Health

ಶ್ರೀತುಪ್ಪದಮ್ಮ ದೇವಿಯ ಸಿಡಿ ಆಡುತ್ತಿದ್ದ ವ್ಯಕ್ತಿ ಸಾವಿ… ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು: The man who was playing Srithuppadamma Devi’s CD...
ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು : ಕಲ್ಲುತೂರಾಟ… ಚಂದ್ರವಳ್ಳಿ ನ್ಯೂಸ್, ಚನ್ನಗಿರಿ :  ಮಟ್ಕಾ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಕರೆ ತಂದಿದ...
ನಡುರಸ್ತೆಯಲ್ಲೇ ಹೊಡೆದಾಡಿದ ರೌಡಿಗಳು ಚಂದ್ರವಳ್ಳಿ ನ್ಯೂಸ್, ಉಡುಪಿ :  ಉಡುಪಿ-ಮಣಿಪಾಲ ರಸ್ತೆಯ ನಡು ರಸ್ತೆಯಲ್ಲಿಯೇ ಗ್ಯಾಂಗ್ ವಾರ್ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು...
ಮೊಬೈಲ್ ಸಹವಾಸ ಬಿಡು ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :  ಬಾಳೆಹೊನ್ನೂರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ವರದಿಯಾಗಿದೆ....
ಬ್ಯೂಟಿ ಪಾರ್ಲರ್ ಅಕ್ಷತಾ ಆತ್ಮಹತ್ಯೆ… ಚಂದ್ರವಳ್ಳಿ ನ್ಯೂಸ್, ಸೊರಬ :  ಗೃಹಿಣಿಯೋರ್ವಳು ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದ ವಿದ್ಯುತ್ ನಗರದಲ್ಲಿ...
ಅಡುಗೆ ಮನೆಗೆ ನುಗ್ಗಿದ ಕಾಳಿಂಗ ಸರ್ಪ… ಚಂದ್ರವಳ್ಳಿ ನ್ಯೂಸ್, ಎನ್ ಆರ್ ಪುರ :  ತಾಲ್ಲೂಕಿನ ಶೆಟ್ಟಿಕೊಪ್ಪದ ಮನೆಯೊಂದರ ಅಡುಗೆ ಕೋಣೆಗೆ ಕಾಳಿಂಗ ಸರ್ಪವೊಂದು...
ಗೋಲಿಬಾರ್ ನಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ… ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ನಾಗಸಮುದ್ರದಲ್ಲಿ ಗೋಲಿಬಾರ್ ನಲ್ಲಿ ಹುತಾತ್ಮರಾದ 42ನೇ...
2024-25ನೇ ಸಾಲಿನ GTTC ಪ್ರವೇಶಗಳಿಗೆ ಅರ್ಜಿ ಆಹ್ವಾನ… ಚಂದ್ರವಳ್ಳಿ ನ್ಯೂಸ್, ತುಮಕೂರು:  GTTC ತುಮಕೂರು ಕೇಂದ್ರದಲ್ಲಿ 2024-25ನೇ ಸಾಲಿನ ಪ್ರವೇಶಗಳು ಪ್ರಾರಂಭಗೊಂಡಿದ್ದು ಆಸಕ್ತ...
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ವಿದೇಶಿ ಶಿಕ್ಷಣ… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಹಯೋಗವನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ವು ನಿಯಮಾವಳಿ 2023 ರ ಪ್ರಕಾರ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಶೈಕ್ಷಣಿಕ ಸಹಯೋಗವು ಅವಳಿ, ಜಂಟಿ ಪದವಿ ಮತ್ತು ಉಭಯ ಪದವಿ ಕಾರ್ಯಕ್ರಮಗಳನ್ನು (Twinning, Joint Degree and Dual Degree Programmes) ನೀಡುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಗುರುತರವಾದಂತಹ ಶೈಕ್ಷಣಿಕ ಹಾಗೂ ಸಂಶೋಧನೆಯನ್ನು ಹೊಂದಿರುವ ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿ, ಅಂತಹ ವಿಶ್ವವಿದ್ಯಾನಿಲಯಗಳು ಹೊರ ದೇಶದ ಇತರೆ ವಿಶ್ವವಿದ್ಯಾನಿಲಯಗಳೊಂದಿಗೆ ಜಂಟಿಯಾಗಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳವ ಉದ್ದೇಶದಿಂದ ಭಾರತ ದೇಶದಾದ್ಯಂತ 234 ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿದೆ.  ಅವುಗಳಲ್ಲಿ ಕರ್ನಾಟಕದಿಂದ 12 ಖಾಸಗಿ ವಿಶ್ವವಿದ್ಯಾನಿಲಯಗಳು ಹಾಗೂ 9 ಸರ್ಕಾರಿ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿದೆ. 9 ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವೂ ಸಹ ಸ್ಥಾನವನ್ನು ಪಡೆದಿದ್ದು ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣಕ್ಕೆ ನೀಡಿರುವ ಉತ್ಕೃಷ್ಠವಾದ ಕೊಡುಗೆಯಾಗಿದೆ. ಮತ್ತೊಂದು ವಿಶಿಷ್ಠತೆಯೆಂದರೆ ಇಡೀ ದೇಶದಲ್ಲಿ 4 ಕೃಷಿ ವಿಶ್ವವಿದ್ಯಾನಿಲಯಗಳು ಮಾತ್ರ ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಅದರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವೂ ಒಂದಾಗಿದೆ ಹಾಗೂ ಕರ್ನಾಟಕದಲ್ಲಿ ಸ್ಥಾನ ಪಡೆದಿರುವ ಏಕೈಕ ಕೃಷಿ ವಿಶ್ವವಿದ್ಯಾನಿಲಯವೆಂಬ ಹೆಗ್ಗಳಿಕೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪಾತ್ರವಾಗಿದೆ.  ಭಾರತದ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ವಿನಿಮಯ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕಲಿಕೆಯ ಅರ್ಧಭಾಗವನ್ನು ಭಾರತದಲ್ಲಿ ಕೈಗೊಂಡು ಇನ್ನುಳಿದ ಅರ್ಧಭಾಗವನ್ನು ವಿದೇಶದಲ್ಲಿ ಪೂರ್ಣಗೊಳಿಸಬಹುದು. ಒಂದೇ ವಿಷಯದಲ್ಲಿ ವಿದೇಶಿ ಹಾಗೂ ಭಾರತದ ವಿವಿಗಳು ಜಂಟಿ ಪದವಿ ನೀಡಬಹುದು ಅಥವಾ ಪ್ರತ್ಯೇಕವಾಗಿ ಪದವಿ ಪ್ರಮಾಣ ಪತ್ರವನ್ನು ನೀಡಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ವ್ಯಾಸಂಗ ಮಾಡುವುದು ತಪ್ಪುತ್ತದೆ ಅಥವಾ ಭಾರತದಲ್ಲೇ ಪ್ರವೇಶ ಪಡೆದು ವಿದೇಶದಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....