
ರೈತ ಮುಖಂಡರಾದ ಮಾರುತಿ, ಕಾಂತರಾಜ್ ನೇತೃತ್ವದ ತಂಡ ಶಾಸಕ ರಘುಮೂರ್ತಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಸರ್ಕಾರದಿಂದ ಮಾತ್ರ ರೈತರ ನೆಮ್ಮದಿ ಬದುಕು ನಡೆಸಲು ಸಾಧ್ಯ, ರೈತರ ನಮ್ಮ ದೇಶದ ಆಸ್ತಿ ಅವರ ಬೆಂಬಲಕ್ಕೆ ಸದಾ ನಾನು ಇರುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶಾಸಕ ನಿವಾಸದಲ್ಲಿ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ರೈತ ಮುಖಂಡರಾದ ಮಾರುತಿ ಮತ್ತು ಕಾಂತರಾಜ್ ನೇತೃತ್ವದ ತಂಡವನ್ನು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು.
ಹುಣಸೇಕಟ್ಟೆ ಗ್ರಾಮದ ರೈತರ 30 ಕ್ಕೂ ಹೆಚ್ಚು ರೈತ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಶಕ್ತಿ ತಂದಿದೆ. ಹುಣಸೇಕಟ್ಟೆ ನನ್ನ ತವರೂರು ಇದ್ದಂತೆ ಎಂದರು.
ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಚಳ್ಳಕೆರೆ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ನಿಮ್ಮನ್ನು ಬೆಂಬಲಿಸುತ್ತಿದ್ದೇವೆ ಎಂದು ರೈತರು ತಿಳಿಸಿದ್ದು ಸಂತೋಷ ತಂದಿದೆ. ಅವರ ವಿಶ್ವಾಸವನ್ನು ಉಳಿಸುವಂತೆ ಮುಂದಿನ ದಿನದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಪ್ರತಿ ಹಳ್ಳಿಯಲ್ಲಿ ಯುವಕರು,ಬುದ್ದಿಜೀವಿಗಳು, ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು ಈ ಬಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ನಿಮ್ಮ ಕಷ್ಟ ಸುಖಗಳಿಗೆ ನಿಮ್ಮ ಜೊತೆ ನಾನಿರುತ್ತೇನೆ. ನಮ್ಮ ವಿರೋಧಿಗಳು ಆಮಿಷ ಒಡ್ಡಿ ಮುಖಂಡರು ಖರೀದಿ ಮಾಡಲು ಆಗಲ್ಲ. ಎಲ್ಲಾ ನನ್ನ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಭಿಮಾನಿಗಳು. ನಿಮ್ಮ ಆಟ ನಡೆಯಲ್ಲ. ಕಾಂಗ್ರೆಸ್ ಪಕ್ಷದ ಶಕ್ತಿ ಎಲ್ಲಾರಿಗೂ ಗೊತ್ತಿದೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿ ಎಂದರು.
ನಾಲ್ಕು ವರ್ಷಗಳ ಕಾಲ ಕ್ಷೇತ್ರದಲ್ಲಿ ಜನರ ಕಷ್ಟ ಕೇಳದವರು ಚುನಾವಣೆ ಬಂದಾಗ ಮಾತ್ರ ಚಳ್ಳಕೆರೆ ಜನ ಬೇಕಾಗುತ್ತಾರಾ, ನಮ್ಮ ಜನರು ಬುದ್ದಿವಂತರು ಯಾರಿಗೆ ಯಾವ ಸಮಯದಲ್ಲಿ ಉತ್ತರ ಕೊಡಬೇಕು ಎಂಬುದು ಗೊತ್ತಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ತಿಳಿಸಿದರು. ರೈತ ಮುಖಂಡರಾದ ಕಾಂತರಾಜ್, ಮಾರುತಿ, ಉಮೇಶ್, ಓಬಣ್ಣ, ಜಯ್ಯಪ್ಪ, ರಾಘವೇಂದ್ರ,ಏಕಣ್ಣ, ಶಾಂತಪ್ಪ, ತಿಪ್ಪೇಸ್ವಾಮಿ, ಮೂರ್ತಿ, ಮಹಂತೇಶ್, ವೆಂಕಟೇಶ್, ಮಂಜುನಾಥ್, ಸುರೇಶ್, ಮಹಂತಣ್ಣ, ಸಂತೋಷ್, ಮಹಂತೇಶ್, ತಿಪ್ಪೇಸ್ವಾಮಿ ಸೇರಿ 30 ಕ್ಕೂ ಹೆಚ್ಚು ಜನ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ, ವೆಂಕಟೇಶ್ ಇದ್ದರು.