i
ವಿಧಾನಸಭಾ ಚುನಾವಣೆ ಅಬಕಾರಿ ಅಕ್ರಮ ತಡೆಗಾಗಿ ಮಾಹಿತಿ ನೀಡಲು ಮನವಿ…
ಚಂದ್ರವಳ್ಳಿ ನ್ಯೂಸ್, ಚಿತ್ರುದುರ್ಗ:
ವಿಧಾನಸಭಾ ಚುನಾವಣೆ-2023ರ ಸಂಬಂಧ ಅಬಕಾರಿ ಅಕ್ರಮಗಳನ್ನು ತಡೆಗಟ್ಟಿ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಕಾರ್ಯವ್ಯಾಪ್ತಿಯ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದೆ.
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಏಪ್ರಿಲ್-ಮೇ ತಿಂಗಳುಗಳಲ್ಲಿ ನಡೆಯಲಿದ್ದು, ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯುವ, ಒಲೈಸುವ ಸಲುವಾಗಿ ಕಳಪೆ ಗುಣಮಟ್ಟದ ನಕಲಿ ಮದ್ಯ ಮತ್ತು ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಸಾಗಾಣಿಕೆ, ಶೇಖರಣೆ ಮಾಡಿ, ಸಾರ್ವಜನಿಕರಿಗೆ ವಿತರಿಸುವ ಸಂಭವವಿದ್ದು, ಇಂತಹ ಕಳಪೆ ಗುಟ್ಟಮಟ್ಟದ ಮದ್ಯ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆದ ಗಂಭೀರ ಸ್ವರೂಪದ ದುಷ್ಪಾರಿಣಾಮದ ಜೊತೆಗೆ ಅಮೂಲ್ಯ ಜೀವ ಕಳೆದುಕೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಸಾರ್ವಜನಿಕರು ಅನಧಿಕೃತ ಸ್ಥಳಗಳಲ್ಲಿ ಮಾರಾಟ ಮಾಡಲಾಗುವ ಕಳಪೆ ಗುಟ್ಟಮಟ್ಟದ ನಕಲಿ ಮದ್ಯ ಮತ್ತು ಕಳ್ಳಭಟ್ಟಿ ಸಾರಾಯಿ ಸೇವಿಸಬಾರದು ಎಂದು ತಿಳಿಸಿದೆ.
ಅನಧಿಕೃತ ಸ್ಥಳಗಳಲ್ಲಿ ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಸುವುದು, ಮಾರಾಟ ಮಾಡುವುದು, ಸೇವಿಸುವುದು ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಅಪರಾಧವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆ-2023ರ ಸಂಬಂಧ ಅಬಕಾರಿ ಅಕ್ರಮ ತಡೆಗಟ್ಟಿ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಕಾರ್ಯ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಸಾರ್ವಜನಿಕರಲ್ಲಿ ತಿಳಿಯಪಡಿಸಿದೆ. ಅಲ್ಲದೇ ಇಂತಹ ಕೃತ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಬಕಾರಿ ಇಲಾಖೆಯ ಟೋಲ್ ಫ್ರೀ ನಂಬರ್ 18004253521 ಗೆ ಮಾಹಿತಿ ನೀಡಬೇಕೆಂದು ಹಾಗೂ ಇಲಾಖೆಯ ಜಿಲ್ಲಾ ಉಪವಿಭಾಗ, ವಲಯ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ ಸ್ಥಿರ ದೂರವಾಣಿ ಹಾಗೂ ಅಧಿಕಾರಿಗಳ ಮೊಬೈಲ್ ನಂಬರಿಗೆ ದೂರು, ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.
ಅಬಕಾರಿ ಅಧಿಕಾರಿಗಳ ದೂರವಾಣಿ ವಿವರ ಇಂತಿದೆ. ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಉಪ ಆಯುಕ್ತರ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 18004253521, ಮೊಬೈಲ್ ಸಂಖ್ಯೆ 9449597056, ಅಬಕಾರಿ ಉಪ ಆಯುಕ್ತರ ಕಚೇರಿಯ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194-222215, ಮೊಬೈಲ್ ಸಂಖ್ಯೆ 9449597058 ಗೆ ಸಂಪರ್ಕಿಸಬಹುದು.
ಚಿತ್ರದುರ್ಗ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ದೂರವಾಣಿ ಸಂಖ್ಯೆ 08194-230668, 9449597059, 8861393358. ಹಿರಿಯೂರು ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕ ದೂರವಾಣಿ ಸಂಖ್ಯೆ 08193-200133, 9449597775, 9481178474. ಚಿತ್ರದುರ್ಗ ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08194-231393, 9482088555. ಹಿರಿಯೂರು ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08193-200132, 8660075704. ಹೊಳಲ್ಕೆರೆ ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08191-295001, 9480268687. ಹೊಸದುರ್ಗ ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08199-295101, 8123039268. ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08195-200006, 9611976385. ಮೊಳಕಾಲ್ಮೂರು ವಲಯ ಅಬಕಾರಿ ನಿರೀಕ್ಷಕರ ದೂರವಾಣಿ ಸಂಖ್ಯೆ 08198-200750, 9844505171 ಗೆ ಸಂಪರ್ಕಿಸಬಹುದಾಗಿದೆ.
ದೂರು ನೀಡಿದಂತಹ ಮಾಹಿತಿದಾರರ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಅಬಕಾರಿ ಉಪ ಆಯುಕ್ತ ಬಿ. ಮಾದೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.