i
ಅಪ್ರಾಪ್ತ ಬಾಲಕಿಯ ಮೇಲೆ ಮುಸ್ಲಿಂ ಯುವಕನಿಂದ ಅತ್ಯಾಚಾರ…
ಚಂದ್ರವಳ್ಳಿ ನ್ಯೂಸ್, ನಾಗಮಂಗಲ:
ಅಪ್ರಾಪ್ತ ವಿಕಲ ಚೇತನ ಬಾಲಕಿಗೆ ಮೊಬೈಲ್ ಕೊಡಿಸಿ ಅಶ್ಲೀಲ ವಿಡಿಯೋಗಳನ್ನ ಮಾಡಿ ಬ್ಲಾಕ್ ಮೇಲ್ ಮಾಡಿ ಮುಸ್ಲಿಂ ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಜರುಗಿದೆ. ಆರೋಪಿ ಜಿಹಾದಿ ಯೂನಸ್ ಪಾಷ(24) ಅಪ್ರಾಪ್ತ ವಿಕಲಚೇತನ ಬಾಲಕಿ(13)ಯನ್ನು ಪುಸಲಾಯಿಸಿ ಮೊಬೈಲ್ ಕೊಡಿಸಿ ಬಳಿಕ ಮೆಸೆಜ್ ಮಾಡಲು ಆರಂಭಿಸಿದ್ದು ವಿಡಿಯೋ ಕಾಲ್ ಮಾಡುತ್ತಾ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಬಾಲಕಿಯ ಖಾಸಗಿ ಅಂಗವನ್ನು ತೋರಿಸುವಂತೆ ಧಮ್ಕಿ ಹಾಕಿ ಖಾಸಗಿ ಅಂಗವನ್ನು ತೋರಿಸಿದಾಗ ಮತ್ತೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಲೈಂಗಿಕ ಸಂಪರ್ಕಕ್ಕಾಗಿ ಒತ್ತಾಯ ಮಾಡಿ ಬಾಲಕಿಯ ತಾಯಿ ಮತ್ತು ಅಜ್ಜಿಗೆ ಊಟದಲ್ಲಿ ನಿದ್ರೆ ಮಾತ್ರ ಹಾಕಿಸಿ ಅವರು ಗಾಢ ನಿದ್ರೆಯಲ್ಲಿದ್ದಾಗ ಮನೆಗೆ ಆಗಮಿಸಿ ಬಲವಂತದಿಂದ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರಕ್ಕೆ ಒಳಗಾಗಿ ಬಾಲಕಿಗೆ ಮತಾಂತರವಾಗಲು ಒಪ್ಪಿದರಷ್ಟೇ ಮದುವೆಯಾಗೋದಾಗಿ ಹೇಳಿದ್ದಾನೆಂದು ದೂರಲಾಗಿದೆ. ಸಂತ್ರಸ್ತೆ ತಂದೆ ನಾಗಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.