
ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ಮೇಲೆ ಗುಂಡಿನ ದಾಳಿ…
ಚಂದ್ರವಳ್ಳಿ ನ್ಯೂಸ್, ಬಿಹಾರ:
ದುಷ್ಕರ್ಮಿಗಳು ಯಾವಾಗ ಯಾವ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆಂದು ಹೇಳಲು ಆಗುವುದಿಲ್ಲ. ಬಿಹಾರ ರಾಜ್ಯದಲ್ಲೊಂದು ದುರ್ಘಟನೆ ಸಂಭವಿಸಿದ್ದು ಭೋಜ್ಪುರಿ ಚಿತ್ರರಂಗದ ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಲೈವ್ ಕಾರ್ಯಕ್ರಮದಲ್ಲೇ ನಿಶಾ ಉಪಾಧ್ಯಾಯ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದು ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ತಕ್ಷಣ ಪಾಟ್ನಾದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಂತಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೇಂದೂರ್ ಗ್ರಾಮದಲ್ಲಿ ಉಪನಯನ ಸಂಸ್ಕಾರ ಕಾರ್ಯಕ್ರಮದಲ್ಲಿ ನಿಶಾ ಉಪಾಧ್ಯಾಯ ಅವರು ಹಾಡುವುದಕ್ಕೆ ಸರನ್ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ ಕಾರ್ಯಕ್ರಮದ ಮಧ್ಯದಲ್ಲಿ, ಸ್ಥಳೀಯ ಜನರು ಸಂಭ್ರಮದಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಈ ವೇಳೆ ನಿಶಾ ಅವರ ಕಾಲಿಗೆ ಗುಂಡು ತಗುಲಿದೆ ಎನ್ನಲಾಗಿದೆ.
ಸರನ್ ಜಿಲ್ಲೆಯ ಸೇಡೂರ್ ಗ್ರಾಮದ ವೀರೇಂದ್ರ ಸಿಂಗ್ ಎಂಬುವವರ ಮನೆಯಲ್ಲಿನ ಕಾರ್ಯಕ್ರಮ ಒಂದರಲ್ಲಿ ರಸಮಂಜರಿ(ಸಂಗೀತ) ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮವನ್ನು ನಿಶಾ ನಡೆಸಿ ಕೊಡುತ್ತಿದ್ದ ಈ ವೇಳೆ, ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆ ಗುಂಡು ಗಾಯಕಿ ನಿಶಾ ಉಪಾಧ್ಯಾಯ ಅವರ ಕಾಲಿಗೆ ಬಿದ್ದಿದೆ. ತಕ್ಷಣ ಅವರನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡೇಟಿನಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
ವೈದ್ಯರು ನಿಶಾ ಉಪಾಧ್ಯಾಯ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಕಾಲಿನಿಂದ ಗುಂಡನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜನತಾ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.