
ಉರಿಗೌಡ- ನಂಜೆಗೌಡ ಹೆಸರೇಳಿ ಯಾವುದೇ ಜನಾಂಗ ಇಯಾಳಿಸುವ ಕೆಲಸ ಮಾಡಿಲ್ಲ-ಸಚಿವ ಆರ್. ಅಶೋಕ್…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನನ್ನ ನೇತೃತ್ವದಲ್ಲಿ 50 ಕ್ಷೇತ್ರದಲ್ಲಿ ಸಂಕಲ್ಪ ಯಾತ್ರೆ ನಡೆಯುತ್ತಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿದರು.
ಚಳ್ಳಕೆರೆ ನಗರದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ಉತ್ತಮವಾದ ವಾತಾವರಣ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಲ್ಲೊಂದು ಇಲ್ಲೊಂದು ಕಡೆ ಹೋಗುತ್ತಿದ್ದಾರೆ. ಜನರಲ್ಲಿ ಬಿಜೆಪಿ ಪರ ಮತ ಹಾಕಲು ಜಾಗೃತಿ ಮೂಡಿಸುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ತರಲು ಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಉರಿಗೌಡ ನಂಜೆಗೌಡ ಇತಿಹಾಸ ಹೇಳಿದಾಗೆ ನಮ್ಮ ಪಕ್ಷದ ನಿಲುವಿದೆ. ಇತಿಹಾಸ ಪುರುಷರ ಹೆಸರೇಳಿ ಯಾವುದೇ ಜನಾಂಗ ಇಯಾಳಿಸುವ ಕೆಲಸ ಮಾಡಿಲ್ಲ. ಮತ್ತೋಮ್ಮೆ ಈ ಕುರಿತು ಪರಿಶೀಲನೆ ಮಾಡೋಣ. ಅಶ್ವತ್ ನಾರಾಯಣ ಜೊತೆಗೆ ಈ ಕುರಿತು ಚರ್ಚೆ ಮಾಡುವೆ ಎಂದು ತಿಳಿಸಿದರು.
ಜೆಡಿಎಸ್- ಮೊದಲು ರಾಜ್ಯ ಹಂತದ ಪಕ್ಷ ಇತ್ತು ಈಗ ಮಂಡ್ಯ ಹಾಸನಕ್ಕೆ ನಿಂತಿದೆ, ಮುಂದೆ ಒಂದು ಜಿಲ್ಲೆಗೆ ಆಗುವುದು ಬೇಡ ಜಾತಿ ಹೆಸರಲ್ಲಿ ಕುಮಾರ್ ಸ್ವಾಮಿ ಗಿಮಿಕ್ ಮಾಡಬಾರದು ಎಂದು ಹೇಳಿದರು.
ಉರಿಗೌಡ- ನಂಜೆಗೌಡ ವಿಷಯ ಬೇರೆ, ರಾಜಕೀಯ ಬೇರೆ. ಕುಮಾರ ಸ್ವಾಮಿ ಅವರಿಗೆ ಗೊಂದಲ ಇದೆ, ಹಾಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡೋಣಾ ಇತಿಹಾಸ ಯಾರು ಕೂಡಾ ತಿರುಚಲು ಸಾಧ್ಯವಿಲ್ಲ. ಜೆಡಿಎಸ್ ಯಾರನ್ನ ಬೇಕೋ ಅವರನ್ನ ವಿಲನ್ ಮಾಡುವುದು ಕಟ್ಟಿಟ್ಟ ಬುತ್ತಿ. ಶ್ರೀನಿವಾಸ್ ಗೌಡ ಪಕ್ಷ ಬಿಟ್ಟು ಆರು ತಿಂಗಳಾಗಿದೆ ಎಂದು ಅಶೋಕ್ ತಿಳಿಸಿದರು.
ಎಲ್ಲಾ ಟೋಲ್ ವಿಷಯ ತೆರೆದ ಪುಸ್ತಕ. ಟೋಲ್ ಮಾಡುವಾಗ ಒಂದು ನೀತಿ ನಿಯಮ ಇದೆ. ಯಾವುದೇ ಶುಲ್ಕದ ವಿಷಯದಲ್ಲಿ ವಿಶೇಷ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದರೆ ಕಾನೂನು ಹೋರಾಟ ಮಾಡಲಿ. ಮೋದಿ ಅವರು ರೋಡ್ ಷೋ ಮಾಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹೊಟ್ಟೆ ಉರಿ. ಪುನೀತ್ ರಾಜ್ಕುಮಾರ್ ಅವರಿಗೆ ಸಕಲ ಗೌರವ ನೀಡಿದ ಪಕ್ಷ ನಮ್ಮದು. ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದು ನಮ್ಮ ಪಕ್ಷ. 12 ಕಿಲೋಮೀಟರ್ ರಸ್ತೆಗೆ ಪುನೀತ್ ಹೆಸರು ಇಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು.