ್ಲದೆ ವಿವಿಧ ಅಲಂಕಾರಿಕ ಹೂ ಹಾರಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ 225ಕ್ಕೂಹೆಚ್ಚು ಸ್ಕ್ರೀನ್ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.