i
ಪ್ರವರ್ಗ–1 ರಲ್ಲಿರುವ ಹಲವು ಜಾತಿಗಳ ಎಸ್.ಟಿ. ಸೇರ್ಪಡೆಗೆ ಶಿಫಾರಸ್ಸು:ಶ್ರೀರಾಮುಲು…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಹಿಂದುಳಿದ ವರ್ಗ ಪ್ರವರ್ಗ–1 ರಲ್ಲಿರುವ ಬೆಸ್ತ, ಗಂಗಾಮತ ಮತ್ತು ಇದರ 37 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯ ಡಾ.ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಕೋಳಿಧೊರ್,ಟೊಕ್ರೆಕೋಳಿ,ಕೊಲ್ಚಾ,ಕೊಲ್ಘಾ ವಿವಿಧ ಜಾತಿಗಳು ಇರುತ್ತವೆ. ಬೆಸ್ತ,ಗಂಗಾಮತ ಮತ್ತು ಇತರ 37 ಪರ್ಯಾಯ ಪದಗಳನ್ನು ಪರಿಶಿಷ್ಠ ಪಂಗಡದ ಪಟ್ಟಿಗೆ ಸೇರಿಸಲು ಹಂಪಿ ಕನ್ನಡ ವಿವಿಯು ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಅಚಿತಿಮ ವರದಿಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ 2014 ರಲ್ಲಿ ಕೇಂದ್ರಕ್ಕೆ ಕಳುಹಿಸಲಾಗಿದೆ.2019 ಹಾಗೂ 2021 ರಲ್ಲಿ ಹೆಚ್ಚುವರಿ ಮಹಿತಿ ಕಳುಹಿಸಲಾಗಿದೆ.ಭಾರತ ಸಂವಿಧಾನ ಅನುಚ್ಛೇದ 342(2) ಪ್ರಕಾರ ಯಾವುದೇ ಜಾತಿಯನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.