i
ಏಕನಾಥೇಶ್ವರಿ ದೇವಾಲಯದಿಂದ ಮಹಿಳೆ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಾವೇರಿ ಜಿಲ್ಲೆಯ ಹೀರೇಕೆರೂರು ತಾಲ್ಲೂಕಿನ ಹಂಸಬಾವಿ ಹೋಬಳಿಯ ಯಮಿಗನೂರು ಗ್ರಾಮದ ನಿವಾಸಿ ಭಾಗಮ್ಮ (65) ಎಂಬ ಮಹಿಳೆ ಜ.08 ರಂದು ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆ ಏಕನಾಥೇಶ್ವರಿ ದೇವಾಲಯದ ಹತ್ತಿರದಿಂದ ಸಂಜೆ 4.30 ಗಂಟೆಯಿAದ 5.30 ಗಂಟೆಯ ಮಧ್ಯದ ಅವಧಿಯಲ್ಲಿ ಕಾಣೆಯಾಗಿರುತ್ತಾರೆ. ಈ ಕುರಿತು ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿರುವ ಮಹಿಳೆಯ ಚಹರೆ ಇಂತಿದೆ: ಚಪ್ಪಟೆ ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 4.8 ಅಡಿ ಎತ್ತರ, ಹಣೆಯಲ್ಲಿ ಅಚ್ಚೆ ಹಾಕಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ನೀಲಿ ಬಣ್ಣದ ಸೀರೆ, ಹಳದಿ ಬಣ್ಣದ ಜಾಕೆಟ್ ಧರಿಸಿರುತ್ತಾರೆ. ಕೊರಳಲ್ಲಿ ಗುಂಡಿನ ಸರ, ಎರಡೂ ಕೈಯಲ್ಲಿ ಹಸಿರು ಬಳೆ ಹಾಕಿರುತ್ತಾರೆ. ಕೈಯಲ್ಲಿ ಕೆಂಪು ಚೀಲವಿದ್ದು ಇರುತ್ತದೆ. ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ದೂರವಾಣಿ ಸಂಖ್ಯೆ 08194-222933, 9480803145, ಚಿತ್ರದುರ್ಗ ಉಪ ವಿಭಾಗ ಪೊಲೀಸ್ ಉಪಾಧೀಕ್ಷರ ದೂರವಾಣಿ ಸಂಖ್ಯೆ 08194-222430, 9480803145, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 08194-222782 ಗೆ ಸಂಪರ್ಕಿಸುವAತೆ ತಿಳಿಸಲಾಗಿದೆ.