i
ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ, ಲೀಟರ್ ಗೆ 2.10 ರೂ.ಹೆಚ್ಚಳ…
ಚಂದ್ರವಳ್ಳಿ ನ್ಯೂಸ್, ಕೋಲಾರ: Milk production
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2.10 ರೂ. ಹೆಚ್ಚುವರಿ ನೀಡಲು ಕೋಲಾರ ಹಾಲು ಒಕ್ಕೂಟ ತೀರ್ಮಾನಿಸಿದ್ದು ಮಾರ್ಚ್ 16 ರಿಂದ ಜಾರಿಗೆ ಬರಲಿದೆ.
ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೋಚಿಮುಲ್ ಒಕ್ಕೂಟ ಮಾರ್ಚ್ 16 ರಿಂದ ಜಾರಿಗೆ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ 2.10 ರೂ.ಹೆಚ್ಚುವರಿ ಹಣ ನೀಡಲು ತೀರ್ಮಾನಿಸಿದೆ.
ರಾಜ್ಯದ 14 ಹಾಲು ಒಕ್ಕೂಟಗಳಿಗಿಂತ ಕೋಲಾರ ಜಿಲ್ಲೆಯ ಒಕ್ಕೂಟ ಅತಿಹೆಚ್ಚು ಬೆಲೆಯನ್ನು ರೈತರಿಗೆ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಕೋಲಾರ ಹಾಲು ಒಕ್ಕೂಟವು ಸದ್ಯ ಪ್ರತಿ ಲೀ.ಹಾಲಿಗೆ 31.90 ರೂ. ನೀಡುತ್ತಿದ್ದು, 2.10 ರೂ. ಹೆಚ್ಚಿಸಿ, 33.90 ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡಲು ಒಕ್ಕೂಟ ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.