ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ನಾನು ಎಂದು ಮೆರೆಯುತ್ತಿರುವ ಮುಡಾರಾಮಯ್ಯ ಪ್ರಭಾವಬೀರಿಯೇ ಪತ್ನಿಗೆ 14 ಸೈಟು ಮಂಜೂರು ಮಾಡಿಸಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟುಗಳ ಹಂಚಿಕೆಯಲ್ಲಿ ಅಕ್ರಮಗಳ ಸರಮಾಲೆಯೇ ನಡೆದಿದೆ. ಜೊತೆಗೆ ಸುಮಾರು 700 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ. ಬಹುಕೋಟಿ ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ED) ಹಲವು ಸ್ಫೋಟಕ ಮಾಹಿತಿಯನ್ನು ಹೆಕ್ಕಿ ಹೊರ ತೆಗೆದಿದೆ ಎಂದು ಜೆಡಿಎಸ್ ತಿಳಿಸಿದೆ.
ಇ.ಡಿ ತನಿಖೆ ಮತ್ತು ಕಾನೂನಿನ ಸುರುಳಿ ಬಿಗಿಯಾಗುತ್ತಿದ್ದಂತೆ ಭ್ರಷ್ಟರಾಮಯ್ಯ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸಮಾವೇಶದ ನೆಪದಲ್ಲಿ ಸದಾರಮೆ ನಾಟಕ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ನಿಮ್ಮ ತೆರೆಯದ ಪುಸ್ತಕದಲ್ಲಿ ಮತ್ತೆಷ್ಟು ಉಳುಕುಗಳಿವೆಯೋ ?, ಮುಡಾ ಅಕ್ರಮಗಳ “ಸಿದ್ಧ”ರೂವಾರಿ ರಾಮಯ್ಯ, ಸುಳ್ಳುಗಳ ಸರದಾರ ಭ್ರಷ್ಟ ಸಿದ್ದರಾಮಯ್ಯ ನ ಕಳ್ಳಾಟಗಳು ಬಯಲಾಗುತ್ತಿದೆ. ತಾನು ಮಹಾನ್‌ಸಾಚಾ, ಶುದ್ಧ ಹಸ್ತ ಎಂದು ಸಮಾಜವಾದಿ ಪೋಸು ಕೊಡುವ ಭ್ರಷ್ಟರಾಮಯ್ಯನ ಕಪ್ಪು ಚುಕ್ಕೆಗಳು ನೂರಾರಿವೆ ಎಂದು ಜೆಡಿಎಸ್ ಆರೋಪಿಸಿದೆ.

