i
ದೆಹಲಿಯಲ್ಲಿ ಮತ್ತೆ ಭೂ ಕಂಪನ, ಜನರಲ್ಲಿ ಹೆಚ್ಚಿದ ಆತಂಕ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೆಹಲಿಯಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನಗಳಲ್ಲಿ ಎರಡು ಸಲ ಭೂ ಕಂಪನ ಆಗಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಬುಧವಾರ ಸಂಜೆ 4.22ಕ್ಕೆ ಲಘು ಭೂಕಂಪನದ ಅನುಭವವಾಗಿದ್ದು ಅದರ ತೀವ್ರತೆ 2.7 ಎಷ್ಟು ಭೂಕಂಪನದ ಅನುಭವವಾಗಿದೆ.
ಮಂಗಳವಾರ ರಾತ್ರಿ 10.17ಕ್ಕೆ ದೆಹಲಿಯಲ್ಲಿ ಭೂಕಂಪನದ ಅನುಭವವಾಗಿತ್ತು. ರಾತ್ರಿ ಭೂಕಂಪ ಸಂಭವಿಸಿದೆ. ಭೂಕಂಪನದ ನಂತರ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದರು. ದೆಹಲಿ-ಎನ್ಸಿಆರ್ ಮತ್ತು ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಭೂಕಂಪದಿಂದ ಬಲವಾದ ನಡುಕ ಉಂಟಾಗಿದೆ.