Day: March 9, 2023

ಇಂದಿನ ಯುವ ಜನರ ಅಶಾಂತಿಗೆ ಕಾರಣ ಮತ್ತು ಪರಿಹಾರೋಪಾಯ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಇಂದಿನ ಮಕ್ಕಳು ನಾಳಿನ ಯುವ ಜನರು ಇಂದಿನ ಯುವಜನರು ನಾಳಿನ ಪ್ರಜೆಗಳು ಕೇವಲ ಪ್ರಜೆಗಳಷ್ಟೇ ಅಲ್ಲ ನಮ್ಮ ಪ್ರಜಾಪ್ರಭುತ್ವದ ಎಲ್ಲಾ ಸ್ಥರಗಳಲ್ಲಿಯೂ ನಾಡಿನ ಜವಾಬ್ದಾರಿಯನ್ನು ಹೊತ್ತು ನಡೆಸಿ ಕೊಡಬೇಕಾದವರು. ಅವರು ಸುಶಿಕ್ಷಿತರು ,ಸುಸಂಸ್ಕೃತರು, ಪ್ರಜ್ಞಾವಂತರು ಆದರೆ ದೇಶದ ಹಿತವು ಎಲ್ಲಾ ವಿಧಗಳಲ್ಲಿಯೂ ಸುರಕ್ಷಿತವಾಗುತ್ತದೆ. ಯಾವುದೇ ಒಂದು ದೇಶದ ಪ್ರಗತಿಯು ಆದೇಶದ ಸಮಾಜದ ಮೇಲೆ ಅವಲಂಬಿತವಾಗಿರುತ್ತದೆ.ಒಂದು ವೇಳೆ ಸಮಾಜ ಪತನಶೀಲವಾಗಿದ್ದು ಸಮಾಜದ ಯುವಶಕ್ತಿಯು ದುರ್ಗುಣಗಳಿಂದ ತುಂಬಿದ್ದರೆ ಆ ದೇಶದ ಪ್ರಗತಿ ಅಧಃಪತನ ಕೀಡಾಗುತ್ತದೆ. ಇದರ ವಿರುದ್ಧವಾಗಿ ಸಮಾಜದ ಯುವಶಕ್ತಿ ಸದ್ಗುಣ, ಸದಭಿರುಚಿ ಹೊಂದಿದ್ದರೆ ದೇಶವು ಉನ್ನತಿಯ ಶಿಖರವನ್ನು ಏರತೊಡಗುವುದು.ಮೌಲ್ಯಯುತ ಮಾನವಸಂಪನ್ಮೂಲ ಪ್ರತಿಯೊಂದು ದೇಶದ ಆಸ್ತಿ. ಆ ದೇಶವನ್ನು ಯುವಕರು ರೂಪಿಸುತ್ತಾರೆ. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು (ಶೇ. 65) ಯುವಕರನ್ನು ಹೊಂದಿದ ದೇಶವಾಗಿದ್ದು , ಯುವಕರೇ ಭಾರತದ ಭದ್ರ ಬುನಾದಿಯಾಗಿದ್ದಾರೆ. ಹೀಗಿರುವಾಗ ಪ್ರಸ್ತುತ ನಮ್ಮ ಯುವಜನಾಂಗದ ಸಮಸ್ಯೆಗಳು ,ಅವರ ಅಶಾಂತಿಗೆ ಕಾರಣಗಳು  ಹಾಗೂ ಸಮಸ್ಯೆಗಳಿಂದ ಹೊರಬರುವ ರೀತಿಯ ಕುರಿತಾಗಿ ಮಾತನಾಡುವುದಾದರೆ , ಶೈಕ್ಷಣಿಕ ಮತ್ತು ವೃತ್ತಿಪರ ಸಮಸ್ಯೆ :   ಶಿಕ್ಷಣದ ಮುಖ್ಯ ಗುರಿ ಯುವಕರಿಗೆ ಅಗತ್ಯವಾದ ಕೌಶಲ್ಯ ಪಡೆಯಲು ಸಹಾಯ ಮಾಡುವುದು ಮತ್ತು ಅವರು ಆಯ್ಕೆ ಮಾಡಿದ ಹಾಗೂ ಅವರು ಆಸಕ್ತಿಹೊಂದಿರುವ ಕ್ಷೇತ್ರಗಳಲ್ಲಿ ಅಗತ್ಯ ಪರಿಣತಿಯನ್ನು