
ಗಡಿ ಪ್ರದೇಶದಲ್ಲಿ ಕನ್ನಡದ ಅಸ್ಮಿತೆ ಉಳಿಸಿ-ಗಡಿ ಪ್ರಾಧಿಕಾರದ ಅಧ್ಯಕ್ಷ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಕರಂದ ಸ್ವರ ಸಂಗೀತ ಕಲಾ ಸಂಸ್ಥೆ ಇವರ ಇವರ ಸಹಯೋಗದಲ್ಲಿ ಮಾರ್ಚ್-14 ರಂದು ಭಾರತ ಸ್ವಾತಂತ್ರ್ಯ ಅಮೃತೋತ್ಸವ ಪ್ರಯುಕ್ತ ಜೊಯಿಡಾ ತಾ|| ನ ಉಳವಿ ಚೆನ್ನಬಸವೇಶ್ವರ ಸಭಾಂಗಣದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಉದ್ಘಾಟಿಸಿ ಕರ್ನಾಟಕ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಿ ಕನ್ನಡ ಅಸ್ಮಿತೆ ಸಂರಕ್ಷಿಸುವುದು ಗಡಿ ನಾಡಿನಲ್ಲಿ ಕ್ರಿಯಾಶೀಲರಾಗಿರುವ ಕನ್ನಡ ಪರ ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ ಎಂದು ಕರೆ ನೀಡಿದರು.
ಮಂಗಲಾ ಮಿರಾಶಿ, ಗ್ರಾಮ ಪಂಚಾಯಿತಿ ಸದಸ್ಯರು, ಉಳವಿ, ಮಂಜುನಾಥ ಎ ಮೊಕಾಶಿ, ಉಪಾಧ್ಯಕ್ಷರು ಗ್ರಾಮಪಂಚಾಯಿತಿ, ಉಳವಿ, ಸತೀಶ್ ಕುಲಕರ್ಣಿ, ಹಿರಿಯ ಕವಿಗಳು, ಹಾವೇರಿ, ಮಾಸ್ಕೇರಿ ಎಂ.ಕೆ. ನಾಯಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿಗಳು, ಖ್ಯಾತ ಸಂಗೀತಗಾರರಾದ, ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ, ಮೃತ್ಯುಂಜಯ ದೊಡ್ಡವಾಡ ರವರು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕಲಾವಿದರಿಂದ ಸಮೂಹ ಗಾಯನ, ಕವಿಕಾವ್ಯ ಗಾಯನ, ಕವಿಗೋಷ್ಠಿ ಇತ್ಯಾದಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.