
ಪೋಕ್ಸೋ ಆರೋಪಿ ಮುರುಘಾ ಶರಣರ ಮತ್ತೆ ಬಂಧನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ/ದಾವಣಗೆರೆ:
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾರಾಗೃಹದಲ್ಲಿದ್ದ ಮುರುಘಾ ಶರಣರನ್ನು ಹೈ ಕೋರ್ಟ್ ಜಾಮೀನಿನ ಮೇಲೆ ಕಳೆದ ನವೆಂಬರ್.16ರಂದು ಬಿಡುಗಡೆ ಮಾಡಲಾಗಿತ್ತು. ಈ ಬಿಡುಗಡೆ ಕೇವಲ ಪೋಕ್ಸೋ ಮೊದಲನೇ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದರು.
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ 2ನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆಯುವ ಮುನ್ನವೇ ಮುರುಘಾ ಶರಣರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ 2ನೇ ಪೋಕ್ಸೋ ಪ್ರಕರಣದಲ್ಲಿ ಶರಣರಿಗೆ ಜಾಮೀನು ಲಭ್ಯವಾಗಿರಲಿಲ್ಲ. ಅಲ್ಲದೆ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದುದರಿಂದಾಗಿ ಸೋಮವಾರ ಮತ್ತೆ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿ ಕರೆದಿದ್ದಾರೆ. ಜಾಮೀನು ಪಡೆದು ಬಿಡುಗಡೆಯಾಗಿದ್ದ 4 ದಿನಗಳಲ್ಲೇ ಮತ್ತೆ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಚಿತ್ರದುರ್ಗದ ಕೋರ್ಟ್ ಎದುರು ಮುರುಘಾ ಸ್ವಾಮಿ ಹಾಜರು ಪಡಿಸಿದ ಪೊಲೀಸರು.
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎದುರು ಪೋಕ್ಸೋ ಆರೋಪಿ
ಮುರುಘಾ ಶರಣರನ್ನು ಹಾಜರು ಪಡೆಸುತ್ತಿದ್ದಂತೆ ನ್ಯಾಯಾಧೀಶಕರು 14ದಿನ ನ್ಯಾಯಾಂಗ ಬಂಧನ ವಿಧಿಸಿದ ಆದೇಶ ನೀಡಿದರು. ಅಂದರೆ ಡಿಸೆಂಬರ್ 02 -2023 ವರೆಗೆ ನ್ಯಾಯಾಂಗ ಬಂಧನಕ್ಕೆ ಜಿಲ್ಲಾ ಕೋರ್ಟ್ ಆದೇಶ ಮಾಡಿತು. ಮುರುಘಾ ಶರಣರಿಗೆ ಜಿಲ್ಲಾ ಕೋರ್ಟ್ 14ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಬಳಿಕ ಜಿಲ್ಲಾಸ್ಪತ್ರೆಗೆ ಮುರುಘಾ ಶರಣರನ್ನು ಕರೆತಂದು ಡಾ.ಸತೀಶ್ ನೇತೃತ್ವದಲ್ಲಿ ಮುರುಘಾ ಶರಣರಿಗೆ ಆರೋಗ್ಯ ತಪಾಸಣೆ ಮಾಡಿದ
ಬಳಿಕ ಜೈಲಿಗೆ ಕಳುಹಿಸಲಾಯಿತು.
ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜೀತೇಂದ್ರ ಹಾಗೂ ಮುರುಘಾ ಶರಣರ ಪರ ವಕೀಲ ಪ್ರತಾಪ್ ಜೋಗಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, 2 ಪೋಕ್ಸೋ ಪ್ರಕರಣಕ್ಕೆ ಚಿತ್ರದುರ್ಗ ನ್ಯಾಯಾಲಯದ ಆದೇಶದಂತೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರು ಮಾಡಿದ್ದರು. ಚಿತ್ರದುರ್ಗ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಆದರೆ ಈ ಕುರಿತು ಹೈಕೋರ್ಟನಲ್ಲಿ ಆದೇಶ ರದ್ದು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಚಿತ್ರದುರ್ಗ ಕೋರ್ಟ್ ನೀಡಿರುವ ಆದೇಶವನ್ನ ಹೈಕೋರ್ಟ್ ರದ್ದು ಮಾಡಿದೆ.
ಆದೇಶದಲ್ಲಿ ಈ ಕೂಡಲೇ ಮುರುಘಾ ಶರಣರನ್ನ ಬಿಡಲು ಮಾಡಲು ಸೂಚಿಸಿದ್ದು
ಇ-ಮೇಲ್ ಮೂಲಕ ಜೈಲಿಗೆ ಆದೇಶವನ್ನ ಹೈಕೋರ್ಟ್ ಕಳಿಸಿಕೊಡಲಿದೆ.
ಸದ್ಯ ಆದೇಶದ ಪ್ರತಿ ಇನ್ನೂ ಬಂದಿಲ್ಲ, ಆದೇಶ ಬಂದರೆ ಈಗಲೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಇಲ್ಲವಾದರೆ ನವೆಂಬರ್-21 ರಂದು ಬೆಳಗ್ಗೆ ಬಿಡುಗಡೆ ಆಗಲಿದ್ದಾರೆಂದು ವಕೀಲರಾದ ಪ್ರತಾಪ್ ಜೋಗಿ ತಿಳಿಸಿದರು.
ಏನು ಪ್ರಕರಣ-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ 14 ತಿಂಗಳುಗಳಿಂದ ಜೈಲಿನಲ್ಲಿದ್ದರು. 14 ತಿಂಗಳ ನಂತರ ಹೈಕೋರ್ಟ್ ಆರೋಪಿ ಮುರುಘಾ ಶರಣರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಆ ಜಾಮೀನಿನ ಮೇಲೆ ನವೆಂಬರ್-16 ರಂದು ಬಿಡುಗಡೆ ಮಾಡಲಾಗಿತ್ತು.
ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಮುರುಘಾ ಶರಣರನ್ನು 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಪಾಲಿಸದೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಿದ್ದರು. ಇದನ್ನು ಸರ್ಕಾರಿ ವಕೀಲರು ಪ್ರಶ್ನಿಸಿದ್ದರು. ಜೊತೆಗೆ ಆದೇಶ ಉಲ್ಲಂಘನೆ ಸಂಬಂಧ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು.
ಸರ್ಕಾರಿ ವಕೀಲರ ಆಕ್ಷೇಪದ ನಂತರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ ಮುರುಘಾ ಶರಣರನ್ನು 2ನೇ ಪೋಕ್ಸೋ ಪ್ರಕರಣದಲ್ಲಿ ಬಂಧಿಸಿದ್ದನ್ನು ಸ್ಮರಿಸಬಹುದಾಗಿದೆ.