ಅಭಿವೃದ್ಧಿಪಡಿಸುವುದು. ಪ್ರಸ್ತುತ ಯುವಕರು ತಾವು ಯಾವ ವೃತ್ತಿ ಶಿಕ್ಷಣ ಪಡೆಯಬೇಕು ? ಎ೦ದು ಯೋಚಿಸುವುದರಲ್ಲಿಯೂ ಮತ್ತು ಓದಿಗಾಗಿ ವ್ಯಯಿಸುವ ಹಣಕ್ಕಾಗಿಯೂ , ತಾವು ಓದಿದ ಓದಿಗೆ ಆದಷ್ಟು ಬೇಗ ಕೆಲಸ ಸಿಗುವುದೇ ಎಂದು, ತಾವು ಆರಿಸಿದ ಉದ್ಯೋಗದಿಂದ ತಮ್ಮ ಅಹ೯ತೆಗೆ ತಕ್ಕಂತೆ ವೇತನ ಸಿಗುತ್ತದೆಯೇ ಎಂಬ ಹಲವಾರು ಶೈಕ್ಷಣಿಕ ಮತ್ತು ವೃತ್ತಿಪರ  ವಿಚಾರಗಳಿಂದಲೂ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ.ವಿಶ್ವವಿದ್ಯಾನಿಲಯಗಳು ಅಥವಾ ಸಂಸ್ಥೆಗಳಿಂದ ಪದವಿ ಪಡೆದ ನಂತರ ಹೆಚ್ಚಿನ ಯುವಜನರು ತಮ್ಮ ವಿಶೇಷತೆಯಲ್ಲಿ ಉದ್ಯೋಗವನ್ನು ಹುಡುಕುವ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಾರೆ. ಆರೋಗ್ಯ ಮತ್ತು ಜೀವನಶೈಲಿ ಸಮಸ್ಯೆ: ಉತ್ತಮ ಪೋಷಣೆ, ದೈನಂದಿನ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಅಡಿಪಾಯವಾಗಿದೆ.ಆರೋಗ್ಯಕರ ಜೀವನಶೈಲಿಯು  ಸದೃಡಶಕ್ತಿಯನ್ನು ಹೆಚ್ಚಿಸಿ, ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.ಫಾಸ್ಟ್ ಫುಡ್ ಮೋಜಿಗೆ ಬಿದ್ದ ಅನೇಕರು ಹೋಟೆಲ್ ಊಟಕ್ಕೆ ಮುಗಿಬಿದ್ದು ಮತ್ತು ಕುಡಿತದ ಚಟಕ್ಕೆ ದಾಸರಾಗಿ ಮನೆ ಊಟದ ಶುದ್ಧ ರುಚಿ ಅಲ್ಲಗಳೆದು ಚಾರ್ಟ್ಸ್ ಗಳಿಗೆ ಮಾರುಹೋಗಿದ್ದಾರೆ. ಫಾಸ್ಟ್ ಫುಡ್  ಜೀರ್ಣಕ್ರಿಯೆ, ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾದಕ ವ್ಯಸನವು ಯುವಜನರ ಸಮಸ್ಯೆಯಾಗಿರುವುದರಿಂದ ಸಾಮಾಜಿಕ ಪರಿಣಾಮಗಳ ತೀವ್ರತೆಯು ಉಲ್ಬಣಗೊಳ್ಳುತ್ತಲೇ ಇದೆ. ಸರಿಯಾದ ಜೀವನ ಶೈಲಿ  ರೂಢಿಸಿಕೊಳ್ಳದೆ  ವ್ಯಾಯಾಮ , ಯೋಗದಿಂದ ವಂಚಿತರಾಗಿ , ಅನಾರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನಗುರುತಿಸಿಕೊಳ್ಳದೆ  ದಿನದೂಡುವ ಸಮಸ್ಯೆಗೆ  ಸಿಲುಕಿ ಕೊಂಡಿದ್ದಾರೆ.