i
ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆ-ನೇರ ಫೋನ್ ಇನ್ ಕಾರ್ಯಕ್ರಮ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರು ಆಕಾಶವಾಣಿ ಕೇಂದ್ರವು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ಬಾನುಲಿ ಶಾಲೆ‘ ನೇರ ಫೋನ್ ಇನ್ ಕಾರ್ಯಕ್ರಮವನ್ನು 10.03.2023 ರಿಂದ 17.03.2023 ರವರೆಗೆ ಪೂರ್ವಾಹ್ನ 10 ರಿಂದ 11ರವರೆಗೆ ಪ್ರಸಾರ ಮಾಡಲಿದೆ.
ಎಸ್.ಎಸ್.ಎಲ್.ಸಿ ಯ ವಿಜ್ಞಾನ, ಗಣಿತ, ಕನ್ನಡ, ಹಿಂದಿ, ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ಪಾಠ ಮಾಲಿಕೆಯ ಈ ಸರಣಿಯಲ್ಲಿ ವಿವಿಧ ಅನುಭವಿ ಶಿಕ್ಷಕರು ಪಾಲ್ಗೊಳ್ಳುತ್ತಿದ್ದಾರೆ. ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು. ಫೋನ್ ಮಾಡಲು ದೂರವಾಣಿ ಸಂಖ್ಯೆಗಳು (0824)2211999, 8277038000.
ಲಯನ್ಸ್ ಕ್ಲಬ್ ಪ್ರಾಯೋಜಕತ್ವ ಹಾಗೂ ಉಡುಪಿ ಜಿಲ್ಲೆಯ ಸಾರ್ವಜನಿಕ ಇಲಾಖೆಯ ಸಹಯೋಗದೊಂದಿಗೆ ಮೂಡಿಬರಲಿರುವ ಈ ಕಾರ್ಯಕ್ರಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯಲು ಸಹಾಯಕವಾಗಬಹುದು ಎಂದು ನಿಲಯದ ಮುಖ್ಯಸ್ಥರು ತಿಳಿಸಿದ್ದಾರೆ.