
ಚಿತ್ರಲೇಖಾ ಮಂಜುನಾಥ್ ಎನ್ನುವ ಯುವತಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಚಿತ್ರಲೇಖ ಎಂ ಬಿನ್ ಮಂಜುನಾಥ (18) ವರ್ಷ ಇವರು ಜನವರಿ 10 ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಮಹಿಳೆಯ ಚಹರೆ ಇಂತಿದೆ : ಚಿತ್ರಲೇಖ ಎಂ 18 ವರ್ಷ, ಗಂಡನ ಹೆಸರು ಮಂಜುನಾಥ ಗೊಲ್ಲರ ಜನಾಂಗ, ಕೋಲು ಮುಖ, ಬಿಳಿ ಬಣ್ಣ, ಸಾದಾರಣ ಮೈ ಕಟ್ಟು, ಸ್ವಲ್ಪ ಉದ್ದನೆಯ ಕಪ್ಪು ಕೂದಲು, 5 ಅಡಿ ಎತ್ತರ, ಎಡಗೈನಲ್ಲಿ ನವಿಲು ಗರಿ ಅಚ್ಚೆ ಗುರುತು, ಬಲಗೈ ಮೇಲೆ ಪಕ್ಷಿಯ ಅಚ್ಚೆ ಗುರುತು, ಕನ್ನಡ ಮಾತನಾಡುತ್ತಾರೆ, ಪಿಂಕ್ ಕಲ್ಲರ್ ಚೂಡಿದಾರ್, ಕಪ್ಪು ಕಲ್ಲರ್ ಪ್ಯಾಂಟ್, ಕಡು ನೀಲಿ ಬಣ್ಣದ ವೇಲ್ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ದೂರವಾಣಿ ಸಂಖ್ಯೆ: 9480803149, ಎಸ್ಡಿಪಿಒ : 08194-222430, ಡಿಪಿಒ: 08194-422781 ಗೆ ಸಂಪರ್ಕಿಸಬೇಕೆಂದು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ಉಪನಿರೀಕ್ಷಕರು ತಿಳಿಸಿದ್ದಾರೆ.