Month: February 2024

ಫೆ.02 ರಿಂದ 04 ರವರೆಗೆ ಫಲ-ಪುಷ್ಪ ಪ್ರದರ್ಶನ– ಸಿಇಒ ಸೋಮಶೇಖರ್… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಚಿತ್ರದುರ್ಗ ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ...
ಪತ್ರಕರ್ತರ ಧ್ವನಿಯ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ… ಚಂದ್ರವಳ್ಳಿ ನ್ಯೂಸ್, ನೆಲಮಂಗಲ:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಾರ್ಚ್ 24ರಂದು ನಡೆಯುವ ಕರ್ನಾಟಕ...
ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಅಧಿಕಾರಿಗಳು ಬದ್ದರಾಗಿರಬೇಕು: ಸಿಎಂ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆಗೆ ಮತ್ತು ಸಂವಿಧಾನಕ್ಕೆ ಪೂರ್ತಿ ಬದ್ದರಾಗಿರಬೇಕು,...
ಏಮ್ಸ್(AIIMS) ಸ್ಥಾಪನೆಗೆ ಕೇಂದ್ರದ ಮನವೊಲಿಸಿ: ಸಚಿವ ಭೋಸರಾಜು… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ರಾಯಚೂರು ನಗರದಲ್ಲಿ ಏಮ್ಸ್ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರಕಾರದ ಮೇಲೆ...
ಪ್ರಗತಿ ಮೊಬೈಲ್ ಅಪ್ಲಿಕೇಶನ್‍ಗೆ ಚಾಲನೆ ನೀಡಿದ ಸಿದ್ದರಾಮಯ್ಯ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳಲ್ಲಿ ಅನುಷ್ಠಾನವಾಗುವ ಯೋಜನೆಗಳ ಕ್ಷೇತ್ರ ಮಟ್ಟದ...
ತಾಂಡಾ ನಿಗಮಕ್ಕೆ 500 ಕೋಟಿ, ಲಮಾಣಿಗೆ ಸಚಿವ ಸ್ಥಾನ ನೀಡಿ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿರುವ ಬಂಜಾರ ಸಮಾಜವನ್ನು  ಕಾಂಗ್ರೇಸ್ ಸರ್ಕಾರ ಕಡೆಗಣಿದೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ 500 ಕೋಟಿಗಳ ಅನುದಾನ ನೀಡಬೇಕು, ರುದ್ರಪ್ಪ ಲಮಾಣಿರವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕು  ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಅರ್ ಒತ್ತಾಯಿಸಿದ್ದಾರೆ.  ಕಳೆದ ವಿಧಾನಸಭೆಯಲ್ಲಿ ಶೇ 90% ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲಂಬಾಣಿ ಸಮುದಾಯವರು ಚಲಾಯಿಸಿದ್ದರು. ಸುಮಾರು 70ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಜಾರ ಸಮುದಾಯದ ಮತಗಳು ನಿರ್ಣಾಯಕವಾಗಿ ಬೆಂಬಲವನ್ನು ಸೂಚಿಸಿವೆ ಆದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಬಂಜಾರ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ನೀಡಿಲ್ಲ ಕೂಡಲೇ ಸರ್ಕಾರ ಈಡೇರಿಸುವಂತೆ ಒತ್ತಾಯಿಸಿದ್ದಾರೆ..  ಬಂಜಾರ ಸಮುದಾಯದ ಕಾಂಗ್ರೇಸ್ ಪಕ್ಷದ ಏಕೈಕ ಶಾಸಕರು ವಿಧಾನಸಭಾ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿರವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಹಿಂದೆ ಆಶ್ವಾಸನೆ ನೀಡಿದಂತೆ ಬಂಜಾರ ಸಮಾಜದ ಅರ್ಹ ವ್ಯಕ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕ ಮಾಡಬೇಕು ಎಂದು ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದ್ದಾರೆ. ಸಾಮಾಜಿಕ ನ್ಯಾಯದಡಿಯಲ್ಲಿ ಬಂಜಾರ ಸಮಾಜದ ಇಬ್ಬರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಬೇಕು ಬಂಜಾರ ಸಮಾಜದ ಅರ್ಹರಿಗೆ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಿಸಬೇಕು ಹಾಗೂ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ವಿವಿಧ ನಿಗಮ/ಮಂಡಳಿಗಳಲ್ಲಿ ನಾಮನಿರ್ದೇಶನವನ್ನು ಮಾಡಬೇಕೆಂದು ಎಂದು ಹೇಳಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಎ.ಆರ್. ಗೋವಿಂದಸ್ವಾಮಿ, ಸುಧೀ ಅಂಗಡಿ ಭಾಗವಹಿಸಿದ್ದರು.