i
ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.ed) ಕೋರ್ಸು ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಜಿಗಳನ್ನು UUCMS Portal ಜಾಲತಾಣ: https://uucms.karnataka.gov.in/Login/Index
ಮುಖಾಂತರ ಸಲ್ಲಿಸಬಹುದಾಗಿದೆ.
ಪ್ರತಿ ಅರ್ಜಿಗೆ ಪ್ರವೇಶಾತಿ ಶುಲ್ಕ ರೂ.500/-, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ವರ್ಗ-1 ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.250/-, ಅಭ್ಯರ್ಥಿಗಳು ಅರ್ಜಿ ಶುಲ್ಕ ಅಂತರ್ಜಾಲದ ಮೂಲಕ ಮಾತ್ರ ಪಾವತಿಸಬೇಕು.
ಅಂರ್ತಜಾಲದಲ್ಲಿ ದಂಡ ಶುಲ್ಕವಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 27, ದಂಡ ಶುಲ್ಕ ಸಹಿತ ರೂ.100/- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 30, ಜೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ ಏಪ್ರಿಲ್ 03, ಸಮಾಲೋಚನಾ ದಿನಾಂಕ ಏಪ್ರಿಲ್ 5, ಪ್ರವೇಶಾತಿ ಶುಲ್ಕ UUCMS Portal ನಲ್ಲಿ ಪಾವತಿಸಲು ದಂಡ ಶುಲ್ಕ ರಹಿತ ದಿನಾಂಕ ಏಪ್ರಿಲ್ 11, ದಂಡ ಶುಲ್ಕ ಸಹಿತ ರೂ.500/- ಪಾವತಿಸಲು ದಿನಾಂಕ ಏಪ್ರಿಲ್ 13 ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.