
ಅಡಿಕೆಗೆ ಸಹಾಯ ಧನ ವಿಸ್ತರಣೆಗೆ ಕ್ರಮ: ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಅಡಿಕೆ ಬೆಳೆಗೆ ಸಹಾಯ ಧನ ವಿಸ್ತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹೊಳಲ್ಕೆರೆಯಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಹನಿ ನೀರಾವರಿ ಜೊತೆಗೆ ಸೇರಿಸಬೇಕೆಂದು ರೈತರ ಒತ್ತಾಯ ಇದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಸಾಕಷ್ಟು ಯೋಜನೆ ಈಗಾಗಲೇ ಹನಿ ನೀರಾವರಿಯಡಿ ಇದೆ. ಎಸ್.ಸಿ.ಎಸ್.ಟಿ ಯವರಿಗೆ ಶೇ 90 ರಷ್ಟು ಸಹಾಯಧನ ನೀಡಲಾಗುತ್ತಿದೆ . ತೋಟಗಾರಿಕೆಯಲ್ಲಿ ಅಡಿಕೆ ಸೇರಿದೆ. ಸಾಮಾನ್ಯ ವರ್ಗದವರಿವೆ ಶೇ 50 ರಿಂದ 75 ರಷ್ಟು ಹೆಚ್ಚಿಸಿದೆ. ವ್ಯಾಪ್ತಿ ವಿಸ್ತರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ನೀರಗಂಟಿಗಳ ಸಮಸ್ಯೆ ಇತ್ಯರ್ಥ–ನಗರ ಸ್ಥಳೀಯ ಸಂಸ್ಥೆಗಳ ನೀರಗಂಟಿಗಳು ಹಾಗೂ ಸ್ವಚ್ಚತಾ ಕಾರ್ಯ ಮಾಡುವವರು ಸರ್ಕಾರ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣೆ ಸಂದರ್ಭದಲ್ಲಿ ಬಹಳ ಜನ ಪ್ರತಿಭಟನೆ ಮಾಡುತ್ತಾರೆ. ನೀರಗಂಟಿಗಳ ಸಮಸ್ಯೆ ತಿಳಿದಿದ್ದು, ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ದುರ್ಗಕ್ಕೆ ಶಾ ಭೇಟಿ: ಅಮಿತ್ ಶಾ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಖಾತ್ರಿಪಡಿಸಿಲ್ಲ. ಬಹಳಷ್ಟು ಪ್ರಸ್ತಾವನೆಗಳು ಹೋಗಿದ್ದು, ದಿನಾಂಕ ನೋಡಿ ನಾಳೆ ನಾಡಿದ್ದರಲ್ಲಿ ಖಾತ್ರಿ ಪಡಿಸಬಹುದೆಂದರು.