
ಶಾಸಕ ತಿಪ್ಪಾರೆಡ್ಡಿ ಮಗ್ಗಲು ಮುಳ್ಳು ಎಂಬ ಹೆಸರಿನ ಭಿತ್ತಿ ಪತ್ರ ಹಚ್ಚಿದ ಕಿಡಿಗೇಡಿಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ಕಿಡಿಗೇಡಿಗಳು ಶಾಸಕ ತಿಪ್ಪಾರೆಡ್ಡಿ ಮಗ್ಗಲು ಮುಳ್ಳು ಎಂಬ ಹೆಸರಿನ ಭಿತ್ತಿ ಪತ್ರಗಳನ್ನು ಗೋಡೆಗಳಿಗೆ ಹಚ್ಚಿರುವ ಘಟನೆ ಚಿತ್ರದುರ್ಗ ನಗರದ MK ಹಟ್ಟಿ ಸಮೀಪದ ಹೈವೇ ಅಂಡರ್ ಪಾಸ್ ಬಳಿ ಜರುಗಿದೆ.
ಸಮಸ್ತ MK ಹಟ್ಟಿ ಸ್ವಾಭಿಮಾನಿಗಳ ವತಿಯಿಂದ ಶಾಸಕ ತಿಪ್ಪಾರೆಡ್ಡಿ ಅವರಿಗೆ ಮಗ್ಗಲು ಮುಳ್ಳು ಬಿರುದು ಎಂದು ಉಲ್ಲೇಖ ಮಾಡಲಾಗಿದೆ.
ಲಾಕ್ ಡೌನ್ ವೇಳೆ ನಿಮ್ಮೂರಿನವರು ಮತ ಹಾಕಿಲ್ಲ ಹೋಗಿ ಎಂದು ವಾಪಸ್ ಕಳಿಸಿದ್ದ ಶಾಸಕರು. 3 ವರ್ಷದಿಂದ ಯಾವುದೇ ಅನುದಾನ ನೀಡದೆ ಮೋಸ ಮಾಡಿದ್ದೀರಿ ಎನ್ನುವ ಆರೋಪ ಮಾಡಲಾಗಿದೆ.
ಅಂಡರ್ ಪಾಸ್ ವಿಚಾರ ಪ್ರಶ್ನೆ ಮಾಡಿದ್ದಕ್ಕೆ ನೀವು ಓಟ್ ಹಾಕಲ್ಲ, ನಾನು ಕೆಲಸ ಯಾಕೆ ಮಾಡಬೇಕು ಎಂದು ಬೇಜಾವಬ್ದಾರಿ ಉತ್ತರವನ್ನ ಶಾಸಕರು ನೀಡಿದ್ದರು. ಬೌನ್ಸರ್ ಕೆಲಸ ಮಾಡುತ್ತಿದ್ದ MK ಹಟ್ಟಿ ಹುಡುಗರನ್ನ ರೌಡಿಗಳು ಎಂದು ತಿಪ್ಪಾರೆಡ್ಡಿ ಬಿಂಬಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇಂತಿ ತಿಪ್ಪಾರೆಡ್ಡಿ ಯಿಂದ ಅವಮಾನಕ್ಕೆ ಒಳಗಾದವರು ಎಂದು ಪತ್ರ ಬರೆದು ಗೋಡೆಗೆ ಅಂಟಿಸಿದ ಅಪರಿಚಿತ ವ್ಯಕ್ತಿಗಳು ಹೈವೇ ರಸ್ತೆಯ ಗೋಡೆಗಳ ಮೇಲೆ ಭಿತ್ತಿ ಪತ್ರ ಹಚ್ಚಿ ಶಾಸಕರಿಗೆ ಅವಹೇಳನ ಮಾಡಿದ್ದಾರೆ. ಈ ಕುರಿತು ಸಂತೋಷ್ ಕುಮಾರ್ ಎಂಬಾತನಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದ್ದದು ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.