
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 15 ಸಾವಿರ ಭರ್ತಿ-ಗೃಹ ಸಚಿವ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 15 ಸಾವಿರ ಹುದ್ದೆಗಳ ಭರ್ತಿಗೆ ಚಿಂತನೆ ನಡೆದಿದ್ದು ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಚಿತ್ರದುರ್ಗದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಖಾಲಿ ಹುದ್ದೆಗಳ ಭರ್ತಿ ವಿಳಂಬ ಆಗುತ್ತಿದೆ. PSI ಹಗರಣದಿಂದ ಗೊಂದಲ ಉಂಟಾಗಿದ್ದು ಮರು ಪರೀಕ್ಷೆಗೆ ಈಗಾಗಲೇ ಸಿದ್ದತೆ ನಡೆದಿದೆ. 1000 ಪಿಎಸ್ಐ ಹುದ್ದೆಗಳನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಸಿದ್ದವಿದೆ. 3000 ಸಾವಿರ ಪೊಲೀಸ್ ಪೇದೆ ಹುದ್ದೆಗೆ ನೇಮಕಾತಿಗೆ ತಯಾರಿ ನಡೆಸುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.DCRE ಸೆಲ್ ಗಳಿಗೆ ನಾವು ದೂರು ಸ್ವೀಕರಿಸಲು ಅಧಿಕಾರ ನೀಡಿದ್ದೇವೆ.ಮುರುಘಾ ಶ್ರೀ ಕೇಸ್ ವಿಚಾರವಾಗಿ ಕೋರ್ಟ್ ನೀಡಿರುವ ಆದೇಶವನ್ನು ಚಾಚು ತಪ್ಪದೇ ಪಾಲಿಸುತ್ತೇವೆ. ಕೋರ್ಟ್ ನಲ್ಲಿ ವಿಷಯ ಇರುವುದರಿಂದ ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು.CM ಪಟಾಲಂ ನನ್ನ ಕಳ್ಳನಾಗಿ ಮಾಡುತ್ತಿದ್ದಾರೆ ಎಂಬ HDK ಹೇಳಿಕೆ ವಿಚಾರ ಕುರಿತು ಮಾತನಾಡಿ ಪರಮೇಶ್ವರ್, ಸಿಎಂ ಆಗಿ ಎರಡು ಬಾರಿ ಕುಮಾರಸ್ವಾಮಿ ಕೆಲಸ ಮಾಡಿದ್ದಾರೆ. ಟೀಕೆ ಟಿಪ್ಪಣಿ ಮಾಡಲಿ ನಾವು ಬೇಡ ಎಂದು ಹೇಳಲ್ಲ.ಸಲಹೆ ಬೇಕು ನೀಡಲಿ, ಸುಖಾ ಸುಮ್ಮನೆ ನಮ್ಮ ಪ್ರತಿಕ್ರಿಯೆ ಇರಲ್ಲ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಅರೆಬೆಂದ ಯೋಜನೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಸಾವಿರಾರು ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ ನೇರವಾಗಿ ಜನರಿಗೆ ನೀಡಿದ್ದೇವೆ.ನಮಗೆ ರಾಜಕೀಯ ನಾಯಕರ ಸರ್ಟಿಫಿಕೇಟ್ ಬೇಕಾಗಿಲ್ಲ. ಸಮುದಾಯದ ಸರ್ಟಿಫಿಕೇಟ್ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ ಎಂದು ಅವರು ತಿಳಿಸಿದರು.