
ಮಮತ ಎನ್ನುವ ಮಹಿಳೆ ಕೋರ್ಟ್ ಗೆ ಹೋಗುವುದಾಗಿ ಹೇಳಿ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ತುಮಕೂರು: A woman named Mamata disappeared after saying she was going to court.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ೩೬ ವರ್ಷದ ಮಮತ ಎಂಬ ಮಹಿಳೆಯು ಕಾಣೆಯಾಗಿದ್ದು, ಈಕೆಯ ಮಗ ದರ್ಶನ್ ಅವರು ತನ್ನ ತಾಯಿ ಸುಮಾರು ೧ ವರ್ಷದ ಹಿಂದೆ ಕೋರ್ಟ್ಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ನವೆಂಬರ್ ೮, ೨೦೨೩ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈಕೆಯು ಸುಮಾರು ೫ ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. ೦೮೧೩೩-೨೬೭೨೩೪, ೦೮೧೩೪-೨೫೧೦೮೪, ೦೮೧೬-೨೨೭೮೦೦೦, ಮೊ.ಸಂ. ೯೪೮೦೮೦೨೯೭೧-೩೯ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.