ಆರೋಗ್ಯಕರ ಜೀವನವು  ಜೀವನದ ಹೆಚ್ಚಿನ ಅಂಶಗಳನ್ನು ಆನಂದಿಸಲು ಸಹಾಯ ಮಾಡುವ ಜೀವನ ವಿಧಾನವಾಗಿದೆ. ಹಾಗಾಗಿ ಜೀವನ ಶೈಲಿ ರೂಪಿಸಿಕೊಂಡವರು ಆರೋಗ್ಯಯುತರಾಗಿ  ಸಮಸ್ಯೆಗೆ ಸಿಲುಕದೆ ಕರ್ತವ್ಯ ನಿರತರಾಗಲು ಸಹಾಯಕವಾಗುತ್ತದೆ. ಸಂಬಂಧಗಳ ಸಂಭಾಳಿಸುವ ಸಮಸ್ಯೆ:   ಮನುಷ್ಯನು ಸಂಘ ಜೀವಿ ಅವನು ಹುಟ್ಟಿನಿಂದ ಸಾಯುವವರೆಗೂ ಅವನು ಸುತ್ತಲಿನ ಎಲ್ಲರೊಂದಿಗೆ ಸಂವಹನ ನಡೆಸುತ್ತಾನೆ ಮತ್ತು ಅವನ ವ್ಯಕ್ತಿತ್ವ ಮತ್ತು ಅವನ ಪಥವನ್ನು ರೂಪಿಸುವ ಸಂಬಂಧಗಳ ಜಾಲದಲ್ಲಿ ವಾಸಿಸುತ್ತಿದ್ದಾನೆ. ಸಂಬಂಧಗಳು ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಅಡಿಪಾಯಗಳಾಗಿವೆ. ಆದರೆ ಯುವಕರು ತಮ್ಮ ಹೆತ್ತವರು  ನೀಡುವ ಉಪದೇಶಗಳನ್ನು ಧಿಕ್ಕರಿಸಿ ತಮ್ಮದೇ ಧಾಟಿಯಲ್ಲಿ ಮಾತಾಡುವ ಪ್ರವೃತ್ತಿ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅದೇ ಸಿಟ್ಟಿನಲ್ಲಿ ಮತ್ತೊಬ್ಬರ ಮೇಲೆ ತಮ್ಮ ಕೋಪ ತೋರಿಸಿಕೊಳ್ಳುತ್ತಾ  , ಗೆಳೆಯರನ್ನು ದೂರಮಾಡಿಕೊಂಡು ಏಕಾಂಗಿಯಾದೆ ಎಂದು  ಕೊರಗುವುದರಲ್ಲಿಯೇ ಸಮಯ ಕಳೆಯುತ್ತಾರೆ . ಇತ್ತ ಸಮಯವೂ ಹಾಳು ಹಾಗೂ ಭವಿಷ್ಯದ ಆಲೋಚನೆಗಳ ಚಿಗುರು ಮೊಳಕೆ ಹೊಡೆಯದೆ ಕೊಳೆಯುವ ಪರಿಸ್ಥಿತಿಯನ್ನು ಪ್ರಸ್ತುತ ಯುವಕರೇ ಎದುರಿಸುತ್ತಿದ್ದಾರೆ. ವ್ಯಕ್ತಿತ್ವ ಬೆಳವಣಿಗೆಯ ಸಮಸ್ಯೆ:ಆಂತರಿಕ ಮತ್ತು ಬಾಹ್ಯ ಸಾಂದರ್ಭಿಕ ಬೇಡಿಕೆಗಳಿಂದಾಗಿ ವ್ಯಕ್ತಿತ್ವದ ಲಕ್ಷಣಗಳು ಬದಲಾಗಬಹುದು. ಆದ್ದರಿಂದ, ವ್ಯಕ್ತಿತ್ವವು ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತದೆ. ತಮ್ಮನ್ನು ತಾವು ಅರಿಯದೆ ಇನ್ನೊಬ್ಬರು ನಿರೀಕ್ಷಿಸಿದಂತೆ ನಡೆದುಕೊಳ್ಳುತ್ತಾ  ಹೋದರೆ ಸ್ವಂತಿಕೆ ಇರಲಾರದೆಯೇ ಕೀ ಗೊಂಬೆ ಆಗುತ್ತೇವೆ. ತಾನು ಹೇಗೆ ನಡೆದುಕೊಳ್ಳಬೇಕು? ಹೀಗೆ ನಡೆದುಕೊಂಡರೆ ಎದುರಿಗೆ  ಇರುವವರಿಗೆ ಏನು ಅನಿಸುತ್ತೆ ? ಅವರು ತಪ್ಪು ತಿಳಿದುಕೊಂಡರೆ ? ನನ್ನನ್ನು ನಾನು  ಹೇಗೆ  ರೂಪಿಸಿಕೊಳ್ಳಬೇಕು ? ಯಾರ ಆದರ್ಶನಗಳನ್ನು  ಪಾಲಿಸಲಿ? ನನ್ನ ಒಳ್ಳೆಯ ಕಾರ್ಯ ಬೇರೆಯವರು ನೋಡದೆ ಇದ್ದರೆ ನಾನು ಮಾಡಿದ ಕೆಲಸ ವ್ಯರ್ಥವಲ್ಲವೆ ? ಎಂಬಂತಹ  ಗೊಂದಲಗಳು ಸಹ  ಅನೇಕರಲ್ಲಿ ಇರುವುದನ್ನು ನಾವು ಕಾಣಬಹುದು.ಆಧುನಿಕ ಯುವಕರು ನೈತಿಕತೆಯ ಕೊರತೆಯಿಂದ ಭ್ರಷ್ಟರಾಗಿದ್ದಾರೆ. ನೈತಿಕ ಭಾವನೆಗಳು ವ್ಯಕ್ತಿಯ ಅಳಿವು ಮತ್ತು ಉಳಿವಿಗೆ ಕಾರಣವಾಗಿದೆ.ಜನರ ನೈತಿಕ ಪರಿಪೂರ್ಣತೆ ಮಾತ್ರ ಸಾಮಾಜಿಕ ಜೀವನದ ರಚನೆಯನ್ನು ಸುಧಾರಿಸುತ್ತದೆ”...
ವಿಧಾನಸಭಾ ಚುನಾವಣಾ ಪೂರ್ವತಯಾರಿ ಪರಿವೀಕ್ಷಣೆಗೆ ಆಗಮಿಸಿದ ಚುನಾವಣಾ ಆಯೋಗದ ತಂಡ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಮುಂಬರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ –...
ಇಂದಿನ ಯುವ ಜನರ ಅಶಾಂತಿಗೆ ಕಾರಣ ಮತ್ತು ಪರಿಹಾರೋಪಾಯ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಇಂದಿನ ಮಕ್ಕಳು ನಾಳಿನ ಯುವ ಜನರು ಇಂದಿನ ಯುವಜನರು...
ಮತದಾರನ ಹೆಗಲ ಮೇಲೆ ಜೆಡಿಎಸ್ ಅಭ್ಯರ್ಥಿ ತಿಪ್ಪೇಸ್ವಾಮಿ… ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:  ಬೈಕ್ನೋಲ್ಲೋ, ಕಾರ್ನೊಲ್ಲೋ, ನಡ್ಕೊಂಡೋ ಅಥವಾ ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ...
ಹೆಣ್ಣೆಂದರೆ ಸೌಂದರ್ಯವಲ್ಲ, ಹೆಣ್ಣೆಂದರೆ ಭೋಗದ ವಸ್ತುವಲ್ಲ,…. ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ……….. ಮಾರ್ಚ್ 8…….. ಹೆಣ್ಣೆಂದರೆ ಪ್ರಕೃತಿಯಲ್ಲ,...