i
ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಈ ಕೆಳಗಿನ ರೈಲುಗಳಿಗೆ ಖಾಯಂ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ
ತಿಳಿಸಿದ್ದಾರೆ.
- ಡಿಸೆಂಬರ್ 25. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 07658 ಎಸ್.ಎಸ್.ಎಸ್ ಹುಬ್ಬಳ್ಳಿ – ತಿರುಪತಿ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲಿಗೆ ಐದು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 24. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 07657 ತಿರುಪತಿ – ಎಸ್.ಎಸ್.ಎಸ್ ಹುಬ್ಬಳ್ಳಿ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲಿಗೆ ಐದು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 29. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17319 ಎಸ್ಎಸ್ಎಸ್ ಹುಬ್ಬಳ್ಳಿ – ಹೈದರಾಬಾದ್ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
- ಡಿಸೆಂಬರ್ 30. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17320 ಹೈದರಾಬಾದ್ – ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
- ಡಿಸೆಂಬರ್ 31. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17317 ಎಸ್ಎಸ್ಎಸ್ ಹುಬ್ಬಳ್ಳಿ – ದಾದರ್ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
- ಜನವರಿ 01. 2023 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17318 ದಾದರ್ – ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿಯನ್ನು ಹೆಚ್ಚಿಸಲಾಗುವುದು.
- ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12028 ಕೆ.ಎಸ್.ಆರ್ ಬೆಂಗಳೂರು – ಎಮ್.ಜಿ.ಆರ್ ಚೆನ್ನೈ ಸೆಂಟ್ರಲ್ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಒಂದು ಹವಾನಿಯಂತ್ರಿತ ಚೇರ್ ಕಾರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12027 ಎಮ್.ಜಿ.ಆರ್ ಚೆನ್ನೈ ಸೆಂಟ್ರಲ್ – ಕೆ.ಎಸ್.ಆರ್ ಬೆಂಗಳೂರು ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ಒಂದು ಹವಾನಿಯಂತ್ರಿತ ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಒಂದು ಹವಾನಿಯಂತ್ರಿತ ಚೇರ್ ಕಾರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 25. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12257 ಯಶವಂತಪುರ – ಕೊಚುವೇಲಿ ಗರೀಬ್ ರಥ ಎಕ್ಸ್ಪ್ರೆಸ್ ರೈಲಿಗೆ ಎರಡು ಎಸಿ 3 ಟೈರ್ (ಗರೀಬ್ ರಥ) ಸ್ಲೀಪರ್ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 26. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 12258 ಕೊಚುವೇಲಿ – ಯಶವಂತಪುರ ಗರೀಬ್ ರಥ ಎಕ್ಸ್ಪ್ರೆಸ್ ರೈಲಿಗೆ ಎರಡು ಎಸಿ 3 ಟೈರ್ ಸ್ಲೀಪರ್ (ಗರೀಬ್ ರಥ) ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 28. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 16511 ಕೆ.ಎಸ್.ಆರ್ ಬೆಂಗಳೂರು – ಕಣ್ಣೂರು ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ ಮತ್ತು ಒಂದು ಸ್ಲೀಪರ್ ದರ್ಜೆ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.
- ಡಿಸೆಂಬರ್ 29. 2022 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 16512 ಕಣ್ಣೂರು – ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲಿಗೆ ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ ಮತ್ತು ಒಂದು ಸ್ಲೀಪರ್ ದರ್ಜೆ ಬೋಗಿಗಳನ್ನು ಹೆಚ್ಚಿಸಲಾಗುತ್ತದೆ.