LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ಆಕ್ರೋಶ 

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು: 
ಕರ್ನಾಟಕ ಲೋಕಸೇವಾ ಆಯೋಗದ (
KPSC) ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ನಿಯಂತ್ರಿಸುವ ಬದಲು ಭ್ರಷ್ಟರೊಂದಿಗೆ ಪಾಲುದಾರಿಕೆ ನಡೆಸುತ್ತಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ. 

​ನೇಮಕಾತಿಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಅವ್ಯವಹಾರಗಳಿಂದಾಗಿ ಆಯೋಗದ ಮೇಲೆ ಸಾರ್ವಜನಿಕರು ಹಾಗೂ ಉದ್ಯೋಗಾಕಾಂಕ್ಷಿಗಳು ಶೇ. 1ರಷ್ಟು ನಂಬಿಕೆಯನ್ನೂ ಇಡದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

​ಕೋಟಿ ಕೋಟಿ ಲಂಚದ ಬೇಡಿಕೆ: ಇತ್ತೀಚೆಗೆ ಪಶು ವೈದ್ಯಕೀಯ ಅಧಿಕಾರಿ ಹುದ್ದೆಗೆ 80 ಲಕ್ಷ ರೂಪಾಯಿ ಲಂಚದ ಡಿಮಾಂಡ್ ಮಾಡಲಾಗಿದ್ದ ವಿಷಯ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ (KAS) ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಿದ್ದಿದೆ. ಕೆಎಎಸ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. 

​ಭ್ರಷ್ಟರ ಜೊತೆ ಸರ್ಕಾರ ಪಾರ್ಟ್‌ನರ್‌ಶಿಪ್: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಬದಲಿಗೆ ಭ್ರಷ್ಟರ ಜೊತೆಗೆ ಪಾಲುದಾರಿಕೆ ನಡೆಸುತ್ತಾ, ಅವ್ಯವಹಾರಗಳಿಗೆ ಮುಕ್ತ ಲೈಸೆನ್ಸ್ ನೀಡಿದೆ. 

​ಎಗ್ಗಿಲ್ಲದೆ ಸಾಗಿರುವ ಅವ್ಯವಹಾರ: ಸರ್ಕಾರದ ಈ ಧೋರಣೆಯ ಪರಿಣಾಮವಾಗಿಯೇ ಕೆಪಿಎಸ್‌ಸಿಯಲ್ಲಿ ಯಾವುದೇ ಭಯವಿಲ್ಲದೆ ಸಾಲು ಸಾಲು ಅಕ್ರಮಗಳು ಮುಂದುವರಿಯುತ್ತಿದ್ದು, ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಲಕಿಯರ ವೃತ್ತಿಪರ ಕಾಲೇಜು ವಿದ್ಯಾರ್ಥಿನಿಯರಿಗೆ ಬುದ್ದನ ಕಂಚಿನ ವಿಗ್ರಹಗಳ ವಿತರಣೆನೂತನ ಸಚಿವ ಟಿ.ರಘುಮೂರ್ತಿವರಿಗೆ ಹೂವಿನ ಮಳೆ ಸುರಿಸಿ ಸ್ವಾಗತಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆನಾಪಿ ಕುಸಿತ: ವಿದ್ಯುತ್‌ ಇಲ್ಲದೆ, ಸೊಳ್ಳೆಗಳ ಕಾಟಕ್ಕೆ ಕತ್ತಲಲ್ಲಿ ಬಾಣಂತಿಯರ ಪರದಾಟ!ಹೂಗಳಿಂದ ಅರಳಿದೆ ಗಂಗರ ಸಾಮ್ರಾಜ್ಯದ ಇತಿಹಾಸ: ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂಸಿಎಂ ಶಿವಕುಮಾರ್‌ ಭೇಟಿಯಾದ ಸರ್ಕಾರಿ ಮಹಿಳಾ ನೌಕರರ ನಿಯೋಗ: ಸ್ವಚ್ಛ ಇಂಧನ ಕ್ರಾಂತಿಗೆ ಉಕ್ಕು ಬೆನ್ನೆಲುಬು: ಅಂತಾರಾಷ್ಟ್ರೀಯ ಇಂಧನ ಸಮ್ಮೇಳನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಪಾದನೆ ಸರ್ಕಾರದ ವೈಫಲ್ಯಗಳ ವಿರುದ್ಧ ಎನ್‌ಡಿಎ ಕಾದಾಟ: ಕುಮಾರಸ್ವಾಮಿ-ಬೊಮ್ಮಾಯಿ, ಅಶೋಕ್ ಸಮಾಲೋಚನೆಪ್ರಮಾಣ ವಚನ ಮುಗಿದು 3 ದಿನವಾದರೂ ಖಾತೆ ಹಂಚಿಕೆಯಿಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್‌. ಅಶೋಕ್ ವಾಗ್ದಾಳಿಕೆಪಿಎಸ್‌ಸಿ ಭ್ರಷ್ಟಾಚಾರದ ಕೂಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ಆಕ್ರೋಶ ಸಚಿವ ಸ್ಥಾನ ‘ಪೇಮೆಂಟ್ ಸೀಟ್’: ಸಿ.ಟಿ. ರವಿ ಗಂಭೀರ ಆರೋಪ