
ಶಾಲಾ ಬಸ್ ಹರಿದು 7 ವರ್ಷದ ಶಾಲಾ ವಿದ್ಯಾರ್ಥಿನಿ ಸಾವು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಲಾ ಬಸ್ ವಿದ್ಯಾರ್ಥಿನಿ ಮೇಲೆ ಹರಿದು 7 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ತಾವರೆಕೆರೆಯಲ್ಲಿ ಜರುಗಿದೆ. ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ, ಎಂಇಎಸ್ ಶಾಲೆಯ ವಿದ್ಯಾರ್ಥಿನಿ ಸ್ಮಿತಾ(7) ಮೃತ ಬಾಲಕಿ. ಶಾಲೆಯಿಂದ ಮನೆಗೆ ವಾಪಸ್ ಹೋಗಲು ಬಸ್ನಿಂದ ಇಳಿದ ವೇಳೆ ಮನೆ ಮುಂದೆಯೇ ಬಾಲಕಿ ಮೇಲೆ ಶಾಲಾ ಬಸ್ ಹರಿದಿದ್ದು ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಎಂಇಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಡ್ರೈವರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.